'ಗೂಗ್ಲಿ' ಬೆಡಗಿ ಕೃತಿ ಕರಬಂಧ ಮದುವೆ

Sumana Upadhyaya

'ಗೂಗ್ಲಿ' ಬೆಡಗಿ ಕೃತಿ ಕರಬಂಧ ವಿವಾಹ ಅವರ ಬಾಯ್ ಫ್ರೆಂಡ್ ಪುಲ್ಕಿತ್ ಸಾಮ್ರಾಟ್ ಜೊತೆಗೆ ದೆಹಲಿಯ ಐಷಾರಾಮಿ ಹೊಟೇಲ್ ಐಟಿಸಿ ಗ್ರಾಂಡ್ ಭಾರತ್ ನಲ್ಲಿ ಹಿಂದೂ ಸಂಪ್ರದಾಯ ಪ್ರಕಾರ ನೆರವೇರಿದೆ.

ಮದುವೆಯ ಸಂತೋಷದ ಕ್ಷಣಗಳ ಫೋಟೋಗಳನ್ನು ಕೃತಿ ಕರಬಂಧ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಗುಲಾಬಿ ಬಣ್ಣದ ರಾಜಸ್ತಾನ ಶೈಲಿನ ಗೊಟಾ ಕಸೂತಿಯ ಸತ್ರಂಗಾ ಲೆಹಂಗಾ ಮತ್ತು ಆಭರಣ ತೊಟ್ಟು ಮದುಮಗಳು ಕೃತಿ ಮಿಂಚಿದರೆ, ನೀಲಿಬಣ್ಣದ ಹಸಿರು ಬಣ್ಣದ ಚಂದೇರಿ ಶೈಲಿಯ ರೇಷ್ಮೆ ಅಂಗರಕಾ ಶೆರ್ವಾನಿಯಲ್ಲಿ ಮದುಮಗ ಪುಲ್ಕಿತ್ ಕಂಗೊಳಿಸಿದ್ದಾರೆ.

ಜೋಡಿಯ ಫೋಟೋಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಕೃತಿ ಹಾಗೂ ಪುಲ್ಕಿತ್ ದೆಹಲಿಯಲ್ಲಿ ಹುಟ್ಟಿ ಬೆಳೆದವರು. ಈ ಕಾರಣಕ್ಕೆ ದೆಹಲಿಯಲ್ಲೇ ಮದುವೆಯಾಗಿದ್ದು, ಮದುವೆಗೂ ಪೂರ್ವದ ಕಾರ್ಯಗಳಾದ ಸಂಗೀತ್, ಮೆಹಂದಿ ಕಾರ್ಯಕ್ರಮಗಳು ಕೂಡ ನೆರವೇರಿವೆ.

ಪುಲ್ಕಿತ್ ಹಾಗೂ ಕೃತಿ ‘ಪಾಗಲ್​ಪಂತಿ’ ಸಿನಿಮಾದಲ್ಲಿ ಭೇಟಿ ಆಗಿ ಪರಸ್ಪರ ಪರಿಚಯವಾಗಿ ನಂತರ ಅದು ಪ್ರೀತಿಗೆ ತಿರುಗಿತು. ಈ ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

ಕೃತಿ ಕರಬಂಧ ಅವರು 2009ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 2010ರಲ್ಲಿ ಕನ್ನಡದ ‘ಚಿರು’ ಸಿನಿಮಾದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಯವಾದರು.

2013ರಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ನಟಿಸಿದ ಗೂಗ್ಲಿ ಚಿತ್ರ ಹೆಸರು ತಂದುಕೊಟ್ಟಿತು.

ಕೃತಿ ಕರಬಂಧ-ಪುಲ್ಕಿತ್ ಸಾಮ್ರಾಟ್ ಜೋಡಿ

ಅನಂತ್-ರಾಧಿಕಾ ಪ್ರಿ-ವೆಡ್ಡಿಂಗ್ ಕಾರ್ಯಕ್ರಮ