ನಾವು ಗುಟ್ಟಾಗಿ ಮದುವೆ ಆಗಿಲ್ಲ, ಅದು ಬರೀ ಎಂಗೇಜ್ಮೆಂಟ್: ನಟಿ ಅದಿತಿ ರಾವ್‌ ಸ್ಪಷ್ಟನೆ

Vishwanath S

ಜನಪ್ರಿಯ ನಟ ಸಿದ್ಧಾರ್ಥ್‌ ಮತ್ತು ನಟಿ ಅದಿತಿ ರಾವ್‌ ಹೈದರಿ ಇಂದು ಗುಟ್ಟಾಗಿ ವಿವಾಹವಾಗಿದ್ದಾರೆ ಎಂದು ಸುದ್ದಿಯಾಗಿತ್ತು.

ಶ್ರೀರಂಗಪುರ್‌ನ ರಂಗನಾಥ ಸ್ವಾಮಿ ದೇಗುಲದ ಮಂಟಪದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ ಇದಕ್ಕೆ ನಟಿ ಅದಿತಿ ರಾವ್ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾವು ಇನ್ನು ಮದುವೆಯಾಗಿಲ್ಲ. ಸದ್ಯಕ್ಕೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಸಿದ್ಧಾರ್ಥ್, ಅದಿತಿ ಅವರಿಗೆ ಶುಭಕೋರಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಅಂದಹಾಗೆ ಇಬ್ಬರಿಗೂ ಇದು ಎರಡನೇ ಮದುವೆ. ಇಬ್ಬರೂ ವಿಚ್ಛೇದನ ಪಡೆದಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿದ್ದಾರೆ.

ಅದಿತಿ ಈ ಮೊದಲು ನಟ ಸತ್ಯದೀಪ್ ಮಿಶ್ರಾ ಎನ್ನುವರನ್ನು ಮದುವೆಯಾಗಿದ್ದರು. 2012ರಲ್ಲಿ ಇವರಿಬ್ಬರ ವಿಚ್ಛೇದನವಾಗಿತ್ತು.

ನಟ ಸಿದ್ಧಾರ್ಥ್ 2003ರಲ್ಲಿ ಮೇಘನಾ ಎಂಬುವರನ್ನು ಮದುವೆಯಾಗಿದ್ದರು. 2007ರಲ್ಲಿ ಅವರಿಂದ ದೂರವಾಗಿದ್ದರು.