Social Mediaದಲ್ಲಿ ನಟಿ Jyothi Rai ಖಾಸಗಿ ವಿಡಿಯೋ ಸರ್ಚ್ ಹೆಚ್ಚಳ!

Vishwanath S

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರ ನಡುವೆ ಮತ್ತೊಂದು ಖಾಸಗಿ ವಿಡಿಯೋ ವೈರಲ್ ಆಗಿದ್ದು ಈ ಬಾರಿ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.

ಕನ್ನಡದ ಕಿರುತೆರೆ ನಟಿ ಜ್ಯೋತಿ ರೈ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ವೈರಲ್ ಆಗಿದೆ. ನಟಿ ಯಶಸ್ವಿ ತೆಲುಗು ಧಾರಾವಾಹಿ ಗುಪ್ಪೆಡಂತ ಮನಸು ಟಿವಿ ಧಾರಾವಾಹಿಯಲ್ಲಿ ಜಗತಿ ಮೇಡಮ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ನಿಜ ಜೀವನದಲ್ಲಿ ಇಂದಿನ ನಾಯಕಿಯರಿಗಿಂತ ಭಿನ್ನವಾಗಿ ಧಾರಾವಾಹಿಗಳಲ್ಲಿ ತಾಯಿ ಮತ್ತು ಚಿಕ್ಕಮ್ಮನ ಪಾತ್ರಗಳನ್ನು ವೃತ್ತಿಪರವಾಗಿ ನಿರ್ವಹಿಸುವ ಜ್ಯೋತಿ ರೈ, ತಮ್ಮ ಡ್ರೆಸ್ಸಿಂಗ್ ಮತ್ತು ಮಾಡರ್ನ್ ಫೋಟೋಶೂಟ್‌ಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

ಅಭಿ ಎಂಬ ಯೂಟ್ಯೂಬರ್ ಸಾರ್ವಜನಿಕವಾಗಿ ತನ್ನ X ಖಾತೆಯಲ್ಲಿ ಜ್ಯೋತಿ ರೈ ಅವರದ್ದು ಎಂದು ಖಾಸಗಿ ವೀಡಿಯೊಗಳನ್ನು ಹಂಚಿಕೊಂಡಿದ್ದಾನೆ. ಇದ್ದಕ್ಕಿದ್ದಂತೆ ಜ್ಯೋತಿ ರೈ ಅವರ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಈ ಘಟನೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಸಾಕಷ್ಟು ತೊಂದರೆಯಾಗುತ್ತಿದೆ. ಇಂತಹ ಕೃತ್ಯ ಎಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಟಿ ಜ್ಯೋತಿ ರೈ ಹಾಗೂ ಅಭಿಮಾನಿಗಳು ಆಗ್ರಹಿಸಿದ್ದಾರೆ.

ಅಭಿ ಎಡಿಟ್ ಎಂಬ ಪ್ರೊಫೈಲ್‌ನಿಂದ ಕೆಲವು ವಿಡಿಯೋಗಳು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ವೀಡಿಯೋದಲ್ಲಿ ನಟಿ ಜ್ಯೋತಿ ರೈ ನಿರ್ದೇಶಕರೊಬ್ಬರ ಜೊತೆ ತುಂಬಾ ಅನ್ಯೋನ್ಯವಾಗಿದ್ದಾರೆ.

ನಟಿ ಜ್ಯೋತಿ ರೈ ಖಾಸಗಿ ವಿಡಿಯೋಗಳು ಲೀಕ್ ಆಗಿವೆ ಎಂಬ ಸುದ್ದಿ ಹೊರಬೀಳುತ್ತಲೆ ಸಾಮಾಜಿಕ ಜಾಲತಾಣದಲ್ಲಿ ನಟಿಯ ಕುರಿತಂತೆ ಸರ್ಚಿಂಗ್ ಹೆಚ್ಚಾಗಿದೆ.