Aishwarya Rai Bachchan: ಕೇನ್ಸ್ 2024 ಫಿಲ್ಮ್​ ಫೆಸ್ಟಿವಲ್ ನಲ್ಲಿ ಮಾಜಿ ವಿಶ್ವಸುಂದರಿ

Sumana Upadhyaya

ಬಾಲಿವುಡ್ ಐಕಾನ್ ಐಶ್ವರ್ಯಾ ರೈ ಬಚ್ಚನ್ ಮತ್ತೊಮ್ಮೆ ಫ್ರಾನ್ಸ್ ನಲ್ಲಿ ಏರ್ಪಟ್ಟ ಕೇನ್ಸ್-2024 ಚಲನಚಿತ್ರೋತ್ಸವ ರೆಡ್ ಕಾರ್ಪೆಟ್ ನಲ್ಲಿ ಮಿಂಚಿದ್ದಾರೆ.

ಕಪ್ಪು, ಬಿಳಿ ಮತ್ತು ಗೋಲ್ಡನ್​ ಬಣ್ಣಗಳಿಂದ ವಿನ್ಯಾಸಗೊಂಡ ಗೌನ್​ ಧರಿಸಿ ಅವರು ಮಿಂಚಿದ್ದಾರೆ. ಸದ್ಯ ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಈ ಬಾರಿ 77 ನೇ ಕಾನ್ ಚಿತ್ರೋತ್ಸವದಲ್ಲಿ "ಮೆಗಾಲೋಪೊಲಿಸ್" ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಐಶ್ವರ್ಯಾ ಭಾಗವಹಿಸಿ ಆಕರ್ಷಕ ನೋಟದಿಂದ ನೋಡುಗರನ್ನು ಸೆಳೆದರು.

ಬಲಗೈ ನೋವಿನಿಂದ ಬಳಲುತ್ತಿರುವ ಐಶ್ವರ್ಯಾ ಬ್ಯಾಂಡೇಜ್ ಕಟ್ಟಿಕೊಂಡು ರೆಡ್ ಕಾರ್ಪೆಟ್ ನಲ್ಲಿ ಹೆಜ್ಜೆಹಾಕಿದ್ದು ನಟಿಯ ವೃತ್ತಿಪರತೆಗೆ ಪ್ರಶಂಸೆ ವ್ಯಕ್ತವಾಗಿದೆ. ಅವರು ಲೊ'ಒರಿಯಲ್ ಉತ್ಪನ್ನದ ರಾಯಭಾರಿಯಾಗಿ ಚಿತ್ರೋತ್ಸವದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಬಾರಿ ಕೂಡ ಅವರ ಪುತ್ರಿ ಆರಾಧ್ಯ ಬಚ್ಚನ್ ಜೊತೆಗಿದ್ದರು.

ಫಲ್ಗುಣಿ ಮತ್ತು ಶೇನ್ ವಿನ್ಯಾಸಗೊಳಿಸಿದ, ಬೃಹತ್ ಗೌನ್ ರಫಲ್ ಸ್ಲೀವ್‌ಗಳನ್ನು ಹೊಂದಿದೆ. ಗೌನ್ ಮುಂಭಾಗದಲ್ಲಿ ಆಕರ್ಷಕವಾದ ಗೋಲ್ಡನ್ ಮೋಟಿಫ್ ನ್ನು ಹೊಂದಿದ್ದು, ರೆಡ್ ಕಾರ್ಪೆಟ್‌ನಲ್ಲಿ ಐಶ್ವರ್ಯಾ ಅವರ ನೋಟ ಮನಸೂರೆಗೊಳ್ಳುತ್ತಿದೆ.

ಐಶ್ವರ್ಯಾ ರೈ ಮೊದಲ ಬಾರಿಗೆ ಕೇನ್ಸ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದು 2002ರಲ್ಲಿ. ಅದು ಬ್ಲಾಕ್ ಬಸ್ಟರ್ ಚಿತ್ರ ದೇವದಾಸದ ಪ್ರಚಾರದಲ್ಲಿ ನಟ ಶಾರೂಖ್ ಖಾನ್ ಜೊತೆಗೆ.

ಅಲ್ಲಿಂದೀಚೆಗೆ ಪ್ರತಿವರ್ಷ ಸತತ 21 ವರ್ಷಗಳಿಂದ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದು ಅವರು ಧರಿಸುವ ಉಡುಗೆ, ನೋಡುವ ನೋಟ, ಹಾಕುವ ಹೆಜ್ಜೆ ಭಾರೀ ಸದ್ದು ಮಾಡುತ್ತಾ ಬಂದಿದೆ.

ಐಶ್ವರ್ಯಾ ರೈ ಬಚ್ಚನ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos