ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಭಾರತೀಯರು ಈ ದೇಶಗಳಲ್ಲೂ ಕಾರು ಓಡಿಸಬಹುದು!

Vishwanath S

ಅಮೆರಿಕದಾದ್ಯಂತ ಅನೇಕ ರಾಜ್ಯಗಳು ಭಾರತದ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಭಾರತೀಯರು ಸಾಮಾನ್ಯವಾಗಿ ಒಂದು ವರ್ಷದವರೆಗೆ ಬಾಡಿಗೆ ವಾಹನಗಳನ್ನು ಓಡಿಸಲು ಅನುಮತಿಸುತ್ತವೆ.

ಭಾರತದ ಡ್ರೈವಿಂಗ್ ಲೈಸೆನ್ಸ್ ಅನ್ನು ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್‌ನಲ್ಲಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತವೆ. ನಿರ್ದಿಷ್ಟ ವರ್ಗದ ವಾಹನಗಳಿಗೆ ಮಾತ್ರ ಅನುಮತಿ ಇಲ್ಲ.

ಮಲೇಷ್ಯಾ ಸಹ ಭಾರತೀಯ ಚಾಲನಾ ಪರವಾನಗಿಯನ್ನು ಬಳಸಲು ಅನುಮತಿಸುತ್ತದೆ. ಪರವಾನಗಿ ಇಂಗ್ಲಿಷ್ ಅಥವಾ ಮಲಯ ಭಾಷೆಯಲ್ಲಿರಬೇಕು. ಹೆಚ್ಚುವರಿ ಭದ್ರತೆಗಾಗಿ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಶಿಫಾರಸು ಮಾಡಲಾಗಿದೆ.

ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್, ದಕ್ಷಿಣ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯನ್ ಕ್ಯಾಪಿಟಲ್ ಟೆರಿಟರಿಯಲ್ಲಿ ಭಾರತೀಯ ಚಾಲನಾ ಪರವಾನಗಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಉತ್ತರ ಆಸ್ಟ್ರೇಲಿಯಾದಲ್ಲಿ ಮಾತ್ರ 3 ತಿಂಗಳವರೆಗೆ ಮಾತ್ರ ಪರವಾನಗಿ ಮಾನ್ಯವಾಗಿರುತ್ತದೆ.

ಜರ್ಮನಿಯು ಭಾರತೀಯ ಡ್ರೈವಿಂಗ್ ಲೈಸೆನ್ಸ್ ಅನ್ನು ಆರು ತಿಂಗಳವರೆಗೆ ಮಾತ್ರ ಅನುಮತಿಸಿದೆ. ಪರವಾನಗಿ ಇಂಗ್ಲಿಷ್ ಅಥವಾ ಜರ್ಮನ್ ಭಾಷೆಯಲ್ಲಿರಬೇಕು.

ನ್ಯೂಜಿಲೆಂಡ್ ಕೂಡ ಒಂದು ವರ್ಷದವರೆಗೆ ಭಾರತೀಯ ಚಾಲನಾ ಪರವಾನಗಿಯನ್ನು ಬಳಸಲು ಅನುಮತಿಸುತ್ತದೆ. ಕನಿಷ್ಟ ವಯಸ್ಸು 21 ವರ್ಷವಾಗಿರಬೇಕು. ಅಲ್ಲದೆ ಡ್ರೈವಿಂಗ್ ಲೈಸೆನ್ಸ್ ಇಂಗ್ಲಿಷ್‌ನಲ್ಲಿರಬೇಕು.

ಸ್ವಿಟ್ಜರ್ಲೆಂಡ್‌ನಲ್ಲಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತವೆ.

ಸ್ವೀಡನ್‌ನಲ್ಲಿ ಒಂದು ವರ್ಷದವರೆಗೆ ಭಾರತದ ಡ್ರೈವಿಂಗ್ ಲೈಸನ್ಸ್ ಬಳಸಬಹುದು. ಆ ಲೈಸನ್ಸ್ ಗಳು ಇಂಗ್ಲಿಷ್, ಸ್ವೀಡಿಷ್, ಜರ್ಮನ್, ಫ್ರೆಂಚ್ ಅಥವಾ ನಾರ್ವೇ ಭಾಷೆಯಲ್ಲಿರಬೇಕು. ಜೊತೆಗೆ ಫೋಟೋ ID ಇರಬೇಕು.

ದಕ್ಷಿಣ ಆಫ್ರಿಕಾದಲ್ಲಿ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಚಾಲನಾ ಪರವಾನಗಿ ಇಂಗ್ಲಿಷ್‌ನಲ್ಲಿರಬೇಕು. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಇತರ ಪ್ರಯಾಣ ದಾಖಲೆಗಳು ಮತ್ತು ಹೆಚ್ಚುವರಿಯಾಗಿ ಫೋಟೋಗಳನ್ನು ತೆಗೆದುಕೊಂಡು ಹೋಗಿ.

ಭಾರತ ಮತ್ತು ಭೂತಾನ್ ಉತ್ತಮ ಸೌಹಾರ್ದಯುತ ಸಂಬಂಧವನ್ನು ಹೊಂದಿವೆ. ಆದ್ದರಿಂದ ಭೂತಾನ್‌ನಲ್ಲಿ ಭಾರತೀಯ ಚಾಲನಾ ಪರವಾನಗಿ ಹೊಂದಿರುವ ಭಾರತೀಯರಿಗೆ ಕಾರು ಚಲಾಯಿಸಲು ಅನುಮತಿ ನೀಡಿದೆ.

ಹಾಂಗ್ ಕಾಂಗ್‌ನಲ್ಲಿ ಒಂದು ವರ್ಷದವರೆಗೆ ಪರವಾನಗಿ ಬಳಸಬಹುದು. ಅಲ್ಲದೆ ಅಂತರರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಸಹ ಸ್ವೀಕರಿಸಲಾಗುತ್ತದೆ.

ಸಿಂಗಾಪುರದಲ್ಲಿ ಭಾರತೀಯ ಚಾಲನಾ ಪರವಾನಗಿಗಳು 12 ತಿಂಗಳವರೆಗೆ ಮಾನ್ಯವಾಗಿರುತ್ತವೆ. ಪರವಾನಗಿ ಇಂಗ್ಲಿಷ್‌ನಲ್ಲಿರಬೇಕು ಅಥವಾ ನೀವು ಅದನ್ನು ಅನುವಾದಿಸಬೇಕು.

ಪೋರ್ಷೆ ಕಾರು ಅಪಘಾತ | online desk