ಹ್ಯಾರಿಸ್ ವಿರುದ್ಧ ಗೆಲುವು: ದೇಶವನ್ನು 'ಸರಿಪಡಿಸುವೆ' ಎಂದ ಟ್ರಂಪ್!

Online Team

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು ಸೋಲಿಸಿರುವುದಾಗಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

(Photo | AP)

"ಇದು ಹಿಂದೆಂದೂ ಯಾರೂ ನೋಡದ ರಾಜಕೀಯ ಆಂದೋಲನ. ಈ ದೇಶದ ಜನತೆಗೆ ಜೊತೆಗೆ ನಾನು ಯಾವತ್ತಿಗೂ ಇರುತ್ತೇನೆ. ನಾವು ನಮ್ಮ ಗಡಿಗಳನ್ನು ಸರಿಪಡಿಸಲು ಹೊರಟಿದ್ದೇವೆ, ನಮ್ಮ ದೇಶದ ವಿಚಾರಗಳನ್ನು ಸರಿಪಡಿಸಬೇಕಿದೆ"

(Photo | AP)

ನಾವು ಇಂದು ಇತಿಹಾಸವನ್ನು ನಿರ್ಮಿಸಿದ್ದೇವೆ, ಯಾರೂ ಯೋಚಿಸದ ಅಡೆತಡೆಗಳನ್ನು ನಾವು ಜಯಿಸಿದ್ದೇವೆ. ನಾವು ಹೆಚ್ಚಿನದನ್ನು ಸಾಧಿಸಿದ್ದು, ರಾಜಕೀಯ ಗೆಲುವಾಗಿದೆ ಎಂದರು.

(Photo | AP)

ಹರ್ಷೋದ್ಘಾರದಿಂದ ಬೆಂಬಲಿಗರು "ಯುಎಸ್ಎ" ಎಂದು ಘೋಷಣೆ ಕೂಗುತ್ತಿದ್ದಂತೆ, ಟ್ರಂಪ್ ಅವರ ಪತ್ನಿ ಮೆಲಾನಿಯಾ ಮತ್ತು ಕುಟುಂಬದೊಂದಿಗೆ ಫ್ಲೋರಿಡಾದ ಅವರ ಪ್ರಚಾರ ಪ್ರಧಾನ ಕಚೇರಿಯಲ್ಲಿ ವೇದಿಕೆಗೆ ಬಂದರು.

(Photo | AP)

ಡೊನಾಲ್ಡ್ ಟ್ರಂಪ್ ಭಾಷಣ.

ಚುನಾವಣಾ ಪ್ರಚಾರ ವೇಳೆ ಡೊನಾಲ್ಡ್ ಟ್ರಂಪ್ ಮೇಲೆ ಹತ್ಯೆ ಯತ್ನ ನಡೆದಿತ್ತು. ಅದನ್ನು ಸಹ ಇಂದಿನ ಭಾಷಣದಲ್ಲಿ ಟ್ರಂಪ್ ಪ್ರಸ್ತಾಪಿಸಿದರು. ನವೆಂಬರ್ 26 ರಂದು ಹಶ್ ಮನಿ ಪಾವತಿಯ ಮೇಲಿನ ಕ್ರಿಮಿನಲ್ ಪ್ರಕರಣದಲ್ಲಿ ಟ್ರಂಪ್ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.

(Photo | AP)

ಟೆಕ್ ಉದ್ಯಮಿ ಎಲಾನ್ ಮಸ್ಕ್ ಅವರು ಟ್ರಂಪ್ ಅವರನ್ನು ಬೆಂಬಲಿಸಿದ್ದಾರೆ ಮತ್ತು ಅವರು ರಿಪಬ್ಲಿಕನ್ ಪಕ್ಷದ ನಾಯಕನ ಜೊತೆಗಿನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

78 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಚುನಾಯಿತರಾದ ಅತ್ಯಂತ ಹಿರಿಯ ಅಧ್ಯಕ್ಷರಾಗಲಿದ್ದಾರೆ. ಅಧ್ಯಕ್ಷ ಜೋ ಬಿಡೆನ್ ಅವರು ಈ ಹಿಂದೆ 77 ನೇ ವಯಸ್ಸಿನಲ್ಲಿ ಚುನಾಯಿತರಾದ ಅತ್ಯಂತ ಹಳೆಯ ಅಧ್ಯಕ್ಷರಾಗಿದ್ದರು.

(Photo | AP)
ಅದ್ಭುತ ಜಯ ಎಂದ ಡೊನಾಲ್ಡ್ ಟ್ರಂಪ್