ನಟ ಡಾಲಿ ಧನಂಜಯ-ಡಾ.ಧನ್ಯತಾ ವಿವಾಹ ನಿಶ್ಚಿತಾರ್ಥ

Srinivasa Murthy VN

ನಟ ಡಾಲಿ ಧನಂಜಯ ತಮ್ಮ ಬಹುಕಾಲದ ಗೆಳತಿ ಡಾ.ಧನ್ಯತಾ ಅವರನ್ನು ಇಂದು ಅಧಿಕೃತವಾಗಿ ವಿವಾಹ ನಿಶ್ಚಿತಾರ್ಥ ಮಾಡಿಕೊಂಡರು.

ನಟ ಡಾಲಿ ಧನಂಜಯ್‌‌‌ ಮನೆಯಲ್ಲಿ ಮದುವೆ ಶಾಸ್ತ್ರ ಪ್ರಾರಂಭವಾಗಿದ್ದು, ಇಂದು ಅಧಿಕೃತವಾಗಿ ಈ ಜೋಡಿಯ ವಿವಾಹ ನಿಶ್ಚಯ ಕಾರ್ಯಕ್ರಮ ನಡೆದಿದೆ.

ಧನಂಜಯ ಅವರ ಮನೆ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ಮದುವೆಗೆ ಸಿದ್ಧತೆ ಆರಂಭವಾಗಿದ್ದು, ಇಂದು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡರು.

ಲಗ್ನ ಶಾಸ್ತ್ರದಲ್ಲಿ ಧನಂಜಯ ಹಾಗೂ ಭಾವಿ ಪತ್ನಿ ಧನ್ಯತಾ ಭಾಗಿಯಾಗಿದ್ದು, ನಿಶ್ಚಿತಾರ್ಥ ಸಂಭ್ರಮ ಹಾಗೂ ಲಗ್ನಪತ್ರಿಕೆ ಬರೆಸುವ ಶಾಸ್ತ್ರ ನಡೆದಿದೆ.

2025ರ, ಫೆಬ್ರವರಿ 16ಕ್ಕೆ ದಾಂಪತ್ಯ ಜೀವನಕ್ಕೆ ಡಾಲಿ ಹಾಗೂ ಧನ್ಯತಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮೈಸೂರಿನ ಎಕ್ಸಿಬಿಷನ್ ಗ್ರೌಂಡ್‌ನಲ್ಲಿ ಡಾಲಿ ಮದುವೆ ಅದ್ಧೂರಿಯಾಗಿ ನಡೆಯಲಿದೆ.

ಅದ್ದೂರಿಯಾಗಿ ನಡೆಯುವ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ.

Oviyaಗೂ ಮುನ್ನ ಖಾಸಗಿ ವಿಡಿಯೋ ಸೋರಿಕೆಗೆ ಗುರಿಯಾಗಿ ಕಣ್ಣೀರು ಹಾಕಿದ ನಟ-ನಟಿಯರಿವರು!