IN PICS | 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ರಿಷಬ್ ಶೆಟ್ಟಿ ಸೇರಿ ಹಲವರಿಗೆ ರಾಷ್ಟ್ರಪತಿಗಳಿಂದ ಪ್ರದಾನ

Sumana Upadhyaya

ಕಾಂತಾರ ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು.

2022 ರ ತಿರುಚಿತ್ರಂಬಲಂ ಚಿತ್ರದಲ್ಲಿನ ಅಭಿನಯಕ್ಕಾಗಿ ನಿತ್ಯಾ ಮೆನೆನ್ ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ತನ್ನ ಗುಜರಾತಿ ಚಿತ್ರ, ಕಚ್ ಎಕ್ಸ್‌ಪ್ರೆಸ್‌ಗಾಗಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಸ್ವೀಕರಿಸುವಾಗ ಮಾನಸಿ ಪರೇಖ್ ಭಾವುಕರಾದರು.

ಉಂಚೈ ಚಿತ್ರಕ್ಕಾಗಿ ನೀನಾ ಗುಪ್ತಾ ಅತ್ಯುತ್ತಮ ಪೋಷಕ ನಟಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದರು. ಅವರು 1994ರಲ್ಲಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡಿದ್ದರು.

ಮನೋಜ್ ಬಾಜಪೇಯಿ ವಿಶೇಷ ವಿಭಾಗದಲ್ಲಿ ಅವರ ಚಿತ್ರ ಗುಲ್‌ಮೊಹರ್‌ಗಾಗಿ ಪ್ರಶಸ್ತಿ ಪಡೆದರು.

ಮಿಥುನ್ ಚಕ್ರವರ್ತಿ ಅವರು ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದರು.

ಮಣಿರತ್ನಂ ಅವರು ಪೊನ್ನಿಯಿನ್ ಸೆಲ್ವನ್: ಭಾಗ 1 ಗಾಗಿ ಅತ್ಯುತ್ತಮ ತಮಿಳು ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.

ವಿಶಾಲ್ ಭಾರದ್ವಾಜ್ ಅವರ ರೊಮ್ಯಾಂಟಿಕ್ ಕಿರುಚಿತ್ರ ಫರ್ಸಾತ್‌ಗಾಗಿ ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಬ್ರಹ್ಮಾಸ್ತ್ರ: ಭಾಗ 1 -- ಶಿವ, ಅಯನ್ ಮುಖರ್ಜಿ ನಿರ್ದೇಶನದ ಮತ್ತು ಕರಣ್ ಜೋಹರ್ ನಿರ್ಮಿಸಿದ AVGC (ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್) ಅತ್ಯುತ್ತಮ ಚಲನಚಿತ್ರ ಸೇರಿದಂತೆ ಮೂರು ಪ್ರಶಸ್ತಿಗಳನ್ನು ಗೆದ್ದುಕೊಂಡಿತು.

ರಣಬೀರ್ ಕಪೂರ್-ಆಲಿಯಾ ಭಟ್ ಅಭಿನಯದ ಚಿತ್ರಕ್ಕಾಗಿ ಪ್ರೀತಮ್ ಅತ್ಯುತ್ತಮ ಸಂಗೀತ ನಿರ್ದೇಶನವನ್ನು ಸ್ವೀಕರಿಸಿದರೆ, ಅರಿಜಿತ್ ಸಿಂಗ್ ಕೇಸರಿಯಾ ಎಂಬ ಸುಂದರ ಗೀತೆಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಯನ್ನು ಪಡೆದರು.

ಪೊನ್ನಿಯಿನ್ ಸೆಲ್ವನ್ 1 ಗಾಗಿ ಅತ್ಯುತ್ತಮ ಸಂಗೀತ ನಿರ್ದೇಶಕ (ಹಿನ್ನೆಲೆ ಸಂಗೀತ) ಗೌರವವನ್ನು ಪಡೆದ ಎ ಆರ್ ರೆಹಮಾನ್ ಅವರು ತಮ್ಮ ಏಳನೇ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.

ಪವನ್ ಮಲ್ಹೋತ್ರಾ ಅವರು ಹರ್ಯಾನ್ವಿ ಚಿತ್ರ ಫೌಜಾಕ್ಕಾಗಿ ಅವರು ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಪಡೆದರು.

ನಟಿ-ನಿರ್ಮಾಪಕಿ-ನಿರ್ದೇಶಕಿ ಐಮೀ ಬರುವಾ ಅವರು ತಮ್ಮ ಅಸ್ಸಾಮಿ ಚಲನಚಿತ್ರ ಬಿರುಬಾಲಾ: ವಿಚ್ ಟು ಪದ್ಮಶ್ರೀಗಾಗಿ ವಿಶೇಷ ಉಲ್ಲೇಖ ಪ್ರಶಸ್ತಿಯನ್ನು ಪಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos