IN PICS | ಬೆಂಗಳೂರು: ದಾಖಲೆ ಮಳೆಗೆ 10 ಬಡಾವಣೆ ಜಲಾವೃತ; ನಿವಾಸಿಗಳ ತೀರದ ಬವಣೆ
Online Team
ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಮೇಘಸ್ಫೋಟ ಸಂಭವಿಸಿ ಯಲಹಂಕ ವಲಯದಲ್ಲಿ ದಾಖಲೆಯ ಮಳೆಯಾಗಿದೆ.
ಯಲಹಂಕ ವಲಯದಲ್ಲಿ ದಾಖಲೆಯ 42 ಮಿ.ಮೀ. ಮಳೆಯಾಗಿದೆ. ಪರಿಣಾಮ ಇಲ್ಲಿನ 10 ಬಡಾವಣೆಗಳು ಜಲಾವೃತವಾಗಿದ್ದು, 4000ಕ್ಕೂ ಅಧಿಕ ನಿವಾಸಿಗಳು ತೊಂದರೆಗೀಡಾಗಿದ್ದಾರೆ.
ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಸಂಕೀರ್ಣಕ್ಕೆ ನಾಲ್ಕು ಅಡಿಗೂ ಹೆಚ್ಚು ನೀರು ನುಗ್ಗಿದ್ದರಿಂದ 3000ಕ್ಕೂ ಹೆಚ್ಚು ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ರಕ್ಷಿಸಲು ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಎರಡೂ ದೋಣಿಗಳನ್ನು ನಿಯೋಜಿಸಿವೆ.
ಯಲಹಂಕದ ಕೋಗಿಲು ಕ್ರಾಸ್ ಜಲಾವೃತಗೊಂಡಿರುವ ದೃಶ್ಯ.
ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಸರ್ಜಾಪುರ ಬಳಿಯ ರೈನ್‌ಬೋ ಡ್ರೈವ್ ಲೇಔಟ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿತು.
ಯಲಹಂಕದ ಕೋಗಿಲು ಕ್ರಾಸ್ ಬಳಿ ಬಿಬಿ ರೋಡ್ ಜಲಾವೃತಗೊಂಡಿರುವ ದೃಶ್ಯ.
ಯಲಹಂಕ ವಲಯದಲ್ಲಿನ ಪ್ರದೇಶ ಜಲಾವೃತಗೊಂಡಿರುವ ದೃಶ್ಯ.
ಯಲಹಂಕ ವಲಯದಲ್ಲಿನ ಪ್ರದೇಶ ಜಲಾವೃತಗೊಂಡಿರುವ ದೃಶ್ಯ.
ರಸ್ತೆಯಲ್ಲಿ ಮಳೆಯ ನೀರಿನಿಂದ ತುಂಬಿರುವ ಹೊಂಡಗಳು ಬೆಂಗಳೂರಿನ ಪ್ರಯಾಣಿಕರಿಗೆ ದೊಡ್ಡ ತೊಂದರೆಯಾಗಿ ಪರಿಣಮಿಸಿದೆ.
ಚಿಕ್ಕಬಾಣಾವಾರ ಮತ್ತು ದೊಡ್ಡಬೊಮ್ಮಸಂದ್ರದಲ್ಲಿನ ವಿಡಿಯೋ
ಅಕ್ಟೋಬರ್ 21, 2024 ರಂದು ಸೋಮವಾರ ಬೆಂಗಳೂರಿನ ಕೋರಮಂಗಲ್ಲಿ 80 ಅಡಿ ರಸ್ತೆಯ ಪಕ್ಕದಲ್ಲಿ ಕಸವನ್ನು ಸುರಿಯಲಾಗಿದ್ದ ದೃಶ್ಯ.
ಅಕ್ಟೋಬರ್ 21, 2024 ರ ಸೋಮವಾರ ಬೆಂಗಳೂರಿನ ಆಸ್ಟಿನ್ ಟೌನ್‌ನಲ್ಲಿ ವಾಹನಗಳು ಜಲಾವೃತವಾದ ರಸ್ತೆಯ ಮೂಲಕ ಚಲಿಸಿದ ದೃಶ್ಯ.
ಭಾರೀ ಮಳೆಯಿಂದಾಗಿ, ಸೋಮವಾರ, ಅಕ್ಟೋಬರ್ 21, 2024 ರಂದು ಬೆಂಗಳೂರಿನ ಜೆಜೆ ನಗರದಲ್ಲಿನ ಮನೆಗಳು ಜಲಾವೃತಗೊಂಡವು.
ಬೆಂಗಳೂರು ನಗರಾದ್ಯಂತ ವಿವಿಧೆಡೆ ಮರಗಳು ಉರುಳಿ ಬಿದ್ದಿವೆ.
ಕೋಗಿಲು ಕ್ರಾಸ್ ಮತ್ತು ಟಾಟಾನಗರದಲ್ಲಿನ ವಿಡಿಯೋ
ಶಾಲೆಗಳಿಗೆ ರಜೆ ಕೊಟ್ಟಿದ್ದರಿಂದ ಜಲಾವೃತಗೊಂಡಿರುವ ಉದ್ಯಾನವನದಲ್ಲಿ ಮಕ್ಕಳು ಆಟವಾಡುತ್ತಿದ್ದ ದೃಶ್ಯ.