ಬೈರುತ್‌ನ ಕಟ್ಟಡದ ಮೇಲೆ ಇಸ್ರೇಲಿ ಬಾಂಬ್ ದಾಳಿ; ನಿಖರ ಕ್ಷಣಗಳ ಚಿತ್ರಗಳು

Online Team

ಅಸೋಸಿಯೇಟೆಡ್ ಪ್ರೆಸ್ ಛಾಯಾಗ್ರಾಹಕ ಬಿಲಾಲ್ ಹುಸೇನ್ ಒಂದು ದೊಡ್ಡ ಮರದ ಹಿಂದೆಯಿಂದ, ಇಸ್ರೇಲಿ ಮಿಲಿಟರಿ ಎಚ್ಚರಿಕೆ ನೀಡಿದ ಬೈರುತ್ ಅಪಾರ್ಟ್ಮೆಂಟ್ ಕಟ್ಟಡದ ಕಡೆಗೆ ತನ್ನ ಕ್ಯಾಮೆರಾ ಪೋಕಸ್ ಮಾಡಿದ್ದರು.

ಕೆಲವೇ ಕ್ಷಣಗಳಲ್ಲಿ ಆಕಾಶದಿಂದ ಬಾಂಬ್ ಬಿದ್ದ ಪ್ರತಿಯೊಂದು ಕ್ಷಣಗಳನ್ನು ಪತ್ರಕರ್ತರು ತನ್ನ ಕ್ಯಾಮರಾದಲ್ಲಿ ಸೆಪೆಹಿಡಿದರು.

ವಿಡಿಯೋ ದೃಶ್ಯ.

"ನಾನು ಕ್ಷಿಪಣಿ ದಾಳಿಯ ಸೈರನ್ ಶಬ್ದವನ್ನು ಕೇಳಿದೆ, ಕಟ್ಟಡದ ಕಡೆಗೆ ಹೊರಟು ನಂತರ ಚಿತ್ರೀಕರಿಸಲು ಪ್ರಾರಂಭಿಸಿದೆ" ಎಂದು ಛಾಯಾಗ್ರಾಹಕ ಬಿಲಾಲ್ ಹುಸೇನ್ ಹೇಳಿದರು. ಹುಸೇನ್ ಅವರು ಕ್ಷಿಪಣಿ ವೇಗವಾಗಿ ಬೀಳುವಾಗಿನ ಮತ್ತು ಬಿದ್ದ ಮೇಲುಂಟಾಗುವ ಕಟ್ಟಡ ನಾಶದ ದೃಶ್ಯಗಳನ್ನು ಅತ್ಯಂತ ಸ್ಪಷ್ಟವಾಗಿ ಸೆರೆಹಿಡಿದಿದ್ದಾರೆ.

ಇಸ್ರೇಲಿ ಮಿಲಿಟರಿ ವಕ್ತಾರರು ಸಾಮಾಜಿಕ ಮಾಧ್ಯಮದಲ್ಲಿ ಅರೇಬಿಕ್ ಭಾಷೆಯಲ್ಲಿ ಎಚ್ಚರಿಕೆಯನ್ನು ಪೋಸ್ಟ್ ಮಾಡಿದ ಸರಿಸುಮಾರು 40 ನಿಮಿಷಗಳ ನಂತರ ದಾಳಿ ಸಂಭವಿಸಿದೆ.

ಬೈರುತ್‌ನ ದಕ್ಷಿಣ ಹೊರವಲಯದಲ್ಲಿರುವ ಜೋಡಿ ಕಟ್ಟಡಗಳಲ್ಲಿ ಮತ್ತು ಸುತ್ತಮುತ್ತಲಿನ ಜನರಿಗೆ ಅವರು ಆ ಪ್ರದೇಶವನ್ನು ಸ್ಥಳಾಂತರಿಸಬೇಕು ಎಂದು ತಮ್ಮ ಸಂದೇಶದಲ್ಲಿ ಸೂಚಿಸಿದ್ದರು.

ದಾಳಿಗೊಳಗಾದ ಮತ್ತೊಂದು ಕಟ್ಟಡದ ದೃಶ್ಯ.

ಹೆಜ್ಬೊಲ್ಲಾ ಸಂಘಟನೆ ಬಗ್ಗೆ ಮಾಹಿತಿ...