ಆಂಧ್ರ ಮತ್ತು ತೆಲಂಗಾಣದಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ | IN PICS

Online Team

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಿಂದಾಗಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ.

ಭಾನುವಾರದ ಹೊತ್ತಿಗೆ ಪ್ರಕಾಶಂ ಬ್ಯಾರೇಜ್‌ಗೆ 8,79,476 ಕ್ಯೂಸೆಕ್ಸ್ ಹೆಚ್ಚುವರಿ ನೀರು ಬಂದಿದ್ದು, ಅದರ ಎಲ್ಲಾ 70 ಗೇಟ್‌ಗಳನ್ನು ತೆಗೆಯಲಾಗಿದೆ.

ವಿಜಯವಾಡದ ಬುಡಮೇರು ಕಾಲುವೆ ಒಡೆದ ನಂತರ ಸಿಂಗ್ ನಗರದ ನಿವಾಸಿಗಳು ಪ್ರವಾಹದಲ್ಲಿ ಮುಳುಗಿದ್ದಾರೆ.

ವಿಜಯವಾಡದಲ್ಲಿ ಬಹಳಷ್ಟು ಪ್ರದೇಶಗಳು ಜಲಾವೃತಗೊಂಡಿವೆ.

ಶನಿವಾರ ರಾತ್ರಿ ಬುಡಮೇರು ಡೈವರ್ಶನ್ ಚಾನೆಲ್ (ಬಿಡಿಸಿ) ಒಡೆದು ಹೊಳೆ ಉಕ್ಕಿ ಹರಿಯುತ್ತಿದ್ದು, ಭಾನುವಾರದಂದು, ಬುಡಮೇರು ನದಿಯ ಸಮೀಪವಿರುವ ಹಲವಾರು ಪ್ರದೇಶಗಳು ಪ್ರವಾಹ ನೀರಿನಿಂದ ಮುಳುಗಿ, ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಸುಮಾರು 2,76,000 ಜನರು, ಹೆಚ್ಚಾಗಿ ಈ ಪ್ರದೇಶಗಳಲ್ಲಿನ ಕೊಳೆಗೇರಿಗಳ ನಿವಾಸಿಗಳು ಬಾಧಿತರಾಗಿದ್ದಾರೆ.

ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಕನಿಷ್ಠ 25 ಜನರ ಸಾವನ್ನಪ್ಪಿದ್ದು ತೆಲಂಗಾಣ ಸರ್ಕಾರವು ಸೋಮವಾರ ಪರಿಹಾರ ಕ್ರಮಗಳನ್ನು ಹೆಚ್ಚಿಸಿದೆ.

ಹೈದರಾಬಾದ್-ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ರಸ್ತೆ ಮೇಲೆ ಹರಿದಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.

ಸಿಕಂದರಾಬಾದ್ ನಲ್ಲಿ ಪ್ರಧಾನ ಕಚೇರಿ ಹೊಂದಿರುವ ದಕ್ಷಿಣ ಮಧ್ಯ ರೈಲ್ವೇ ರೈಲು ಸೇವೆಗಳನ್ನು ರದ್ದುಗೊಳಿಸಿ, ಕೆಲವು ರೈಲುಗಳ ಮಾರ್ಗಗಳನ್ನು ಬದಲಿಸಿದೆ. ಸೋಮವಾರ ಆದಿಲಾಬಾದ್ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD Met ಸೆಂಟರ್ ತಿಳಿಸಿದೆ.

ಆಂಧ್ರ-ತೆಲಂಗಾಣದಲ್ಲಿ ವರುಣನ ಅಬ್ಬರ: 25 ಮಂದಿ ಸಾವು,