ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಮಿಲನಾ ನಾಗರಾಜ್

Srinivasa Murthy VN

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಕಪಲ್‌ ಮಿಲನಾ ನಾಗರಾಜ್‌ ಹಾಗೂ ಡಾರ್ಲಿಂಗ್‌ ಕೃಷ್ಣ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ.

ನಟಿ ಮಿಲನಾ ನಾಗರಾಜ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಫೆಬ್ರವರಿ 14, 2021 ರಲ್ಲಿ ಮದುವೆಯಾಗಿದ್ದ ಈ ಜೋಡಿ, ಮದುವೆಯಾಗಿ 3 ವರ್ಷಗಳ ಬಳಿಕ ಮುದ್ದಾದ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ.

ಕನ್ನಡ ಚಿತ್ರರಂಗದ ಸ್ಟಾರ್‌ ಕಪಲ್‌ ಮಿಲನಾ ನಾಗರಾಜ್ ಮತ್ತು ನಟ ಡಾರ್ಲಿಂಗ್ ಕೃಷ್ಣಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಈ ಮುಂಚೆ ತಾವು ಪೋಷಕರಾಗಲಿರುವ ಖುಷಿಯನ್ನು ಅನುಭವಿಸುವಂತೆ ಈ ಜೋಡಿ, ಬೇಬಿ ಬಂಪ್‌ ಫೋಟೋಶೂಟ್‌ ಮಾಡಿಸಿದ್ದರು.

ಇತ್ತೀಚೆಗಷ್ಟೆ ಮಿಲನಾ ನಾಗರಾಜ್‌ ಅವರ ಸೀಮಂತ ಕಾರ್ಯವನ್ನು ಅದ್ದೂರಿಯಾಗಿ ಮಾಡಲಾಗಿತ್ತು.

ಸೀಮಂತ ಸಮಾರಂಭದಲ್ಲಿ ಮಿಲನಾ ನಾಗರಾಜ್‌

Deepika Baby Bump Photos