ತೋಳಿಲ್ಲದ ಈಜುಗಾರ ಗುವೋ ಜಿನ್‌ಚೆಂಗ್ ನಿಮಗೆ ಗೊತ್ತಾ?

Online Team

ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ ಪುರುಷರ 50 ಮೀಟರ್ ಬಟರ್‌ಫ್ಲೈ S5 ನಲ್ಲಿ ಯಾವುದೇ ತೋಳುಗಳಿಲ್ಲದ ಚೀನಾದ ಗುವೊ ಜಿನ್‌ಚೆಂಗ್ ವಿಶ್ವದಾಖಲೆ ಮಾಡಿದರು.

ಸಮನ್ವಯವು ಮಧ್ಯಮ ಪ್ರಮಾಣದಲ್ಲಿ ಪರಿಣಾಮ ಬೀರುವ, ಮಧ್ಯದ-ಕಾಂಡ ಮತ್ತು ಕಾಲುಗಳ ಚಲನೆ ಮೇಲೆ ಹೆಚ್ಚು ಪರಿಣಾಮ ಬೀರುವ, ಅಥವಾ ಕೈಕಾಲುಗಳಿಲ್ಲದೆ ಇರುವ ಈಜುಗಾರರಿಗೆ ಪ್ಯಾರಾಲಿಂಪಿಕ್ಸ್ ನಲ್ಲಿ S5 ಸ್ಪರ್ಧೆ ಇರುತ್ತದೆ. ಈ ಈಜುಗಾರರು ಉತ್ತಮ ದೇಹದ ಸ್ಥಾನವನ್ನು ಹಿಡಿದಿಟ್ಟುಕೊಳ್ಳಲು ಅಥವಾ ನೇರವಾಗಿ ನೀರಿನ ಮೂಲಕ ಈಜಲು ಕಷ್ಟಪಡುತ್ತಾರೆ.

ನನ್ನ ಚೀನೀ ಸಹ ಆಟಗಾರರ ವಿರುದ್ಧ ಸ್ಪರ್ಧಿಸಿದಾಗ ನನಗೆ ಹೆಚ್ಚು ಒತ್ತಡ ಇರುತ್ತದೆ. ನಾವೆಲ್ಲರೂ ಒಬ್ಬರಿಗೊಬ್ಬರು, ವಿವರಗಳು ಮತ್ತು ಎಲ್ಲವನ್ನೂ ತಿಳಿದಿದ್ದೇವೆ. ಒಂದು ಚಿಕ್ಕ ವಿಷಯ ಸಹ ನಾನು ಸೋಲುವಂತೆ ಮಾಡಬಹುದು ಎಂದು ಜಿನ್‌ಚೆಂಗ್ ಹೇಳಿದರು.

2023 ರಲ್ಲಿ, ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿ ಗುವೊ ಜಿಂಚೆಂಗ್ ಫ್ರೀಸ್ಟೈಲ್ S5 ವಿಶ್ವ ದಾಖಲೆಯನ್ನು ಮುರಿದರು.

2004 ರಲ್ಲಿ ಅಥೆನ್ಸ್‌ನ ನಂತರ ಪ್ರತಿ ಪ್ಯಾರಾಲಿಂಪಿಕ್ಸ್‌ನಲ್ಲಿ ಚೀನಾವು ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಪಾಡಿಕೊಂಡು ಬಂದಿದೆ.

ಈ ಬಾರಿ ಪ್ಯಾರಿಸ್ ಪ್ಯಾರಲಿಂಪಿಕ್ಸ್ ನಲ್ಲಿ ಚೀನಾ 94 ಚಿನ್ನವನ್ನು ಗೆದ್ದಿದ್ದು, ಬ್ರಿಟನ್ 49 ಮತ್ತು ಯುಎಸ್ಎ 36 ಚಿನ್ನವನ್ನು ಗೆದ್ದಿದೆ.

(Photos | AP)

Nita Ambani hails Avani, Mona, Preethi, Manish for winning medals at Paris Paralympics
Paris Paralympics: ಭಾರತದ ಅವನಿ ಲೆಖರಾ ಚಿನ್ನ, ಮೋನಾ ಅಗರ್ವಾಲ್ ಕಂಚು