Aishwarya Rai: ದುಬೈ ಸೈಮಾ ಅವಾರ್ಡ್ಸ್; ಮಿಂಚಿದ ಐಶ್ವರ್ಯಾ ರೈ- ಆರಾಧ್ಯಾ

Sumana Upadhyaya

90ರ ದಶಕದಲ್ಲಿ ಮಿಸ್ ವರ್ಲ್ಡ್ ಆಗಿ ಗೆದ್ದು ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐಶ್ವರ್ಯಾ ರೈ ನಂತರ ಗ್ಲೋಬಲ್ ಐಕಾನ್ ಆಗಿ ಮೆರೆದ ನಟಿ.

ಬಾಲಿವುಡ್ ನಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದು ಬಿಗ್ ಬಿ ಅಮಿತಾಬ್ ಬಚ್ಚನ್ ಪುತ್ರ ನಟ ಅಭಿಷೇಕ್ ಬಚ್ಚನ್ ವಿವಾಹವಾಗಿ ಬಚ್ಚನ್ ಕುಟುಂಬಕ್ಕೆ ಸೇರಿದ ನಂತರ ಅವರ ಜನಪ್ರಿಯತೆ, ಕೀರ್ತಿ ಇನ್ನೂ ಹೆಚ್ಚಾಯಿತು.

ಮಗಳು ಆರಾಧ್ಯ ಹುಟ್ಟಿದ ಮೇಲೆ ಕೊಂಚ ಬ್ರೇಕ್ ನೀಡಿ ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾದ ಐಶ್ವರ್ಯಾ ಈಗಲೂ ಬೇಡಿಕೆ ಉಳಿಸಿಕೊಂಡಿದ್ದಾರೆ. 50 ವರ್ಷ ದಾಟಿದರೂ ಜನಪ್ರಿಯತೆ ಇನ್ನೂ ಕಡಿಮೆಯಾಗಿಲ್ಲ.

ಅನಂತ್​ ಅಂಬಾನಿ ಮದುವೆಗೆ ಐಶ್ವರ್ಯಾ ರೈ ಬಚ್ಚನ್​ ಅವರು ಮಗಳ ಜೊತೆ ಬಂದಿದ್ದರು. ಅಭಿಷೇಕ್ ಒಬ್ಬರೇ ಬಂದಿದ್ದರು. ನಿನ್ನೆ ಐಶ್ವರ್ಯಾ ರೈ ಬಚ್ಚನ್​ ಅವರು ಮಗಳು ಆರಾಧ್ಯ ಜೊತೆ ದುಬೈ ಸೈಮಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಇತ್ತೀಚೆಗೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಹೆಚ್ಚು ಸುದ್ದಿಯಾಗುತ್ತಿರುವುದು ಡಿವೋರ್ಸ್ ವಿಚಾರವಾಗಿ. ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿಲ್ಲ.

ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗುವ ಸಲುವಾಗಿ ವಿಮಾನ ನಿಲ್ದಾಣದಲ್ಲಿ ನಡೆದುಬರುತ್ತಿರುವ ಫೋಟೋಗಳಲ್ಲಿ ಐಶ್ವರ್ಯಾ ರೈ ಕೈ ಬೆರಳಲ್ಲಿ ವೆಡ್ಡಿಂಗ್​ ರಿಂಗ್​ ಕಾಣಿಸಲಿಲ್ಲ. ಇದು ದಂಪತಿಯ ಡಿವೋರ್ಸ್ ಗಾಸಿಪ್ ಗೆ ಇನ್ನಷ್ಟು ಪುಷ್ಠಿ ನೀಡಿತು.

ವಿಚ್ಛೇದನ ಬಗ್ಗೆ ಕೇಳಿಬರುತ್ತಿರುವ ಸುದ್ದಿಗೆ ಇಬ್ಬರೂ ಉತ್ತರ ನೀಡಿಲ್ಲ, ಇತ್ತೀಚೆಗೆ ಅಭಿಷೇಕ್ ಈ ಬಗ್ಗೆ ಪ್ರತಿಕ್ರಿಯಿಸಿ ನಾವು ಸಾರ್ವಜನಿಕ ಬದುಕಿನಲ್ಲಿರುವವರು, ಸುದ್ದಿಗಳನ್ನು ವೈಭವೀಕರಿಸಿ ಹೇಳುವುದು ಸಹಜ, ಏನೂ ಮಾಡಲು ಸಾಧ್ಯವಿಲ್ಲ, ಜೀವನ ಮುಂದುವರಿಯಬೇಕು ಎಂದಿದ್ದರು.

ದುಬೈನಲ್ಲಿ ಸೈಮಾ ಅವಾರ್ಡ್ಸ್ ಸಂಭ್ರಮ ಆಗಿದೆ. ಈ ಒಂದು ಸಡಗರದಲ್ಲಿಯೇ ನಟಿ ಐಶ್ವರ್ಯಾ ರೈ ಕಾಣಿಸಿಕೊಂಡಿದ್ದಾರೆ. ಪಕ್ಕದಲ್ಲಿ ಮಗಲು ಆರಾಧ್ಯ ಕೂಡ ಇದ್ದಾರೆ. ಇಬ್ಬರೂ ಇಡೀ ಸೈಮಾದಲ್ಲಿ ವಿಶೇಷವಾಗಿಯೇ ಮಿಂಚಿದ್ದಾರೆ.

ಅಮ್ಮ ಮತ್ತು ಮಗಳು ಇಲ್ಲಿ ವಿಭಿನ್ನವಾಗಿಯೇ ಕಂಗೊಳಿಸಿದ್ದಾರೆ. ಕಪ್ಪು ಬಣ್ಣದ ಮತ್ತು ಸಿಲ್ವರ್ ಕಲರ್ ವಿಶೇಷ ಕಾಸ್ಟೂಮ್‌ಗಳನ್ನು ಧರಿಸಿದ್ದರು.

ಐಶ್ವರ್ಯಾ ರೈ ಹಾಗೂ ಆರಾಧ್ಯ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮಣಿ ರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 2 ಚಿತ್ರದಲ್ಲಿನ ಅಭಿನಯಕ್ಕಾಗಿ ಐಶ್ವರ್ಯಾ ರೈ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.