ಸಂಗೀತ ಸಾಮ್ರಾಜ್ಞಿ ಎಂ.ಎಸ್.ಸುಬ್ಬುಲಕ್ಷ್ಮಿ ಲುಕ್ ನಲ್ಲಿ ವಿದ್ಯಾ ಬಾಲನ್ ಹೇಗೆ ಕಾಣ್ತಾರೆ?
Sumana Upadhyaya
ಸಂಗೀತ ಲೋಕದ ಅಪರೂಪದ ಗಾಯಕಿ, 'ಭಾರತ ರತ್ನ' ಸಂಗೀತಗಾರ್ತಿ ಎಂ ಎಸ್ ಸುಬ್ಬುಲಕ್ಷ್ಮಿ ಅವರ 108ನೇ ಜಯಂತಿ ಸೆಪ್ಟೆಂಬರ್ 16ರಂದು ಸಂಗೀತ ಪ್ರೇಮಿಗಳು, ಕಲಾವಿದರು ಅವರನ್ನು ಸ್ಮರಿಸದೆ ಇರಲಾರರು. ಈ ಸಂದರ್ಭದಲ್ಲಿ ಬಾಲಿವುಡ್ ನ ಖ್ಯಾತ ಪ್ರತಿಭಾವಂತ ಕಲಾವಿದೆ ವಿದ್ಯಾ ಬಾಲನ್ ಎಂ ಎಸ್ ಸುಬ್ಬುಲಕ್ಷ್ಮಿ ಗೆಟಪ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.
ಸುಬ್ಬುಲಕ್ಷ್ಮಿಯವರ ಸೀರೆ ಉಡುವ ಶೈಲಿ, ಅವರ ನೋಟ, ಸಂಗೀತ ಹಾಡಲು ಕುಳಿತುಕೊಳ್ಳುವ ಭಂಗಿ, ಧರಿಸುತ್ತಿದ್ದ ಸೀರೆ, ಆಭರಣ, ತಲೆಬಾಚುವ, ಬಿಂದಿ, ಕುಂಕುಮ, ಮೂಗುತಿ ಹಾಕುತ್ತಿದ್ದ ರೀತಿ ಹೀಗೆ ಪ್ರತಿಯೊಂದು ಅಂಶವನ್ನೂ ಸೂಕ್ಷ್ಮವಾಗಿ ತಿಳಿದುಕೊಂಡು ವಿದ್ಯಾ ಬಾಲನ್ ಇಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಭಾರೀ ಮೆಚ್ಚುಗೆ ಗಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿದ್ಯಾ ಬಾಲನ್ ಅವರ ಫೋಟೋ ನೋಡಿದವರು ಥಟ್ಟನೆ ಅರೆ ಥೇಟ್ ಸುಬ್ಬುಲಕ್ಷ್ಮಿಯವರ ಥರಾನೆ ಕಾಣ್ತಿದ್ದಾರಲ್ಲಾ ವಾವ್.. ಎಂದು ಉದ್ಘಾರ ತೆಗೆಯದೆ ಇರಲಾರರು.
ಸುಬ್ಬುಲಕ್ಷ್ಮಿಯವರು ಧರಿಸುತ್ತಿದ್ದ ರೇಷ್ಮೆ ಸೀರೆಗೆ ಇತಿಹಾಸವಿದೆ. 1951, ಎಂಎಸ್ ಸುಬ್ಬುಲಕ್ಷ್ಮಿ ಅವರು ಅದೇ ಬಣ್ಣದ ಸೀರೆಯನ್ನು ಹೊಂದಬೇಕೆಂದು ಆಶಿಸುತ್ತಾ ಕೈಯಲ್ಲಿ ನೀಲಿ ದಾರದೊಂದಿಗೆ ಸಿಲ್ಕ್ಸ್ ಸೀರೆ ಅಂಗಡಿಗೆ ಹೋಗಿದ್ದರಂತೆ. ಅವರಿಗಾಗಿ ನೇಯ್ದ ಸೀರೆಯ ಬಣ್ಣವು ತುಂಬಾ ವಿಶಿಷ್ಟವಾಗಿತ್ತು, ಅದನ್ನು ಎಂಎಸ್ ಬ್ಲೂ ಎಂದು ಜನ ಕರೆಯುತ್ತಿದ್ದರು.
ಇಂದಿಗೂ ಮಹಿಳೆಯರು MS ಬ್ಲೂ ಎಂದು ಇಂಕಿ, ವರ್ಣವೈವಿಧ್ಯದ ನೀಲಿ ಬಣ್ಣದ ಅದೇ ಛಾಯೆಯ ಸೀರೆಯನ್ನು ಹುಡುಕುತ್ತಾ ರೇಷ್ಮೆ ಸೀರೆಗಳ ಅಂಗಡಿಗಳಿಗೆ ಹೋಗುತ್ತಾರೆ.
ಗಾಯಕಿ ಎಂ ಎಸ್ ಸುಬ್ಬುಲಕ್ಷ್ಮಿ ಅವರ ಈ ಐಕಾನಿಕ್ ಲುಕ್‌ಗಳನ್ನು ಮರುಸೃಷ್ಟಿ ಮಾಡುವಲ್ಲಿ ವಿದ್ಯಾ ಬಾಲನ್‌ಗೆ ಕಾಸ್ಟ್ಯೂಮ್ ಡಿಸೈನರ್ ಅನು ಪಾರ್ಥಸಾರಥಿ ಅವರು ಸಾಥ್ ನೀಡಿದ್ದಾರೆ. ಈ ಫೋಟೋಶೂಟ್‌ನಲ್ಲಿ ಭಾಗಿಯಾಗಿದ್ದಕ್ಕೆ ನಟಿ ವಿದ್ಯಾ ಬಾಲನ್ ಅವರು ಕೂಡ ಸಂತಸಪಟ್ಟಿದ್ದಾರೆ.
ಮೇರು ಗಾಯಕಿ ಎಂ ಎಸ್ ಸುಬ್ಬುಲಕ್ಷ್ಮೀ ಅವರ ಸಿಗ್ನೇಚರ್ ಸ್ಟೈಲ್ ಆಗಿದ್ದ ಸಾಂಪ್ರದಾಯಿಕ ಕಾಂಜಿವರಂ ರೇಷ್ಮೆ ಸೀರೆಗಳನ್ನು ವಿದ್ಯಾ ಬಾಲನ್‌ಗೆ ಅವರು ಡಿಸೈನ್ ಮಾಡಲಾಗಿದೆ.
ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ವಿದ್ಯಾ ಬಾಲನ್, ಎಂ ಎಸ್ ಸುಬ್ಬುಲಕ್ಷ್ಮಿಯವರಿಗೆ ಗೌರವ ನಮನ ಸಲ್ಲಿಸಿ, ಎಂ.ಎಸ್.ಅಮ್ಮ ಅವರು ಧರಿಸಿದ್ದ ನಾಲ್ಕು ಬಣ್ಣಗಳ ಸೀರೆಗಳನ್ನು ಇಲ್ಲಿ ನಾನು ಧರಿಸಿದ್ದೇನೆ. ಇವು 60 ಮತ್ತು 80 ರ ದಶಕದ ನಡುವೆ ಜನಪ್ರಿಯವಾಗಿತ್ತು. ಇದು ಎಂ.ಎಸ್.ಅಮ್ಮ ಅವರ ಸಂಗೀತ ಕಚೇರಿಯ ವ್ಯಕ್ತಿತ್ವದ ಚಿತ್ರಣವಾಗಿದೆ ಎಂದು ವಿದ್ಯಾ ಬರೆದಿದ್ದಾರೆ.
ಎಂ ಎಸ್ ಸುಬ್ಬುಲಕ್ಷ್ಮಿ ಗೆಟಪ್ ಗೆ ಹೇಗೆ ಸಿದ್ಧತೆ ಮಾಡಿಕೊಂಡರು, ಫೋಟೋಶೂಟ್ ಮಾಡಿರುವ ವಿಡಿಯೊವನ್ನು ವಿದ್ಯಾ ಬಾಲನ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.(ವಿದ್ಯಾ ಬಾಲನ್ ಇನ್ಸ್ಟಾಗ್ರಾಂ ಖಾತೆಯಿಂದ)
ವಿದ್ಯಾ ಬಾಲನ್ ಹಂಚಿಕೊಂಡ ಚಿತ್ರಗಳಲ್ಲಿ, ಅವರು ಸಣ್ಣ ಚೆಕ್‌ಗಳೊಂದಿಗೆ ನೀಲಿ ಬಣ್ಣದ ಸೀರೆ, ಕಿತ್ತಳೆ ಮತ್ತು ನೇರಳೆ ಬಣ್ಣದ ಆರು ಗಜಗಳು, ಹಳದಿ ಗಡಿ ಬಣ್ಣದ ಹಸಿರು ಮತ್ತು ಅಗಲವಾದ ಕೆಂಪು ಅಂಚುಗಳೊಂದಿಗೆ ಎಂಎಸ್ ನೀಲಿ ಸಿಗ್ನೇಚರ್ ಶೈಲಿಯನ್ನು ಕಾಣಬಹುದು.
ಕೌಸಲ್ಯಾ ಸುಪ್ರಜಾ ರಾಮ ...ಇದು ಇಂದಿಗೂ ಬಹುತೇಕ ಭಾರತೀಯರು ಬೆಳಗ್ಗೆ ಕೇಳಿಯೇ ತಮ್ಮ ಕೆಲಸ ಆರಂಭಿಸುವುದು. ಎಂ ಎಸ್ ಸುಬ್ಬುಲಕ್ಷ್ಮಿಯವರು ಹಾಡಿರುವ ಈ ಸುಪ್ರಭಾತವನ್ನು ಹಾಕಿ ವಿದ್ಯಾ ಬಾಲನ್ ಅವರು ಮೇರು ಕಲಾವಿದೆಗೆ ಗೌರವ ಸೂಚಿಸಿದ್ದಾರೆ.(ವಿದ್ಯಾ ಬಾಲನ್ ಇನ್ಸ್ಟಾಗ್ರಾಂ ಖಾತೆಯಿಂದ)