ನಿಮಗೂ Extreme personalities ಇದ್ಯಾ?: ರಶ್ಮಿಕಾ ಪ್ರಶ್ನೆ
Online Team
ಪ್ರತಿಷ್ಠಿತ ಮಿಲಾನ್ ಫ್ಯಾಷನ್ ವೀಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಭಾಗವಹಿಸಿದ್ದಾರೆ. ಪ್ರಪಂಚದಾದ್ಯಂತ ಇರುವ ಪ್ರತಿಷ್ಠಿತ ಬ್ರಾಂಡ್‌ಗಳು ಭಾಗವಹಿಸಿವೆ.
https://www.instagram.com/rashmika_mandanna
ಈಗಾಗಲೇ ಆರಂಭಗೊಂಡಿರುವ ಮುಂಬರುವ ಸಮ್ಮರ್-ಸ್ಪ್ರಿಂಗ್ ಸೀಸನ್‌ನ ಮಿಲಾನ್ ಫ್ಯಾಷನ್ ವೀಕ್‌ನಲ್ಲಿ, ಎಂದಿನಂತೆ ಇಂಟರ್‌ನ್ಯಾಷನಲ್ ಸೆಲೆಬ್ರಿಟಿಗಳು ಹಾಗೂ ತಾರೆಯರು ಕಾಣಿಸಿಕೊಂಡಿದ್ದಾರೆ.
https://www.instagram.com/rashmika_mandanna
ಫ್ಯಾಷನ್ ವೀಕ್‌ನ ರನ್ ವೇ ಶೋ ನಡೆಯುವಾಗ, ಮುಂದಿನ ಸಾಲಿನ ಗೆಸ್ಟ್ ಲಿಸ್ಟ್‌ನಲ್ಲಿ ರಶ್ಮಿಕಾ, ನಟ ವೂ ಡು ವ್ಯಾನ್ ಸೇರಿದಂತೆ ಸೂಪರ್ ಮಾಡೆಲ್‌ಗಳೊಂದಿಗೆ ಕುಳಿತು ಶೋ ಎಂಜಾಯ್ ಮಾಡಿದ್ದಾರೆ.
ಭಾರತೀಯ ನಟಿ ರಶ್ಮಿಕಾ ಮಂದಣ್ಣ extreme personalities ಬಗ್ಗೆ ಮಾತನಾಡಿದ್ದಾರೆ. ಹೊತ್ತಲ್ಲದ ಹೊತ್ತಿನಲ್ಲಿ ಅತಿಯಾಗಿ ವ್ಯಾಯಾಮ ಮಾಡಿ ಹಾಗೂ ಹಗಲಿನಲ್ಲಿ couch potatoing ಅಂದರೆ ರಿಲ್ಯಾಕ್ಸ್ ಆಗಿ ಇರಿ ಎಂದು ಹೇಳಿದ್ದಾರೆ.
https://www.instagram.com/rashmika_mandanna
ಹಾಸಿಗೆಯಲ್ಲಿ ಮಲಗಿ ಕ್ಯಾಮೆರಾಗೆ ಪೋಸ್ ಕೊಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಅದಾದ ನಂತರ ತಮ್ಮ ಅಭಿಮಾನಿಗಳ ತಲೆಗೆ ಕೆಲಸ ಕೊಟ್ಟಿರುವ ರಶ್ಮಿಕಾ ನಿಮಗೂ ಕೂಡ extreme personalities ಇದ್ಯಾ ಎಂದು ಪ್ರಶ್ನಿಸಿದ್ದಾರೆ.
https://www.instagram.com/rashmika_mandanna
ಹೊತ್ತಲ್ಲದ ಹೊತ್ತಲ್ಲಿ ವ್ಯಾಯಾಮ ಮಾಡುವುದು, ಸುಮಾರು 2 ರಿಂದ 3 ಗಂಟೆ ವರ್ಕೌಟ್ ಮಾಡುವುದು. ನಿಮಗೆ ವರ್ಕೌಟ್ ಮಾಡಲು ಇಷ್ಟವಿಲ್ಲದಿದ್ದಾಗ ಮಾಡಬೇಡಿ.
https://www.instagram.com/rashmika_mandanna
ಮಂಚದ ಮೇಲೆ ಬಿದ್ದುಕೊಂಡು ಭೂಮಿಯ ಮೇಲಿರುವ ಅತ್ಯಂತ ಅನಾರೋಗ್ಯಕರವಾದ ಆಹಾರ ಸೇವಿಸಿ, ನಿಮಗೆ ಇಷ್ಟವಾದ ಸಿನಿಮಾ ನೋಡಿ ಎಂದು ಸಲಹೆ ನೀಡಿದ್ದಾರೆ.
ರಶ್ಮಿಕಾ ಮಲೇಷಿಯಾದ ಬ್ಲಾಗರ್-ಮಾಡೆಲ್ ಕ್ರಿಸ್ಟಿನ್ನಾ ಕುವಾನ್‌ಗೆ ತಮಿಳು/ತೆಲುಗು ಕಲಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. “ನನ್ನ ಹೊಸ ಫ್ರೆಂಡ್” ಎಂದು ಕುವಾನ್ ಬರೆದುಕೊಂಡಿದ್ದಾರೆ.
ಸದ್ಯ ರಶ್ಮಿಕಾ, ಪುಷ್ಪ 2’ ಮತ್ತು ‘ಛಾವಾ’ ಸಿನಿಮಾ ಡಿಸೆಂಬರ್‌ನಲ್ಲಿ ರಿಲೀಸ್‌ಗೆ ಸಿದ್ಧವಾಗಿದೆ. ಕುಬೇರ, ಸಿಖಂದರ್, ರೈನ್‌ಬೋ, ದಿ ಗರ್ಲ್‌ಫ್ರೆಂಡ್ ಚಿತ್ರಗಳು ರಶ್ಮಿಕಾ ಕೈಯಲ್ಲಿವೆ.
ಪುಷ್ಪ 2 ಚಿತ್ರವು ಡಿಸೆಂಬರ್ 6, 2024 ರಂದು ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ದೊಡ್ಡ ಪರದೆಯ ಮೇಲೆ ಬಿಡುಗಡೆಯಾಗಲಿದೆ.