Tirupati Laddu row- ವಿವಾದ ಹುಟ್ಟುಹಾಕಿರುವ ತಿರುಪತಿ ಲಡ್ಡಿನ ಬಗ್ಗೆ ನಿಮಗೆಷ್ಟು ಗೊತ್ತು?

Sumana Upadhyaya

ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯದ ಲಡ್ಡು ಜಗತ್ಪ್ರಸಿದ್ಧ. ಪ್ರತಿನಿತ್ಯ ಸಾವಿರಾರು, ಲಕ್ಷಾಂತರ ಭಕ್ತರು, ವಿಐಪಿಗಳು, ಉದ್ಯಮಿಗಳು, ರಾಜಕಾರಣಿಗಳಿಂದ ಪ್ರೀತಿಯಿಂದ ಉಡುಗೊರೆಯಾಗಿ ಹಂಚಲಾಗುವ ಲಡ್ಡು ಪ್ರಸಾದ ತಿಂಗಳಿಗೆ ಸುಮಾರು 1 ಕೋಟಿಯಷ್ಟು ಮಾರಾಟವಾಗುತ್ತದೆ.

ತಿರುಪತಿ ದೇವರ ವಿಗ್ರಹ, ತಿರುಮಲ ತಿರುಪತಿ ದೇವಸ್ಥಾನ (TTP) ಬ್ರಾಂಡ್ ಶಾಲು ಮತ್ತು ಕ್ಯಾಲೆಂಡರ್‌ನೊಂದಿಗೆ ಲಡ್ಡುವನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಅವರು ಪ್ರಧಾನ ಮಂತ್ರಿ ಸೇರಿದಂತೆ ಪ್ರಮುಖ ಕೇಂದ್ರ ಸರ್ಕಾರದ ಮಂತ್ರಿಗಳನ್ನು ಭೇಟಿಯಾದಾಗಲೆಲ್ಲಾ ಪಕ್ಷದ ರೇಖೆಗಳನ್ನು ಮೀರಿ ಪ್ರೀತಿಯಿಂದ ಉಡುಗೊರೆ ಕೊಡುತ್ತಾರೆ.

ಪವಿತ್ರ ಸಿಹಿತಿಂಡಿಗೆ ಎಷ್ಟು ಬೇಡಿಕೆಯಿದೆ ಎಂದರೆ ಕಳೆದ 10 ದಿನಗಳ ವಿಕುಂಟದ್ವಾರ ದರ್ಶನದಲ್ಲಿ ಕಳೆದ ವರ್ಷ 36 ಲಕ್ಷ ಲಡ್ಡುಗಳು ಮಾರಾಟವಾಗಿವೆ.

2019 ಮತ್ತು 2024 ರ ನಡುವೆ, ಮಾಜಿ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಪ್ರತಿ ಬಾರಿ ದೆಹಲಿಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವಾಲಯದ ಲಡ್ಡುಗಳು, ವಿಗ್ರಹಗಳು ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದರು.

ಜನವರಿಯಲ್ಲಿ ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠೆಗಾಗಿ, ಶ್ರೀ ವೆಂಕಟೇಶ್ವರ ದೇವಸ್ಥಾನದ ಅಧಿಕೃತ ಪಾಲಕರಾದ ಟಿಟಿಡಿ ಒಂದು ಲಕ್ಷಕ್ಕೂ ಹೆಚ್ಚು ಲಡ್ಡುಗಳನ್ನು ಸರಕು ವಿಮಾನದಲ್ಲಿ ಕಳುಹಿಸಿತ್ತು.

ದಶಕದ ಹಿಂದೆ, ತಿರುಪತಿ ಲಡ್ಡುವಿಗೆ ಭೌಗೋಳಿಕ ಸೂಚಕ (GI) ಗುರುತು ಸಹ ಸಿಕ್ಕಿತ್ತು.

ದಕ್ಷಿಣ ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಮತ್ತು ಟಿಟಿಡಿಯ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ ಎಲ್‌ವಿ ಸುಬ್ರಹ್ಮಣ್ಯಂ ಅವರು ತಿರುಪತಿ ಲಡ್ಡುವಿಗೆ 500 ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತಾರೆ.

ಶ್ರೀ ವೈಷ್ಣವರಿಂದ ಪ್ರತ್ಯೇಕವಾಗಿ ತಯಾರಿಸಲ್ಪಡುವ ಲಡ್ಡುವನ್ನು 'ಪೋತು' ನಲ್ಲಿ ತಯಾರಿಸಲಾಗುತ್ತದೆ, ಅಂದರೆ ಲಡ್ಡು ಮಾಡುವ ಅಡುಗೆಮನೆಯೆಂದೇ ಪ್ರತ್ಯೇಕವಾಗಿದೆ. ದೇವಾಲಯದ ಶಾಸನಗಳ ಪ್ರಕಾರ ಸಿಹಿತಿಂಡಿಯನ್ನು 1480 ರಲ್ಲಿ 'ಮನೋಹರಂ' ಎಂದು ಕರೆಯಲಾಗುತ್ತಿತ್ತು ಎಂದು ಟಿಟಿಡಿ ಮೂಲಗಳು ಹೇಳುತ್ತವೆ.

ಬೂಂದಿ, ಬೆಲ್ಲದ ಸಿರಪ್, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಲಡ್ಡುಗೆ ವಿಶಿಷ್ಟವಾದ ಸುವಾಸನೆ, ಪರಿಮಳ ಮತ್ತು ರುಚಿಯನ್ನು ನೀಡುತ್ತದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ತಿರುಪತಿ ಲಡ್ಡುವಿನ ಗುಣಮಟ್ಟ ಹಾಗೂ ಗಾತ್ರ ಕಡಿಮೆಯಾಗಿದ್ದು, ಮೊದಲಿನ ಗುಣಮಟ್ಟ ಇಲ್ಲ ಎಂಬುದು ಭಕ್ತರ ಬೇಸರವಾಗಿದೆ.

ಲಡ್ಡಿಗೆ ಬಳಸುವ ತುಪ್ಪವನ್ನು ಸಂಗ್ರಹಿಸುವುದು ಯಾವಾಗಲೂ ಸವಾಲಾಗಿದೆ ಎಂದು ಸುಬ್ರಹ್ಮಣ್ಯಂ ಹೇಳಿದರು, ವಿಶೇಷವಾಗಿ ಹೆಚ್ಚಿನ ಪ್ರಮಾಣದ ಡೈರಿ ಉತ್ಪನ್ನಗಳ ಅಗತ್ಯವಿದೆ.ದಿನಕ್ಕೆ 4,000 ಲೀಟರ್ (ಹಾಲು) ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವ ಡೈರಿಯಿಂದ ಟಿಟಿಡಿಯ ಬಳಕೆಗೆ ತುಪ್ಪ ತರಬಹುದು.

ಹಸುವಿನ ತುಪ್ಪದ ಬೆಲೆ ದುಬಾರಿಯಾಗಿರುವುದರಿಂದ, ವಸ್ತುವನ್ನು ಪೂರೈಸಲು ಸರ್ಕಾರಗಳು ಸಾಮಾನ್ಯವಾಗಿ ಎಲ್1 (ಕನಿಷ್ಠ ವೆಚ್ಚ) ಬಿಡ್ಡರ್‌ಗಳ ಮೊರೆ ಹೋಗುತ್ತವೆ. ಈ ಕಾರ್ಯವಿಧಾನವು ಪ್ರಸ್ತುತ ವಿವಾದಕ್ಕೆ ಕಾರಣವಾಗಿರಬಹುದುದು ಎಂದು ಮಾಜಿ ಮುಖ್ಯ ಕಾರ್ಯದರ್ಶಿ ಹೇಳುತ್ತಾರೆ.

ಸಾಮಾನ್ಯ ದಿನಗಳಲ್ಲಿ ಮೂರು ಲಕ್ಷದವರೆಗೆ ಲಡ್ಡುಗಳು ಬೇಕಾಗುತ್ತವೆ. ಹಬ್ಬದ ಸಂದರ್ಭಗಳಲ್ಲಿ ಇದು ಐದು ಲಕ್ಷದವರೆಗೆ ಬೇಡಿಕೆ ಬರುತ್ತದೆ ಎಂದರು. ಲಡ್ಡುಗಳನ್ನು ಸಮಯಕ್ಕೆ ಸರಿಯಾಗಿ ಉತ್ಪಾದಿಸುವುದು ಕೂಡ ಸಮಸ್ಯೆಯಾಗಿದೆ.

ಕಳೆದ ಕೆಲವು ದಿನಗಳಿಂದ ತಿರುಪತಿ ಲಡ್ಡು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ವೈಎಸ್‌ಆರ್‌ಸಿಪಿ ಆಡಳಿತದಲ್ಲಿ ಪ್ರಾಣಿಗಳ ಕೊಬ್ಬನ್ನು ಲಡ್ಡು ತಯಾರಿಸಲು ಬಳಸಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರು ಚಂದ್ರಬಾಬು ನಾಯ್ಡು ಅವರ 100 ದಿನಗಳ ಆಡಳಿತದಲ್ಲಿ ಏನೂ ಮಾಡಲು ಸಾಧ್ಯವಾಗದಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಆರೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಚಂದ್ರಬಾಬು ನಾಯ್ಡು ಅವರಿಂದ 'ವಿವರವಾದ ವರದಿ' ಕೇಳಿದೆ.