'ನಿಮ್ಮೆಲ್ಲರ ಪ್ರೀತಿಗೆ ಶರಣು': ಹೈದರಾಬಾದ್ ನಲ್ಲಿ ಮೆಸ್ಸಿ ಮೇನಿಯಾ
Sumana Upadhyaya
ಗೋಟ್ ಇಂಡಿಯಾ ಟೂರ್ ಭಾಗವಾಗಿ ಜಾಗತಿಕ ಫುಟ್ಬಾಲ್ ಐಕಾನ್ ಲಿಯೋನೆಲ್ ಮೆಸ್ಸಿ ಕಾಲಿಡುತ್ತಿದ್ದಂತೆ ಹೈದರಾಬಾದ್ ನಗರವು ಫುಟ್ಬಾಲ್ ಜ್ವರದ ಉತ್ತುಂಗದಲ್ಲಿತ್ತು. ಭಾರಿ ಉತ್ಸಾಹ ಮತ್ತು ಬಿಗಿ ಭದ್ರತೆಯ ನಡುವೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.
ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ತಮ್ಮ ತಂಡದೊಂದಿಗೆ ಮೈದಾನಕ್ಕೆ ಹೆಜ್ಜೆ ಹಾಕಿದರು, ಜೋರಾಗಿ ಹರ್ಷೋದ್ಗಾರಗಳು ಕೇಳಿಬಂದವು. ಸ್ವಲ್ಪ ಸಮಯದ ನಂತರ, ಮೆಸ್ಸಿ ಹಸಿರು ಬಣ್ಣದ ಕ್ರೂನೆಕ್ ಅರ್ಧ ತೋಳಿನ ಟಿ-ಶರ್ಟ್, ಕಪ್ಪು ಪ್ಯಾಂಟ್ ಮತ್ತು ಸ್ಪೋರ್ಟ್ ಶೂಗಳನ್ನು ಧರಿಸಿ ಕಾಣಿಸಿಕೊಂಡರು.
ಮೈದಾನಕ್ಕೆ ಕಾಲಿಟ್ಟಾಗ, ಕ್ರೀಡಾಂಗಣವು ಮೆಸ್ಸಿ..ಮೆಸ್ಸಿ ಎಂಬ ಘೋಷಣೆಗಳೊಂದಿಗೆ ಕಿವಿಗಡಚಿಕ್ಕುವಂತೆ ಸದ್ದು ಕೇಳಿಬಂತು. ಫೋನ್‌ಗಳು ಸದ್ದು ಮಾಡಿದವು, ಧ್ವನಿಗಳು ಸಿಡಿದವು, ಮತ್ತು ಕ್ರೀಡಾಂಗಣ ನಡುಗಿನ ಭಾಸವಾಯಿತು.
ಮೆಸ್ಸಿ ಅಭಿಮಾನಿಗಳತ್ತ ಕೈ ಬೀಸಿದರು, ರೇವಂತ್ ರೆಡ್ಡಿಯವರ ಜೊತೆ ಮೆಸ್ಸಿ ಆಟವಾಡಿದರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾದರು, ಇಬ್ಬರೂ ಸುವಾರೆಜ್, ಡಿ ಪಾಲ್ ಮತ್ತು ರೇವಂತ್ ರೆಡ್ಡಿಯವರೊಂದಿಗೆ ಫೋಟೋ ತೆಗೆಸಿಕೊಂಡರು.
ನಂತರ ಮೆಸ್ಸಿ ಪ್ರದರ್ಶನ ಪಂದ್ಯದ ವಿಜೇತರಿಗೆ GOAT ಕಪ್ ನ್ನು ಪ್ರದಾನ ಮಾಡಿದರು.
"ನಿಮ್ಮೆಲ್ಲರ ಪ್ರೀತಿಗೆ ತುಂಬಾ ಧನ್ಯವಾದಗಳು. ಭಾರತದಲ್ಲಿ ಈ ದಿನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತಿರುವುದು ನಮಗೆ ಗೌರವ. ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ" ಎಂದು ಮೆಸ್ಸಿ ಸ್ಪ್ಯಾನಿಷ್ ಭಾಷೆಯಲ್ಲಿ ಹೇಳಿದರು,
ರೇವಂತ್ ರೆಡ್ಡಿ ಮೆಸ್ಸಿಗೆ ಟ್ರೋಫಿಯನ್ನು ನೀಡುವುದರೊಂದಿಗೆ ಕಾರ್ಯಕ್ರಮವು ಮುಕ್ತಾಯವಾಯಿತು. ಅರ್ಜೆಂಟೀನಾ ಜೆರ್ಸಿಯನ್ನು ರಾಹುಲ್ ಗಾಂಧಿಗೆ ನೀಡಲಾಯಿತು.
ಮೈದಾನದಲ್ಲಿ ಮೆಸ್ಸಿ ಜೊತೆ ಆಟವಾಡಿದ ಸಿಎಂ ರೇವಂತ್ ರೆಡ್ಡಿ
ರೇವಂತ್ ರೆಡ್ಡಿ
ಝಗಮಗಿಸುವ ರಾತ್ರಿಯ ಬೆಳಕಿನಲ್ಲಿ ವೈಭವೋಪೇತ ಕಾರ್ಯಕ್ರಮಗಳೊಂದಿಗೆ ಮುಕ್ತಾಯವಾಯಿತು