Dhananjay- Dhanyatha wedding: ಅರಿಶಿನ ಶಾಸ್ತ್ರದಲ್ಲಿ ನವ ಜೋಡಿ

Srinivas Rao BV

ನಟ ಡಾಲಿ ಧನಂಜಯ್- ಧನ್ಯತಾ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಿಂದ ನಡೆಯುತ್ತಿದೆ. ಇದರ ಭಾಗವಾಗಿ ಫೆ.14 ರಂದು ಅರಿಶಿನ ಶಾಸ್ತ್ರ ನಡೆಯಿತು.

ನವ ವಧು-ವರರಿಗೆ ಸ್ನೇಹಿತರು- ಸಂಬಂಧಿಕರು ಅರಿಶಿನ ಹಚ್ಚಿ ಸಂಭ್ರಮಿಸಿದರು. ಧನ್ಯತಾ ಕೂಡ ಭಾವಿ ಪತಿಗೆ ಹಳದಿ ಹಚ್ಚಿದರು.

ಡಾಲಿ ಹಳದಿ ಶಾಸ್ತ್ರದ ಫೋಟೋಸ್​ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

2024 ರ ನವೆಂಬರ್ ನಲ್ಲಿ ನಟ ಡಾಲಿ ಧನಂಜಯ್- ಧನ್ಯತ ನಿಶ್ಚಿತಾರ್ಥ ನಡೆದಿತ್ತು.

ಡಾಲಿ ಧನಂಜಯ ಅವರ ಅಂಚೆ ಪತ್ರದ ಮಾದರಿಯ ಆಹ್ವಾನ ಪತ್ರಿಕೆ ವ್ಯಾಪಕ ವೈರಲ್ ಆಗಿತ್ತು.

ಡಾಲಿ ಧನಂಜಯ ಸ್ವತಃ ತಮ್ಮ ಕೈ ಬರವಣಿಗೆಯಲ್ಲಿ ಆಹ್ವಾನ ಪತ್ರಿಕೆ ಬರೆದು ಅದನ್ನು ಮುದ್ರಿಸಿ ಹಂಚಿದ್ದರು.

ಧನಂಜಯ್ ಮದುವೆ ಆಮಂತ್ರಣ ಪತ್ರಿಕೆ ಮೆಚ್ಚಿ ಧನಂಜಯ್-ಧನ್ಯತಾಗೆ ಅಂಚೆ ಇಲಾಖೆ ಸ್ಪೆಷಲ್ ಉಡುಗೊರೆ ನೀಡಿತ್ತು. ಶುಭ ವಿವಾಹ ಎಂಬ ಮುದ್ರಣದೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್ ಗಳನ್ನ ಉಡುಗೊರೆಯಾಗಿ ನೀಡಿದೆ.

ಅರಿಶಿನ ಶಾಸ್ತ್ರದಲ್ಲಿ ನಟಿ ಸಪ್ತಮಿ ಗೌಡ ಭಾಗಿಯಾಗಿದ್ದರು

ಫೆಬ್ರವರಿ 15 ಮತ್ತು 16 ರಂದು ಮೈಸೂರಿನಲ್ಲಿ ಧನಂಜಯ್ - ಧನ್ಯತಾ ಕಲ್ಯಾಣ ಅದ್ಧೂರಿಯಾಗಿ ನಡೆಯಲಿದೆ.

ಸ್ನೇಹಿತರು- ಸಂಬಂಧಿಕರೊಂದಿಗೆ ಸಂಭ್ರಮದ ಕ್ಷಣಗಳಲ್ಲಿ ಧನಂಜಯ- ಧನ್ಯತ ಜೋಡಿ...

ಡಾಲಿ ಧನಂಜಯ-ಧನ್ಯತಾ ಇನ್ ಲ್ಯಾಂಡ್ ಲೇಟರ್ ಮಾದರಿ ಮದುವೆ ಆಮಂತ್ರಣಕ್ಕೆ ಅಂಚೆ ಇಲಾಖೆ ಫೀದಾ!