ಸ್ಯಾಂಡಲ್ ವುಡ್ ನ ಜನಪ್ರಿಯ ನಟ ಡಾಲಿ ಧನಂಜಯ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚಿತ್ರದುರ್ಗ ಮೂಲದ ವೈದ್ಯೆ ಡಾಕ್ಟರ್ ಧನ್ಯತಾ ಜೊತೆ ಅವರು ವಿವಾಹ ಕಾರ್ಯಕ್ರಮ ಮೈಸೂರಿನಲ್ಲಿ ವೈಭವೋಪೇತವಾಗಿ ನಡೆದಿದೆ.
ಬಹಳ ಅದ್ದೂರಿಯಾಗಿ ನೆರವೇರಿದ ಡಾಲಿ ಧನಂಜಯ ಅವರ ಮದುವೆ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು, ರಾಜಕಾರಣಿಗಳು ಭಾಗಿಯಾಗಿದ್ದಾರೆ. ಅಪಾರ ಸಂಖ್ಯೆಯಲ್ಲಿ ಡಾಲಿ ಅಭಿಮಾನಿಗಳು ಕೂಡ ಬಂದು ಊಟ ಮಾಡಿಕೊಂಡು ಹೋಗಿದ್ದಾರೆ.
ಡಾಲಿ ಧನಂಜಯ ಹಾಗೂ ಧನ್ಯತಾ ಅವರಿಗೆ ಮೈಸೂರು ಇಷ್ಟದ ಸ್ಥಳವಾದ್ದರಿಂದ ಮೈಸೂರಿನಲ್ಲೇ ದೇವಸ್ಥಾನದ ಥೀಮ್ನಲ್ಲಿ ಮದುವೆ ಮಂಟಪ ಸಿದ್ಧಮಾಡಿ ಮದುವೆಯಾಗಿದ್ದಾರೆ.
ಮೈಸೂರಿನ ಎಕ್ಸಿಬಿಷಬ್ ಗ್ರೌಂಡ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆದಿದೆ. ಮದುವೆಗೆ ಸಾವಿರಾರು ಮಂದಿ ಆಗಮಿಸಿದ್ದು, ಇಂದು ಬೆಳಗ್ಗೆ ಮೀನಾ ಲಗ್ನದಲ್ಲಿ ಧನಂಜಯ ಅವರು ಧನ್ಯತಾಗೆ ತಾಳಿ ಕಟ್ಟಿದ್ದಾರೆ.
ಮದುವೆಗೆ ಬಂದವರಿಗೆ ಹೋಳಿಗೆ ಊಟ ಹಾಕಿಸಬೇಕು ಎಂಬುದು ನಟ ಧನಂಜಯ ಅವರ ಆಸೆ ಆಗಿತ್ತು. ಹಾಗಾಗಿ, ಮದುವೆಗೆ ಬಂದ ಎಲ್ಲರಿಗೂ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ರಾಜಕಾರಣಿಗಳು, ಚಿತ್ರರಂಗದವರು, ಬಂಧುಗಳು, ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ನೂತನ ದಂಪತಿಗೆ ಶುಭಕೋರಿದರು.
ಮದುವೆ ಹಿಂದಿನ ದಿನ ನಡೆದ ಶಾಸ್ತ್ರಗಳು
ನಟನಾಗಿ, ನಿರ್ಮಾಪಕನಾಗಿ ಡಾಲಿ ಧನಂಜಯ್ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.
ಗೋಪುರ ಮಾದರಿಯಲ್ಲಿ ಸಿದ್ಧಪಡಿಸಿರುವ ವಿಶೇಷವಾದ ಅದ್ಧೂರಿ ಸೆಟ್‌ನಲ್ಲಿ ಡಾಲಿ ಮದುವೆ ಸಂಭ್ರಮ ಮನೆ ಮಾಡಿತ್ತು.
ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾಲಿಗೆ ಧನ್ಯತಾ ಪರಿಚಯವಾಗಿ ನಂತರ ಸ್ನೇಹಿತರಾಗಿ ಇಬ್ಬರೂ ಪ್ರೀತಿಸಲು ಆರಂಭಿಸಿದರು. ಇದೀಗ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ.