ಪ್ರವಾಹ ಪೀಡಿತ ಹಿಮಾಚಲ ಪ್ರದೇಶದಲ್ಲಿ ಉಳಿವಿಗಾಗಿ ಹೋರಾಟ; Photos

Online Team

ಮೇಘಸ್ಫೋಟ, ದಿಢೀರ್ ಪ್ರವಾಹ ಮತ್ತು ಭೂಕುಸಿತಗಳ ನಂತರ ಕಾಣೆಯಾದ 30 ಜನರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ಡ್ರೋನ್‌ ಮತ್ತು ಸ್ನಿಫರ್ ನಾಯಿಗಳನ್ನು ಬಳಸಿ ತುನಾಗ್, ಗೋಹರ್ ಮತ್ತು ಕರ್ಸೋಗ್‌ನಲ್ಲಿ ಶೋಧ ನಡೆಸುತ್ತಿವೆ.

ಸುಮಾರು 225 ಮನೆಗಳು, ಏಳು ಅಂಗಡಿಗಳು, 243 ದನದ ಕೊಟ್ಟಿಗೆಗಳು, 31 ವಾಹನಗಳು, 14 ಸೇತುವೆಗಳು ಮತ್ತು ಹಲವಾರು ರಸ್ತೆಗಳು ಈ ದುರಂತದಲ್ಲಿ ಹಾನಿಗೊಳಗಾಗಿವೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮಂಡಿಯಲ್ಲಿ ಪ್ರವಾಹ ಪೀಡಿತ ಜನರನ್ನು ಭೇಟಿ ಮಾಡಿದರು.

ಎನ್‌ಡಿಆರ್‌ಎಫ್, ಸೇನೆ, ಐಟಿಬಿಪಿ, ಎಸ್‌ಡಿಆರ್‌ಎಫ್ ಮತ್ತು ಗೃಹರಕ್ಷಕ ದಳದ ಸುಮಾರು 250 ರಕ್ಷಣಾ ಸಿಬ್ಬಂದಿ ಸ್ಥಳೀಯರಿಗೆ ನೆರವಾಗುತ್ತಿದ್ದಾರೆ.

ಒಟ್ಟು 572 ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಅಂದಾಜಿಸಿದೆ. ನಿಜವಾದ ಅಂಕಿ ಅಂಶವು ಅಂದಾಜು 700 ಕೋಟಿ ರೂ ಇರಬಹುದು ಎಂದು ಮುಖ್ಯಮಂತ್ರಿ ಸುಖು ಹೇಳಿದರು.

ತುನಾಗ್‌ನಲ್ಲಿ ಸಂಭವಿಸಿದ ಭೀಕರ ಪ್ರವಾಹದ ಪರಿಣಾಮ ಹಿಮಾಚಲ ಪ್ರದೇಶ ತತ್ತರಿಸಿದೆ.

ಬಿಜೆಪಿ ಸಂಸದೆ ಕಂಗನಾ ರನೌತ್ ಮಂಡಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು.

ಇಲ್ಲಿಯವರೆಗೆ 494 ಜನರನ್ನು ರಕ್ಷಿಸಲಾಗಿದೆ, ಆದರೆ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಪರಿಹಾರ ಕಾರ್ಯಾಚರಣೆಗಾಗಿ ತುನಾಗ್ ಮತ್ತು ಜಂಝೇಲಿಗೆ ಹೆಚ್ಚುವರಿಯಾಗಿ 5 ಲಕ್ಷ ರೂ.ಗಳನ್ನು ಕಳುಹಿಸಲಾಗಿದೆ.

ಇಲ್ಲಿಯವರೆಗೆ 1,538 ಪಡಿತರ ಕಿಟ್‌ಗಳನ್ನು ಸಂತ್ರಸ್ತರಿಗೆ ವಿತರಿಸಲಾಗಿದ್ದು, ತಕ್ಷಣದ ಪರಿಹಾರವಾಗಿ 12.44 ಲಕ್ಷ ರೂ ನೀಡಲಾಗಿದೆ.

ಹಿಮಾಚಲ ಪ್ರದೇಶ: 30 ಜನ ನಾಪತ್ತೆ