IPL 2025: RCB ಗೆಲುವನ್ನು ವಿರುಷ್ಕಾ ಜೋಡಿ ಆಚರಿಸಿದ್ದು ಹೀಗೆ!
Sumana Upadhyaya
ಕಾಯುವಿಕೆಗೆ ಫಲ ಸಿಕ್ಕಿದೆ. 18 ವರ್ಷಗಳ ನಂತರ ಐಪಿಎಲ್ ಕಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆದ್ದುಕೊಂಡಿದೆ.
ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಐಪಿಎಲ್ 2025 ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತಮ್ಮ 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು. ಭಾವುಕರಾದ ಕೊಹ್ಲಿ, ಬಹುನಿರೀಕ್ಷಿತ ವಿಜಯೋತ್ಸವವನ್ನು ಆಚರಿಸುವಾಗ ಸಂತೋಷದ ಕಣ್ಣೀರು ಸುರಿಸಿದರು.
ವಿರಾಟ್ ಅವರ ಸೋಲು-ಗೆಲುವುಗಳಲ್ಲಿ ಅನುಷ್ಕಾ ಜೊತೆಜೊತೆಯಾಗಿರುತ್ತಾರೆ. ಕ್ಯಾಮರಾ ಕಣ್ಣುಗಳು ಈ ಜೋಡಿಯ ಮೇಲೆಯೇ ಓಡಾಡುತ್ತವೆ. ನಿನ್ನೆ ಆರ್ ಸಿಬಿ ಮ್ಯಾಚ್ ಗೆದ್ದಾಗ ವಿರಾಟ್-ಅನುಷ್ಕಾ ದಂಪತಿ ಮೈದಾನದಲ್ಲಿ ಓಡಾಡಿ ಸಂಭ್ರಮಿಸಿದರು.
ಐಪಿಎಲ್ ಉದ್ದಕ್ಕೂ ಪತಿಯ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದ ಅನುಷ್ಕಾ ಕೊಹ್ಲಿ ಮತ್ತು ತಂಡದೊಂದಿಗೆ ಸಂಭ್ರಮಾಚರಣೆಯಲ್ಲಿ ಸೇರಿಕೊಂಡರು. ಅನುಷ್ಕಾ ಭಾವುಕರಾದ ಕೊಹ್ಲಿಯನ್ನು ಅಪ್ಪಿಕೊಂಡರು.
ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮವನ್ನು 'ನಂಬಲಾಗದ ಭಾವನೆ' ಎಂದು ವಿರಾಟ್ ಕೊಹ್ಲಿ ಬಣ್ಣಿಸಿದ್ದಾರೆ. 'ನಾನು ದೊಡ್ಡ ಪಂದ್ಯಾವಳಿಗಳನ್ನು, ದೊಡ್ಡ ಕ್ಷಣಗಳನ್ನು ಗೆಲ್ಲಲು ಬಯಸುವ ವ್ಯಕ್ತಿ, ಇತ್ತೀಚೆಗೆ ಅದು ಕಾಣೆಯಾಗಿತ್ತು. ಇಂದು ರಾತ್ರಿ, ನಾನು ಮಗುವಿನಂತೆ ನಿದ್ದೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಆರ್ ಸಿಬಿ ಚಾಂಪಿಯನ್ ಕಲಿಗಳಿವರು
ಮೈದಾನದಲ್ಲಿ ವಿರುಷ್ಕಾ ಜೋಡಿ ಅಭಿಮಾನಿಗಳ ಖುಷಿ, ಸಂಭ್ರಮ, ಕೇಕೆ ಕಂಡು ಸಂತೋಷಪಟ್ಟಿದ್ದು ಹೀಗೆ
ಈ ಗೆಲುವು ದೊಡ್ಡದು. ನನ್ನ ಹೃದಯ ಬೆಂಗಳೂರಿನೊಂದಿಗೆ ಇದೆ, ನನ್ನ ಆತ್ಮ ಬೆಂಗಳೂರಿನೊಂದಿಗೆ ಇದೆ. ನಾನು ದೊಡ್ಡ ಪಂದ್ಯಾವಳಿಗಳು ಮತ್ತು ಕ್ಷಣಗಳನ್ನು ಗೆಲ್ಲಲು ಬಯಸುತ್ತೇನೆ. ಈ ರಾತ್ರಿ ನಾನು ಮಗುವಿನಂತೆ ಮಲಗುತ್ತೇನೆ ಎಂದು ಕೊಹ್ಲಿ ಭಾವುಕರಾಗಿ ಹೇಳಿದರು.
ವಿರುಷ್ಕಾ ದಂಪತಿ
ಮೈದಾನದಲ್ಲಿ ಖುಷಿಯಿಂದ ಕ್ರಿಕೆಟ್ ಪ್ರೇಮಿಗಳಿಗೆ ಧನ್ಯವಾದ ಹೇಳಿದ ದಂಪತಿ