ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರೊಂದಿಗೆ ಬೆಂಗಳೂರಿನಲ್ಲಿ ಇಂದು ವಿವಾಹವಾಗಿದ್ದಾರೆ. ಕನಕಪುರ ರಸ್ತೆಯ ರೆಸಾರ್ಟ್‌ನಲ್ಲಿ ನಡೆದ ಸರಳ ವಿವಾಹದಲ್ಲಿ ಕುಟುಂಬ ಸದಸ್ಯರು, ಆಪ್ತರು, ಬಿಜೆಪಿ ರಾಜಕೀಯ ನಾಯಕರು ಭಾಗವಹಿಸಿದ್ದರು.
ಇಂದು ಬೆಳಗ್ಗೆ 10.45 ತುಲಾ ಲಗ್ನದಲ್ಲಿ ಶಿವಶ್ರಿ ಕೊರಳಿಗೆ ತೇಜಸ್ವಿ ಸೂರ್ಯ ಮಾಂಗಲ್ಯಧಾರಣೆ ಮಾಡಿದ್ದಾರೆ. ಇಂದೇ ಶಿವಶ್ರೀ ಅವರನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಲಿದೆ. ಮದುವೆಗೆ ಕೇಂದ್ರ ಸಚಿವ ವಿ,ಸೋಮಣ್ಣ, ಬಿ ಎಲ್ ಸಂತೋಷ್, ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ , ತಮಿಳು ನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಸೇರಿದಂತೆ ವಿವಿಧ ರಾಜಕೀಯ ನಾಯಕರು, ಗಣ್ಯರು ಆಗಮಿಸಿ ನವಜೋಡಿಗೆ ಆಶೀರ್ವದಿಸಿದ್ದಾರೆ.
ಮಾರ್ಚ್ 9ರಂದು ಭಾನುವಾರ ಹಗಲು ನವಜೋಡಿಗಳು ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದು ಅದರಲ್ಲಿ ಬಿಜೆಪಿಯ ರಾಜ್ಯ, ರಾಷ್ಟ್ರಮಟ್ಟದ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.
ಮದುವೆ ಕಾರ್ಯಕ್ರಮದ ಶಾಸ್ತ್ರಗಳು
ವರ ತೇಜಸ್ವಿ ಸೂರ್ಯ
ಬ್ರಾಹ್ಮಣ ಸಂಪ್ರದಾಯ ಪ್ರಕಾರ ನೆರವೇರಿದ ಮದುವೆ ಕಾರ್ಯಕ್ರಮ
ಮದುವೆ ಮುನ್ನಾದಿನ ವರನ ಮನೆಯಲ್ಲಿ ನೆರವೇರಿದ ಶಾಸ್ತ್ರಗಳು
ಮದುವೆಯಲ್ಲಿ ಭಾಗಿಯಾದ ರಾಜಕೀಯ ನಾಯಕರು
ಕಾರ್ಯಕ್ರಮಕ್ಕೆ ಬಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ತೇಜಸ್ವಿ ಸೂರ್ಯ ಅವರ ಸ್ನೇಹಿತ ಮಾಜಿ ಸಂಸದ ಪ್ರತಾಪ್ ಸಿಂಹ ಮದುವೆಗೆ ಬಂದ ಅತಿಥಿಗಳನ್ನು ಆಹ್ವಾನಿಸುತ್ತಿದ್ದರು.
ಕೇಂದ್ರ ಸಚಿವ ವಿ ಸೋಮಣ್ಣ ಹಾಗೂ ಇತರರು
ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಹಾಗೂ ಲೋಕೋಪಕಾರಿ ರೇವತಿ ಕಾಮತ್ ಮದುವೆಗೆ ಬಂದಿದ್ದರು
ಶಿವಶ್ರೀ ಸ್ಕಂದಪ್ರಸಾದ್ ಮೂಲತಃ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆ, ಅವರ ಗಾಯನವನ್ನು ಹಿಂದೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮೆಚ್ಚಿಕೊಂಡಿದ್ದರು. ಸಂಸದ ತೇಜಸ್ವಿ ಸೂರ್ಯ ಕೂಡ ಗಾಯಕರಾಗಿದ್ದು, ಕಲಾಪ್ರಿಯರು.
ತಮಿಳು ಬ್ರಾಹ್ಮಣ ಸಂಪ್ರದಾಯ ಹಾಗೂ ಕನ್ನಡ ಬ್ರಾಹ್ಮಣ ಸಂಪ್ರದಾಯಗಳ ಪ್ರಕಾರ ವಿವಾಹ ಮಹೋತ್ಸವ ನೆರವೇರಿದವು.
ವರ ವಧುವಿಗೆ ತಾಳಿ ಕಟ್ಟಿದ ಶುಭಗಳಿಗೆ
ಇವರ ಆರತಕ್ಷತೆ ಕಾರ್ಯಕ್ರಮ ಮಾರ್ಚ್ 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಲಿದೆ.