Aamir Khan ಹೊಸ ಗರ್ಲ್ ಫ್ರೆಂಡ್ ಗೌರಿ ಸ್ಪ್ರಾಟ್ ಯಾರು?

Sumana Upadhyaya

ಬಾಲಿವುಡ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಮಾರ್ಚ್ 14ರಂದು 60 ವರ್ಷದ ಹುಟ್ಟುಹಬ್ಬದ ಸಂಭ್ರಮ. ಅವರು ಈ ಬಾರಿ ಹೆಚ್ಚಿಗೆ ಸುದ್ದಿಯಾಗಿದ್ದು ಈ ಇಳಿ ವಯಸ್ಸಲ್ಲಿ ತಮ್ಮ ಮೂರನೇ ಸಂಗಾತಿಯನ್ನು ಪರಿಚಯಿಸುವ ಮೂಲಕ.

ನಿನ್ನೆ ಮಾಧ್ಯಮ ಮಿತ್ರರು, ಫೋಟೋಗ್ರಾಫರ್ ಗಳ ಮುಂದೆ ಕೇಕ್ ಕಟ್ ಮಾಡಿದ ಅಮೀರ್ ಖಾನ್ ಪ್ರಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದರು. ಅದರಲ್ಲಿ ಮಾಜಿ ಪತ್ನಿಯರಾದ ಕಿರಣ್ ರಾವ್, ರೀನಾ ದತ್ ಕೂಡ ಹಾಜರಿದ್ದರು. ತಮಾಷೆಯಾಗಿ ಮಾತನಾಡುತ್ತಾ ತಮ್ಮ ಗೆಳತಿಯ ಹೆಸರನ್ನು ಬಹಿರಂಗಪಡಿಸಿಯೇ ಬಿಟ್ಟರು. ಈ ಮೂಲಕ ಕಳೆದ ಕೆಲ ದಿನಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟರು.

ಅಮೀರ್ ಖಾನ್ ಅವರ 60ನೇ ವಯಸ್ಸಿನಲ್ಲಿ ಅವರ ಬಾಳಿನಲ್ಲಿ ಬಂದ ಸಂಗಾತಿಯ ಹೆಸರು ಗೌರಿ ಸ್ಪ್ರಾಟ್. ದೀರ್ಘ ಕಾಲದಿಂದ ಗೌರಿ ತಮಗೆ ಪರಿಚಯವಿದ್ದು ಕಳೆದೊಂದು ವರ್ಷದಿಂದ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಗೌರಿ ಬೆಂಗಳೂರಿನವರು, 25 ವರ್ಷಗಳಿಂದ ಪರಿಚಯ. ಕಳೆದ ಒಂದೂವರೆ ವರ್ಷಗಳಿಂದ ಸಂಪರ್ಕದಲ್ಲಿದ್ದು ಜೊತೆಯಾಗಿದ್ದೇವೆ. ಆಕೆ ಮುಂಬೈಯಲ್ಲಿದ್ದಾಗ ನಾವು ಆಕಸ್ಮಿಕವಾಗಿ ಭೇಟಿಯಾಗಿ ಪರಿಚಯವಾಗಿ ಹತ್ತಿರವಾದೆವು. ನಂತರ ಎಲ್ಲವೂ ಸಹಜವಾಗಿ ಸಾಗಿತು ಎಂದು ಅಮೀರ್ ಖಾನ್ ಹೇಳುತ್ತಾರೆ.

ನಿನ್ನೆ ಅಮೀರ್ ಖಾನ್ ಅವರ ಪ್ರಿ ಬರ್ತ್ ಡೇ ಪಾರ್ಟಿಯಲ್ಲಿ ಅವರ ಕುಟುಂಬಸ್ಥರು, ಸಮೀಪದ ಹಿತೈಷಿಗಳು, ಬಾಲಿವುಡ್ ನಿಂದ ಸಲ್ಮಾನ್ ಖಾನ್, ಶಾರೂಖ್ ಖಾನ್ ಹಾಜರಿದ್ದರು. ಗೌರಿ ಸಹ ಪಾರ್ಟಿಗೆ ಜೊತೆಯಾಗಿದ್ದರು.

ಈ ವೇಳೆ ಅಮೀರ್ ಖಾನ್ ಹೇಗೆ ರೊಮ್ಯಾಂಟಿಕ್ ಆಗಿರ್ತಾರಾ ಎಂಬ ಪ್ರಶ್ನೆ ಕೇಳಿಬಂತು. ಅದಕ್ಕೆ ಗೌರಿ ಅಮೀರ್ ನನಗಾಗಿ ಪ್ರತಿದಿನ ಏನಾದರೊಂದು ಹೊಸತನ್ನು ಮಾಡುತ್ತಿರುತ್ತಾರೆ ಎಂದರು. ಪ್ರಿಬರ್ತ್ ಡೇ ಪಾರ್ಟಿಯಲ್ಲಿ ಗೌರಿ ಕೈಹಿಡಿದು 1976ರ ಚಿತ್ರ ಕಬಿ ಕಬಿ ಮೇರೆ ದಿಲ್ ಮೆ ಹಾಡನ್ನು ಹಾಡಿದ ಅಮೀರ್ ಖಾನ್ ತಾನು ಆಗಾಗ ಗೌರಿಗಾಗಿ ಹಾಡುತ್ತಿರುತ್ತೇನೆ ಎಂದಿದ್ದಾರೆ.

ಬೆಂಗಳೂರು ಮೂಲದ ಗೌರಿಯ ತಾಯಿ ರಿಟಾ ಸ್ಪ್ರಾಟ್, ತಾಯಿ ಪಂಜಾಬಿ-ಐರಿಷ್ ಮೂಲದವರಾದರೆ ತಂದೆ ತಮಿಳು-ಬ್ರಿಟಿಷ್ ಮೂಲದವರು. ಅವರಿಗೆ ಬೆಂಗಳೂರಿನಲ್ಲಿ ಸಲೋನ್ ನಡೆಸುತ್ತಿದ್ದರು. ಗೌರಿ ತಮ್ಮ ಜೀವನದ ಅನೇಕ ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದಿದ್ದಾರೆ.

ಬ್ಲೂ ಮೌಂಟೇನ್ ಶಾಲೆಯಲ್ಲಿ ಓದಿದ್ದ ಗೌರಿ ಫ್ಯಾಶನ್ ಕೋರ್ಸ್ ಮಾಡಿದ್ದಾರೆ. ಲಂಡನ್ ನ ಸ್ಕೂಲ್ ಆಫ್ ಆರ್ಟ್ಸ್ ನಿಂದ ಎಫ್ ಡಿಎ ಸ್ಟೈಲಿಂಗ್ ಅಂಡ್ ಫೋಟೋಗ್ರಾಫಿ ಕೋರ್ಸ್ ನ್ನು 2004ರಲ್ಲಿ ಮಾಡಿದ್ದಾರೆ. ಪ್ರಸ್ತುತ ಮುಂಬೈಯಲ್ಲಿ ಬಿಬ್ಲಂಟ್ ಸಲೋನ್ ನಡೆಸುತ್ತಿದ್ದಾರೆ. ಅಮೀರ್ ಖಾನ್ ಅವರ ಪ್ರೊಡಕ್ಷನ್ ಹೌಸ್ ನಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos