ಸಿಂಧೂರ ಧರಿಸಿ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ Aishwarya Rai Bachchan

Sumana Upadhyaya

ದಂತ ಬಣ್ಣದ ಸೀರೆ, ಟಿಶ್ಯೂ ಬಟ್ಟೆ ಮತ್ತು ಕುತ್ತಿಗೆಗೆ ಮಾಣಿಕ್ಯದ ಹಾರ, ಹಣೆಯಲ್ಲಿ ಸಿಂಧೂರ ಮೂಲಕ ಈ ವರ್ಷದ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದಾರೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್.

ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರಸಿಂದೂರ್ ನಂತರ ಸಿಂಧೂರ ಬಹಳ ಸದ್ದು ಮಾಡಿತು. ಇದೀಗ ಅಂತಾರಾಷ್ಟ್ರೀಯ ಮಟ್ಟದ ಚಲನಚಿತ್ರೋತ್ಸವದಲ್ಲಿ ಹಣೆಗೆ ಸಿಂದೂರ ಧರಿಸಿ ಐಶ್ವರ್ಯಾ ರೈ ಬಚ್ಚನ್, ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಕಂಗೊಳಿಸಿದ್ದಾರೆ ಎಂಬ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕಳೆದ ಕೆಲವು ತಿಂಗಳ ಹಿಂದೆ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ಡಿವೋರ್ಸ್ ವಿಷಯ ಸಾಕಷ್ಟು ಸದ್ದು ಮಾಡಿತ್ತು. ಹಣೆಗೆ ಸಿಂದೂರ ಧರಿಸುವ ಮೂಲಕ ಐಶ್ವರ್ಯಾ ಆ ವದಂತಿಗೆ ತಕ್ಕ ಉತ್ತರ ನೀಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

ಐಶ್ವರ್ಯಾ ಅವರ ಸೀರೆಯನ್ನು ಡಿಸೈನ್ ಮಾಡಿದ್ದು ಖ್ಯಾತ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ. ಕಡ್ವಾ ಬನಾರಸಿ ಕೈಮಗ್ಗದ ಸೀರೆಯು ದಂತ ಬಣ್ಣದಿಂದ ಕೂಡಿದೆ. ಸೀರೆಯನ್ನು ಕೈಯಿಂದ ನೇಯ್ದ ಟಿಶ್ಯೂ ಡ್ರೇಪ್ ಮತ್ತು ಮನೀಶ್ ಮಲ್ಹೋತ್ರಾ ಜ್ಯುವೆಲ್ಲರಿಯ ಉನ್ನತ ಆಭರಣದೊಂದಿಗೆ ಜೋಡಿಸಲಾಗಿದೆ. ಹಾರವು 500 ಕ್ಯಾರೆಟ್‌ಗಳಿಗೂ ಹೆಚ್ಚು ಮೊಜಾಂಬಿಕ್ ಮಾಣಿಕ್ಯಗಳು ಮತ್ತು 18 ಕೆ ಚಿನ್ನದಲ್ಲಿ ವಜ್ರಗಳನ್ನು ಒಳಗೊಂಡಿತ್ತು. ಉಂಗುರವನ್ನೂ ಧರಿಸಿದ್ದಾರೆ.

ಕ್ಯಾನ್ಸ್ ನಲ್ಲಿ 2002ರಲ್ಲಿ ಶಾರೂಕ್ ಖಾನ್ ಅವರ ಜೊತೆ ಮೊದಲ ಬಾರಿಗೆ ಐಶ್ವರ್ಯಾ ಹೆಜ್ಜೆಹಾಕಿದ್ದರು. 2002 ರಲ್ಲಿ ಫ್ರೆಂಚ್ ರಿವೇರಿಯಾ ಚಲನಚಿತ್ರೋತ್ಸವದಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ದೇವದಾಸ್ ಚಿತ್ರದ ಬಿಡುಗಡೆಯ ನಂತರ ಹೆಜ್ಜೆಹಾಕಿದ್ದರು.

ಅಂದಿನಿಂದ ಪ್ರತಿವರ್ಷ ಭಾಗವಹಿಸುತ್ತಾ ಬಂದಿರುವ ಐಶ್ವರ್ಯಾ ಅವರು ಧರಿಸುವ ಬಟ್ಟೆ, ಒಡವೆಗಳು ಸದ್ದು ಮಾಡುತ್ತಲೇ ಇದೆ.

ಈ ವರ್ಷ ಇನ್ನೂಹಲವರು ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದು, ಶ್ರೀದೇವಿ ಮಗಳು ಜಾಹ್ನವಿ ಕೂಡ ಗಮನಸೆಳೆದಿದ್ದಾರೆ.

ಕನ್ನಡ ನಟಿ ಪ್ರಣಿತಾ ಸುಭಾಷ್ ಕೂಡ ಗಮನ ಸೆಳೆದಿದ್ದಾರೆ.

ನಟಿ ಅದಿತಿ ರಾವ್ ಹೈದರಿ ಭಾಗವಹಿಸಿದ್ದರು.

Cannes 2025: ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸಿದ್ರಾ?