ಮಂಗಳೂರು ಹುಡುಗನ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕಿ ಐಶ್ವರ್ಯ ರಂಗರಾಜನ್

Lingaraj Badiger

ಜನಪ್ರಿಯ ಗಾಯಕಿ ಹಾಗೂ 'ಸರಿಗಮಪ ಕನ್ನಡ ಸೀಸನ್ 11' ಸ್ಪರ್ಧಿ ಐಶ್ವರ್ಯ ರಂಗರಾಜನ್‌ ಅವರು ಮಂಗಳೂರು ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಐಶ್ವರ್ಯ ರಂಗರಾಜನ್ ಅವರು ಕಳೆದ ಮಾರ್ಚ್ ತಿಂಗಳಲ್ಲಿ ಮಂಗಳೂರಿನ ಸಾಯಿ ಸ್ವರೂಪ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ತಮ್ಮ ಬಹುಕಾಲದ ಗೆಳೆಯ ಸಾಯಿ ಸ್ವರೂಪ್ ಜತೆ ಸಪ್ತಪದಿ ತುಳಿದಿದ್ದಾರೆ.

ಐಶ್ವರ್ಯ ರಂಗರಾಜನ್ ಅವರ ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಮದುವೆ ಯಾವಾಗ? ಎಲ್ಲಿ ನಡೆಯಿತು ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲ.

ಮೀಟ್ ಮಾಡೋಣ ಇಲ್ಲ ಡೇಟ್ ಮಾಡೋಣ, ಶೇಕ್ ಇಟ್ ಪುಷ್ಪಾವತಿ ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಐಶ್ವರ್ಯಾ ಹಾಡಿದ್ದಾರೆ.

ಐಶ್ವರ್ಯಾ ರಂಗರಾಜನ್ ಅವರು ತಮ್ಮ ಗಾಯನದ ಮೂಲಕ ಸಂಗೀತಪ್ರಿಯರನ್ನು ಮೋಡಿ ಮಾಡಿದ್ದಾರೆ.

ಐಶ್ವರ್ಯ ರಂಗರಾಜನ್ ಅವರು ಕ್ರಾಂತಿ, ಯುಐ, ಕಬ್ಜ, ಏಕ್ ಲವ್ ಯಾ ಸೇರಿದಂತೆ ಹಲವು ಸಿನಿಮಾಗಳ ಸೂಪರ್ ಹಿಟ್ ಹಾಡುಗಳನ್ನು ಹಾಡಿದ್ದಾರೆ.

ಮದುವೆಯಾಗಿರುವ ಐಶ್ವರ್ಯಾ ರಂಗರಾಜನ್ ಅವರಿಗೆ ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದವರು ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.