ಮಿದುಳನ್ನು ಯಂಗ್ ಆಗಿಟ್ಟುಕೊಳ್ಳಲು ಇಲ್ಲಿವೆ ಸೂಪರ್‌ಫುಡ್‌ಗಳು

Ramyashree GN

ವಾಲ್‌ನಟ್

ವಾಲ್‌ನಟ್‌ನಲ್ಲಿನ ಆರೋಗ್ಯಕರ ಕೊಬ್ಬುಗಳು, ಆಲ್ಫಾ-ಲಿನೋಲೆನಿಕ್ ಆಮ್ಲ ಮತ್ತು ಸಸ್ಯ ಆಧಾರಿತ ಪ್ರೋಟೀನ್‌ಗಳು ಸ್ಮರಣಶಕ್ತಿಯನ್ನು ಚುರುಕುಗೊಳಿಸುವ ಮತ್ತು ಮೆದುಳಿನ ಚೈತನ್ಯವನ್ನು ಬೆಂಬಲಿಸುತ್ತದೆ.

unsplash.com

ದ್ರಾಕ್ಷಿ

ವಿಶೇಷವಾಗಿ ಕೆಂಪು ದ್ರಾಕ್ಷಿ ರೆಸ್ವೆರಾಟ್ರೊಲ್ ನಿಂದ ತುಂಬಿದ್ದು, ಸ್ಮರಣಶಕ್ತಿ ಮತ್ತು ಅರಿವಿನ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ.

unsplash.com

ಕಡಲೇಕಾಯಿ ಬೀಜ

ಇವು ದಿನವಿಡೀ ಸ್ಥಿರವಾದ ಶಕ್ತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತವೆ. ವಿಟಮಿನ್ ಇ ಮತ್ತು ರೆಸ್ವೆರಾಟ್ರೊಲ್ ಹೇರಳವಾಗಿರುವುದರಿಂದ, ಮೆದುಳನ್ನು ಉತ್ತಮ ಸ್ಥಿತಿಯಲ್ಲಿಡಲು ನೆರವಾಗುತ್ತದೆ.

unsplash.com

ಹಣ್ಣಿನ ಜ್ಯೂಸ್

ಹಣ್ಣುಗಳಲ್ಲಿರುವ ನೈಸರ್ಗಿಕ ಗ್ಲೂಕೋಸ್ ದೇಹಕ್ಕೆ ಶಕ್ತಿ ನೀಡುತ್ತದೆ. ಜ್ಯೂಸ್‌ಗೆ ಬದಲಾಗಿ ಹಣ್ಣುಗಳ ಸೇವೆ ಉತ್ತಮ. ಸಂಸ್ಕರಿಸದ ಜ್ಯೂಸ್ ಸೇವನೆ ಜಾಗರೂಕತೆ, ನೆನಪಿನ ಶಕ್ತಿ ಮತ್ತು ಒಟ್ಟಾರೆ ಮಾನಸಿಕ ಚುರುಕುತನ ಹೆಚ್ಚಿಸುತ್ತದೆ.

unsplash.com

ಬ್ರೊಕೊಲಿ

ಲಘುವಾಗಿ ಬೇಯಿಸಿದ 160 ಗ್ರಾಂ ಬ್ರೊಕೊಲಿ ಸೇವನೆ ವಿಟಮಿನ್ ಕೆಯನ್ನು ಒಳಗೊಂಡಿದೆ. ಇದು ಮೆದುಳಿನ ಜೀವಕೋಶ ರಚನೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.

unsplash.com

ಗ್ರೀನ್ ಟೀ

ಕೆಫೀನ್ ಅನ್ನು ಒಳಗೊಂಡಿರುವ ಗ್ರೀನ್ ಟೀ ಮಾನಸಿಕ ತೀಕ್ಷ್ಣತೆಯನ್ನು ಹೆಚ್ಚಿಸುವ, ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಬಲಪಡಿಸುತ್ತದೆ.

unsplash.com

ಅವಕಾಡೋ

ಗುಡ್ ಫ್ಯಾಟ್ಸ್‌ನಿಂದ ತುಂಬಿರುವ ಅವಕಾಡೋ ರಕ್ತದೊತ್ತಡವನ್ನು ಸ್ಥಿರವಾಗಿಡುತ್ತದೆ. ಜೊತೆಗೆ ಆಲೋಚನೆಯನ್ನು ತೀಕ್ಷ್ಣ ಮತ್ತು ಉತ್ಸಾಹಭರಿತವಾಗಿರಿಸುತ್ತದೆ.

unsplash.com

ಮೊಟ್ಟೆ

ಮೊಟ್ಟೆಗಳಲ್ಲಿ ವಿಟಮಿನ್ ಬಿ-6, ಬಿ-12 ಮತ್ತು ಫೋಲಿಕ್ ಆಮ್ಲ ಹೇರಳವಾಗಿದ್ದು, ಮೆದುಳನ್ನು ಹುರಿದುಂಬಿಸುತ್ತವೆ ಮತ್ತು ನೆನಪಿನ ಕ್ಷೀಣತೆ ತಡೆದು ಮೆದುಳು ಕುಗ್ಗುವುದನ್ನು ತಡೆಯುತ್ತದೆ.

unsplash.com
ನಮ್ಮ ದೇಹಕ್ಕೆ ಮೆಗ್ನೀಸಿಯಮ್ ತುಂಬಾ ಮುಖ್ಯವೇಕೆ..? ಕೊರತೆಯಾದರೆ ಏನಾಗುತ್ತದೆ..?