ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರು 2024ರ ಸೆಪ್ಟೆಂಬರ್ 8ರಂದು ಹೆಣ್ಣು ಮಗುವಿನ ಪಾಲಕರಾದರು. ಮಗು ಜನಿಸಿ ವರ್ಷದ ಮೇಲಾಗಿದೆ. ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಮಗಳ ಮುಖವನ್ನು ರಿವೀಲ್ ಮಾಡಿದ್ದಾರೆ.
ಮಗಳಿಗೆ ದುವಾ ಎಂದು ಹೆಸರಿಟ್ಟಿರುವ ರಣವೀರ್-ದೀಪಿಕಾ ದೀಪಾವಳಿ ಹಬ್ಬಕ್ಕೆ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ದೀಪಿಕಾ ಹಾಗೂ ದುವಾ ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿದ್ದಾರೆ.ಈ ಫೋಟೋ ನೋಡಿದ ಅನೇಕರು ಇದನ್ನು ಎಐ ಜನರೇಟೆಡ್ ಫೋಟೋ ಎಂದು ಭಾವಿಸಿದರು. ಆದರೆ, ಹಾಗಿಲ್ಲ. ಇದು ಅಸಲಿ ಫೋಟೋ ಎಂಬುದು ದೀಪಿಕಾ ಇನ್ಸ್ಟಾಗ್ರಾಂ ಪೇಜ್ ನಿಂದ ದೃಢಪಟ್ಟಿದೆ.
ಕೆಲವರು ದುವಾ ದೀಪಿಕಾ ತರ ಇದ್ದಾಳೆ ಎಂದರೆ ಇನ್ನೂ ಕೆಲವರು ರಣವೀರ್ ಸಿಂಗ್ ರೀತಿ ಇದ್ದಾರೆ ಎನ್ನುತ್ತಿದ್ದಾರೆ.
'ದುವಾ: ಪ್ರಾರ್ಥನೆಯ ಅರ್ಥ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ' ಎಂದು ದೀಪ್ ವೀರ್ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಗಳಿಗೆ ಉತ್ತರಿಸಿದ್ದರು.
ಬಾಲಿವುಡ್ ನಲ್ಲಿ ತಮ್ಮ ಮಗುವಿನ ಪೋಟೋವನ್ನು ಹಬ್ಬದ ಸಮಯದಲ್ಲಿ ರಿವೀಲ್ ಮಾಡುವುದು ಟ್ರೆಂಡ್ ಆಗುತ್ತಿದೆಯೇ, ಈ ಹಿಂದೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಹ ಈ ರೀತಿ ಹಬ್ಬದ ಸಮಯದಲ್ಲಿ ತಮ್ಮ ಮುದ್ದು ಮಗಳ ಫೋಟೋ ಬಹಿರಂಗಪಡಿಸಿದ್ದರು.
ಕಳೆದ ವರ್ಷ ದೀಪಾವಳಿ ಹಬ್ಬಕ್ಕೆ ರಣವೀರ್-ದೀಪಿಕಾ ತಮ್ಮ ಮಗಳ ಹೆಸರು ದುವಾ ಪಡುಕೋಣೆ ಸಿಂಗ್ ಎಂದು ರಿವೀಲ್ ಮಾಡಿದ್ದರು.
ಬಾಲಿವುಡ್ ನ ಸ್ಟಾರ್ ಜೋಡಿಯಾದ ರಣವೀರ್-ದೀಪಿಕಾ ಹಲವು ಹಿಟ್ ಚಿತ್ರಗಳನ್ನು ನೀಡಿ ಪರಸ್ಪರ ಪ್ರೀತಿಸಿ 2018ರಲ್ಲಿ ವಿವಾಹವಾಗಿದ್ದರು.