ಉತ್ತರಾಖಂಡ ಮೇಘಸ್ಫೋಟ: ಮನೆಗಳು ಕೊಚ್ಚಿ ಹೋಗಿ, ಹಲವಾರು ನಾಪತ್ತೆ

Online Team

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಸರಣಿ ಮೇಘಸ್ಫೋಟ ಸಂಭವಿಸಿ ಹಲವರು ಮಂದಿ ನಾಪತ್ತೆಯಾಗಿದ್ದಾರೆ.

ಭಾರೀ ಮಳೆಯಿಂದಾಗಿ ಭೂಕುಸಿತ ಮತ್ತು ಪ್ರವಾಹ ಉಂಟಾಗಿ, ನಂದನಗರ ಪ್ರದೇಶದ ವ್ಯಾಪ್ತಿಯ ನಾಲ್ಕು ಗ್ರಾಮಗಳಲ್ಲಿ 30 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ.

ಮೇಘಸ್ಫೋಟದಿಂದಾಗಿ ಆ ಪ್ರದೇಶದ ಮೂಲಸೌಕರ್ಯಗಳು ಅಸ್ತವ್ಯಸ್ತಗೊಂಡಿವೆ. ವಿದ್ಯುತ್ ಸರಬರಾಜು ಕಡಿತಗೊಂಡಿದೆ ಮತ್ತು ರಸ್ತೆಗಳು ತೀವ್ರವಾಗಿ ಹಾನಿಗೊಳಗಾಗಿವೆ.

ಮೇಘಸ್ಫೋಟದ ಸಮಯದಲ್ಲಿ ಅನೇಕ ನಿವಾಸಿಗಳು ಭಯಭೀತರಾಗಿ ಕಾಡುಗಳಿಗೆ ಓಡಿಹೋದರು ಎಂದು ವರದಿಯಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳನ್ನು ತಲುಪುವುದು ಆಡಳಿತಕ್ಕೆ ಪ್ರಮುಖ ಸವಾಲಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗಳಿಗೆ ಅಡ್ಡಿಯಾಗಿವೆ.

ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿದೆ. ಸಾವುನೋವುಗಳ ಬಗ್ಗೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಇದು ಕುಟುಂಬಗಳನ್ನು ಆತಂಕದ ಅನಿಶ್ಚಿತತೆಗೆ ತಳ್ಳಿದೆ.

ಚಮೋಲಿ ಜಿಲ್ಲೆಯಲ್ಲಿ ಸಂಪರ್ಕ ಕಳೆದುಕೊಂಡ ಗ್ರಾಮಗಳು