Healthy Heart; ಹೃದಯವನ್ನು ಆರೋಗ್ಯವಾಗಿಡಿ, ಹೃದಯ ಕಾಯಿಲೆಯಿಂದ ದೂರವಿರಿ!

Ramyashree GN

ಆರೋಗ್ಯಕರ ಆಹಾರ ಸೇವಿಸಿ

ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು. ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ಹೆಚ್ಚಿನ ಫೈಬರ್ ಆಹಾರ ಸೇವಿಸಿ.

Image - Pexels

ಸಕ್ರಿಯರಾಗಿರಿ

ನಿಯಮಿತ ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ಹೃದಯ ಕಾಯಿಲೆಯನ್ನು ತಡೆಗಟ್ಟಬಹುದು. ವಾಕಿಂಗ್, ನೃತ್ಯ ಮತ್ತು ಸೈಕಲ್ ಸವಾರಿ ಮಾಡಬಹುದು.

Image - Pexels

ತೂಕ ನಿರ್ವಹಣೆ

ಅಧಿಕ ತೂಕ ಅಥವಾ ಬೊಜ್ಜು ಇರುವ ಜನರು ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಟೈಪ್ 2 ಮಧುಮೇಹದ ಅಪಾಯ ಹೊಂದಿರುತ್ತಾರೆ. ದೇಹದ ತೂಕ ಕಳೆದುಕೊಳ್ಳುವುದು ಉತ್ತಮ.

Image - Pexels

ಧೂಮಪಾನ ತ್ಯಜಿಸಿ ಮತ್ತು ಹೊಗೆಯಿಂದ ದೂರವಿರಿ

ಧೂಮಪಾನವನ್ನು ತ್ಯಜಿಸುವುದರಿಂದ ನಿಮ್ಮ ಹೃದಯ ಕಾಯಿಲೆ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇತರರು ಸೇದುವಾಗ ಹೊಗೆಯನ್ನು ತಪ್ಪಿಸುವುದು ಸಹ ಮುಖ್ಯವಾಗಿದೆ.

Image - Pexels

ಕೊಲೆಸ್ಟ್ರಾಲ್, ಶುಗರ್ ಮತ್ತು ರಕ್ತದೊತ್ತಡ ನಿಯಂತ್ರಿಸಿ

ಹೆಚ್ಚಿನ ಕೊಲೆಸ್ಟ್ರಾಲ್ ಮತ್ತು ಅಧಿಕ ರಕ್ತದೊತ್ತಡ ಹೃದಯ ಕಾಯಿಲೆ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಮಧುಮೇಹ ಇದ್ದರೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟ ನಿಯಂತ್ರಿಸಿ.

Image - Pexels

ಮದ್ಯವನ್ನು ಮಿತವಾಗಿ ಮಾತ್ರ ಸೇವಿಸಿ

ಹೆಚ್ಚು ಮದ್ಯಪಾನ ಮಾಡುವುದರಿಂದ ಹೃದಯ ಕಾಯಿಲೆಯ ಅಪಾಯ ಹೆಚ್ಚುತ್ತದೆ. ಮದ್ಯಪಾನ ಮಾಡಲೇಬೇಕೆಂದರೆ ಮಿತವಾಗಿ ಸೇವಿಸಿ.

Image - Pexels

ಒತ್ತಡ ನಿರ್ವಹಿಸಿ

ಒತ್ತಡ ನಿರ್ವಹಿಸುವುದರಿಂದ ಹೃದಯ ಕಾಯಿಲೆ, ಖಿನ್ನತೆ ಮತ್ತು ಅಧಿಕ ರಕ್ತದೊತ್ತಡದಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು.

Image - Pexels

ಸಾಕಷ್ಟು ನಿದ್ರೆ ಅವಶ್ಯಕ

ಉತ್ತಮ ನಿದ್ರೆಯು ಹೃದಯ ಕಾಯಿಲೆ ಸೇರಿದಂತೆ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ವಯಸ್ಕರಿಗೆ ನಿತ್ಯ 7 ರಿಂದ 9 ಗಂಟೆಗಳ ನಿದ್ರೆ ಬೇಕಾಗುತ್ತದೆ.

Image - Pexels
ಹೃದಯ ಅಸಹಜವಾಗಿ ಅಥವಾ ಅತಿಯಾಗಿ ಬಡಿದುಕೊಳ್ಳುತ್ತಿದೆಯೇ?