ತಮಿಳುನಾಡು, ಕರೂರು: ಟಿವಿಕೆ ರ‍್ಯಾಲಿಯಲ್ಲಿ ಕಾಲ್ತುಳಿತ; 41 ಜನರು ಸಾವು

Online Team

ಟಿವಿಕೆ ನಾಯಕ ವಿಜಯ್ ಅವರ ಪ್ರಚಾರದ ರ‍್ಯಾಲಿಯಲ್ಲಿ ಸೆಪ್ಟೆಂಬರ್ 27 ರಂದು ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಜನರನ್ನು ಕರೂರಿನ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

Photo: Express

ಕುಂಭಮೇಳ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತದ ಹಿಂದಿನ ಘಟನೆಗಳ ಪುನರಾವರ್ತನೆ ಇದಾಗಿದೆ.

Photo: Express

ತಮಿಳುನಾಡಿನ ಕರೂರಿನ ವೇಲುಸಾಮಿಪುರಂನ ಎರಡು ವರ್ಷದ ವಿ ಗುರು ವಿಷ್ಣು ಸಾವನ್ನಪ್ಪಿದ ಕಿರಿಯರಾಗಿದ್ದರೆ, ಹಿರಿಯ ವ್ಯಕ್ತಿ 60 ವರ್ಷದವರಾಗಿದ್ದಾರೆ.

Photo: Express

ಮೃತರ ಶವಗಳನ್ನು ಅವರ ತವರು ಸ್ಥಳಕ್ಕೆ ಕಳುಹಿಸಲಾಯಿತು ಮತ್ತು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು.

Photo: Express

ಸಾಕಷ್ಟು ಆಹಾರ ಮತ್ತು ನೀರಿಲ್ಲದೆ ಜನರು ಸುಡುವ ಬಿಸಿಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿದ್ದರು, ಇದು ಈ ಸಾವುಗಳಿಗೆ ಕಾರಣವಾಯಿತು ಎಂದು ಡಿಜಿಪಿ ಹೇಳಿದ್ದಾರೆ.

Photo: Express

ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಸಿಎಂ ಸ್ಟಾಲಿನ್ ಘೋಷಿಸಿದರು ಮತ್ತು ಕರೂರಿನಲ್ಲಿ ನಡೆದ ಕಾಲ್ತುಳಿತದ ಬಗ್ಗೆ ತನಿಖೆ ನಡೆಸಲು ಆಯೋಗವನ್ನು ರಚಿಸಿದರು.

Photo: Express

ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 20 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 2 ಲಕ್ಷ ರೂಪಾಯಿಗಳ ಆರ್ಥಿಕ ನೆರವು ನೀಡುವುದಾಗಿ ಟಿವಿಕೆ ಅಧ್ಯಕ್ಷ ವಿಜಯ್ ಘೋಷಿಸಿದ್ದಾರೆ.

Photo: Express
ಟಿವಿಕೆ ಪದಾಧಿಕಾರಿಗಳ ವಿರುದ್ಧ FIR!