ಮೊದಲ ಮಗುವಿನ ನಿರೀಕ್ಷೆ: ಡಾಲಿ-ಧನ್ಯತಾ ಬೇಬಿ ಬಂಪ್ ಫೋಟೊಶೂಟ್

Vishwanath S

ನಟ ಡಾಲಿ ಧನಂಜಯ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು ಪತ್ನಿ ಧನ್ಯತಾ ಜೊತೆ ಪ್ರಕೃತಿ ಮಡಿಲಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.

ದಂಪತಿ ಈ ಕುರಿತು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, Our universe is expanding ಎಂದು ಬರೆದುಕೊಂಡಿದ್ದು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೆಲವು ತಿಂಗಳ ಹಿಂದೆ ಉದಯ ಕನ್ನಡಿಗ 2025 ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದ ಧನಂಜಯ್ ತಾನೂ ತಂದೆ ಆಗುತ್ತಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು.

2025ರ ಫೆ.16ರಂದು ಡಾಲಿ ಧನಂಜಯ್‌ ಅವರು ಡಾ.ಧನ್ಯತಾ ಜೊತೆ ಮೈಸೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಮದುವೆ ಮತ್ತು ಆರತಕ್ಷತೆಗೆ ಸಿನಿಮಾ ರಂಗ ಮತ್ತು ರಾಜಕೀಯದ ಗಣ್ಯರು ಭಾಗಿಯಾಗಿ ಶುಭಹಾರೈಸಿದ್ದರು.

ಡಾಲಿ-ಧನ್ಯತಾ ಬೇಬಿ ಬಂಪ್ ಫೋಟೊಶೂಟ್

ಡಾಲಿ-ಧನ್ಯತಾ ಬೇಬಿ ಬಂಪ್ ಫೋಟೊಶೂಟ್