Ramyashree GN
ಕ್ಯಾಲ್ಸಿಯಂ ಸಮೃದ್ಧವಾಗಿರುವ ಆಹಾರಗಳಾದ ಹಾಲು, ಮೊಸರು ಮತ್ತು ಚೀಸ್‌ನಂತಹ ಡೈರಿ ಉತ್ಪನ್ನಗಳು, ಹಾಗೆಯೇ ಕೆಲವು ಬಗೆಯ ಸೊಪ್ಪುಗಳನ್ನು ತಿನ್ನುವುದರಿಂದ ಮೂಳೆಗಳ ಆರೋಗ್ಯ ಸುಧಾರಿಸುತ್ತದೆ.
ಪನೀರ್ ಒಂದು ಪೌಷ್ಟಿಕ ಡೈರಿ ಉತ್ಪನ್ನವಾಗಿದ್ದು, ಪ್ರತಿ 100 ಗ್ರಾಂಗೆ ಸುಮಾರು 480 ಮಿ.ಗ್ರಾಂ ಕ್ಯಾಲ್ಸಿಯಂ ಹಾಗೂ ಉತ್ತಮ ಗುಣಮಟ್ಟದ ಸಸ್ಯಾಹಾರಿ ಪ್ರೋಟೀನ್ ಅನ್ನು ಒದಗಿಸುತ್ತದೆ.
ರಾಗಿ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದ್ದು, ಪ್ರತಿ 100 ಗ್ರಾಂನಲ್ಲಿ ಸುಮಾರು 344 ಮಿ.ಗ್ರಾಂನಷ್ಟು ಕ್ಯಾಲ್ಸಿಯಂ ಹೊಂದಿರುತ್ತದೆ.
ಮೊಸರು ಪ್ರೋಬಯಾಟಿಕ್ ಗುಣವುಳ್ಳ ಹಾಲಿನ ಉತ್ಪನ್ನವಾಗಿದ್ದು, ಪ್ರತಿ 100 ಗ್ರಾಂಗೆ ಸುಮಾರು 120 ಮಿ.ಗ್ರಾಂ ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ; ಜೊತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ, ದೇಹಕ್ಕೆ ತಂಪನ್ನು ನೀಡುತ್ತದೆ.
ರಾಜ್ಮಾ ಅತ್ಯಂತ ಪೌಷ್ಟಿಕಾಂಶಯುಕ್ತ ದ್ವಿದಳ ಧಾನ್ಯವಾಗಿದ್ದು, ಬೇಯಿಸಿದ ಒಂದು ಕಪ್‌ನಲ್ಲಿ ಸುಮಾರು 140 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ.
ಕ್ಯಾಲ್ಸಿಯಂನ ಅತ್ಯಂತ ಸಮೃದ್ಧ ಮೂಲವಾಗಿರುವ ಪ್ರತಿ 100 ಗ್ರಾಂ ಎಳ್ಳಿನಲ್ಲಿ ಬರೋಬ್ಬರಿ 989 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಇರುತ್ತದೆ.
ಹುರುಳಿ ಕಾಳು ದ್ವಿದಳ ಧಾನ್ಯವಾಗಿದ್ದು, ಇದು ಪ್ರತಿ 100 ಗ್ರಾಂಗೆ ಸುಮಾರು 287 ಮಿ.ಗ್ರಾಂನಷ್ಟು ಕ್ಯಾಲ್ಸಿಯಂ ಒದಗಿಸುತ್ತದೆ.
ಪ್ರತಿ 100 ಗ್ರಾಂ ಎಲೆಗಳಲ್ಲಿ 830 ಮಿ.ಗ್ರಾಂ.ನಷ್ಟು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ; ಗರಿಷ್ಠ ಪ್ರಯೋಜನ ಪಡೆಯಲು ಇದನ್ನು ಚಟ್ನಿ ಅಥವಾ ಪುಡಿಯ ರೂಪದಲ್ಲಿ ನೇರವಾಗಿ ಸೇವಿಸುವುದು ಉತ್ತಮ.