'ವಿರೋಶ್' ನಿಮ್ಮ ಪ್ರೀತಿ ನಮ್ಮ ಶ್ರೀರಕ್ಷೆ ಎಂದು ವಿವಾಹ ದೃಢಪಡಿಸಿದ ಜೋಡಿ-Photos
Sumana Upadhyaya
ಟಾಲಿವುಡ್ ನ ಖ್ಯಾತ ಜೋಡಿ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅವರ ವಿವಾಹದ ಸುತ್ತ ಇರುವ ವದಂತಿಗಳಿಗೆ ಕೊನೆಗೂ ತೆರೆ ಬಿದ್ದಿದೆ. ಇಬ್ಬರೂ ನಿನ್ನೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮದುವೆ ದಿನಾಂಕ ಘೋಷಿಸುವ ಮೂಲಕ ಹಲವು ವರ್ಷಗಳಿಂದ ಕೇಳಿಬರುತ್ತಿರುವ ಸುದ್ದಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಅಧಿಕೃತವಾಗಿ ಘೋಷಿಸುವ ಮೂಲಕ ಜೋಡಿ ಮದುವೆಯಾಗುವುದಾಗಿ ಖಚಿತ ಪಡಿಸಿದ್ದಾರೆ.ಕಳೆದ ಎಂಟು ವರ್ಷಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ವಿರೋಶ್ ಜೋಡಿಯ ಮದುವೆ ಎಂದು ಘೋಷಿಸಿಕೊಂಡಿದ್ದು ಈ ಹೆಸರು ನೀವೇ ಅಭಿಮಾನಿಗಳೇ ನಮಗೆ ಪ್ರೀತಿಯಿಂದ ಕೊಟ್ಟಿದ್ದು ಎಂದು ಜೋಡಿ ಹೇಳಿಕೊಂಡಿದ್ದಾರೆ.
ಕನ್ನಡದ ಖ್ಯಾತ ನಟ ರಕ್ಷಿತ್ ಶೆಟ್ಟಿ ಜೊತೆಗೆ ಎಂಗೇಜ್ ಮೆಂಟ್ ಮುರಿದುಬಿದ್ದ ನಂತರ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರನ್ನು ತೆಲುಗಿನ ಗೀತ ಗೋವಿಂದಮ್ ಸೆಟ್ ಚಿತ್ರದಲ್ಲಿ ಭೇಟಿಯಾದರು.
2017ರಲ್ಲಿ ತೆರೆಕಂಡ ಈ ಚಿತ್ರ ಭಾರೀ ಯಶಸ್ಸು ಗಳಿಸಿತು, ಪ್ರೇಕ್ಷಕರಿಗೆ ಜೋಡಿಯ ನಡುವಿನ ಕೆಮೆಸ್ಟ್ರಿ ಹಿಡಿಸಿತು. ಜೊತೆಗೆ ಇವರಿಬ್ಬರು ವೈಯಕ್ತಿಕವಾಗಿ ಕೂಡ ಹತ್ತಿರವಾದರು.
ಅಲ್ಲಿಂದ ಮುಂದೆ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಕೂಡ ಜೋಡಿ ಒಟ್ಟಿಗೆ ನಟಿಸಿದರು. 2019ರಲ್ಲಿ ಬಂದ ಈ ಚಿತ್ರದಲ್ಲಿ ಜೋಡಿ ತೆರೆಯ ಮೇಲೆ ನಟನೆ ಮಾಡುತ್ತಿದ್ದಾರೆ ಎನಿಸುತ್ತಿರಲಿಲ್ಲ. ನಿಜವಾಗಿಯೂ ಪ್ರೀತಿಸುತ್ತಿದ್ದಾರೆ ಎಂದು ಅನಿಸುವಷ್ಟು ನೈಜವಾಗಿ ನಟಿಸಿದ್ದರು.
ಅಲ್ಲಿಂದ ಈ ಜೋಡಿ ತೀರಾ ಹತ್ತಿರವಾಗತೊಡಗಿದರು. ನ್ಯೂ ಇಯರ್ ಪಾರ್ಟಿ, ಬರ್ತ್ ಡೇಗಳನ್ನು ವಿದೇಶಗಳಲ್ಲಿ ಒಟ್ಟಿಗೆ ಆಚರಿಸಿಕೊಳ್ಳುತ್ತಿದ್ದರು.
ನಂದಮೂರಿ ಬಾಲಕೃಷ್ಣ ಅವರ ಜೊತೆ ಸಂದರ್ಶನದಲ್ಲಿ ಅನಿಮಲ್ ಚಿತ್ರದ ಪ್ರೊಮೋಷನ್ ನಲ್ಲಿ ರಣಬೀರ್ ಕಪೂರ್ ನಿಮ್ಮ ಹೀರೋಗೆ ಕರೆ ಮಾಡಿ ಅಂದಾಗ ನಾಚಿ ರಶ್ಮಿಕಾ ಕರೆ ಮಾಡಿದ್ದರು, ಆಗ ವಿಜಯ್ ದೇವರಕೊಂಡ ವಾಟ್ಸ್ ಪ್ ರೇ ಎಂದಿದ್ದು ಭಾರೀ ಸುದ್ದಿಯಾಗಿತ್ತು.
ಕಳೆದ ಅಕ್ಟೋಬರ್ 3ರಂದು ಹೈದರಾಬಾದ್ ನಲ್ಲಿ ವಿಜಯ್ ನಿವಾಸದಲ್ಲಿ ಜೋಡಿ ಎಂಗೇಜ್ ಮೆಂಟ್ ರಿಂಗ್ ಎಕ್ಸ್ ಜೇಂಜ್ ಮಾಡಿಕೊಂಡಿತ್ತು ಎಂದು ಸುದ್ದಿಯಾಗಿ ಹೋದಲ್ಲಿ ಬಂದಲ್ಲಿ ಮಾಧ್ಯಮದವರು, ಸಂದರ್ಶನಕಾರರು ಪ್ರಶ್ನಿಸುತ್ತಿದ್ದರು.
ಕನ್ನಡದ ಕುವರಿ ಕೊಡಗು ಮೂಲದ ರಶ್ಮಿಕಾ ಮಂದಣ್ಣ 2016ರಲ್ಲಿ ಕಿರಿಕ್ ಪಾರ್ಟಿಯಲ್ಲಿ ನಟಿಸಿ ಆ ಚಿತ್ರ ಸೂಪರ್ ಹಿಟ್ ಆದ ನಂತರ ಹಿಂತಿರುಗಿ ನೋಡಲಿಲ್ಲ, ತೆಲುಗು, ತಮಿಳು ಮತ್ತು ಬಾಲಿವುಡ್ ನಲ್ಲಿ ಕೂಡ ಯಶಸ್ವಿ ನಾಯಕಿಯಾಗಿ ಮೆರೆದರು.
"ವಿರೋಶ್" ಎಂಬ ಪದವನ್ನು ಅಭಿಮಾನಿಗಳು ಅವರಿಬ್ಬರ ಹೆಸರನ್ನು ಮಿಶ್ರಣ ಮಾಡುವ ಮೂಲಕ ಸೃಷ್ಟಿಸಿದ್ದರು. ಅದಕ್ಕಾಗಿ ದಂಪತಿ ಮದುವೆಗೆ ಈ ಹೆಸರನ್ನೇ ಇಡಲಾಗಿದೆ ಎಂದು ವೈಯಕ್ತಿಕ ಟಿಪ್ಪಣಿಯಲ್ಲಿ ಬರೆದುಕೊಂಡಿದ್ದಾರೆ.
ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ.