ಬರ್ತ್ ಡೇ ಮುನ್ನ ಸ್ಟೈಲಿಶ್ ಲುಕ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್
Sumana Upadhyaya
ರಾಕಿಂಗ್ ಸ್ಟಾರ್ ಯಶ್ ಗೆ ನಾಳೆ ಜನವರಿ 8 40ನೇ ವರ್ಷದ ಹುಟ್ಟುಹಬ್ಬ ಸಂಭ್ರಮ. ಗೀತು ಮೋಹನ್ ದಾಸ್ ಅವರ ಟಾಕ್ಸಿಕ್ ಚಿತ್ರದ ತಯಾರಿಯಲ್ಲಿದ್ದಾರೆ. ತಮ್ಮ ಬರ್ತ್ ಡೇಗೆ ಮುನ್ನ ಭರ್ಜರಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.
ಯಶ್ ಅವರ 40 ನೇ ಹುಟ್ಟುಹಬ್ಬದಂದು 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆ ಮಾಡಲು ಟಾಕ್ಸಿಕ್ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.
ಕೆಜಿಎಫ್ ಚಾಪ್ಟರ್ 2 ರ ನಂತರ, ರಾಕಿಂಗ್ ಸ್ಟಾರ್ ಯಶ್ ಅವರನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಯಶ್ ಅಭಿಮಾನಿಗಳು ನಮ್ಮ ಮೆಟ್ರೊದಲ್ಲಿ ಅವರ ಸಿನಿಮಾಗಳ ಪೋಸ್ಟರ್ ನ್ನು ಅಂಟಿಸಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದು ಅದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ಚಿಕ್ಕಬಳ್ಳಾಪುರದಲ್ಲಿ ಯಶ್ ಅಭಿಮಾನಿಗಳು ಹೊಸ ವರ್ಷ ಮತ್ತು ಯಶ್ ಬರ್ತ್ ಡೇ ಎಂದು ಕ್ಯಾಲೆಂಡರ್ ತಯಾರಿಸಿ ಪ್ರಿಯಾಂಕ ಉಪೇಂದ್ರ ಅವರ ಕೈಯಲ್ಲಿ ಬಿಡುಗಡೆ ಮಾಡಿಸಿದ್ದಾರೆ.
ಗೀತು ಮೋಹನ್ದಾಸ್ ನಿರ್ದೇಶನದ, ಟಾಕ್ಸಿಕ್ - ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್ ಅನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ ಮತ್ತು ಆರು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಮಾರ್ಚ್ 19, 2026 ರಂದು ಯುಗಾದಿಯಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ