ರಾಯ ಮೂಲಕ 'ಟಾಕ್ಸಿಕ್' ಗೆ ರಾಕಿಂಗ್ ಸ್ಟಾರ್ ಮಾಸ್ ಎಂಟ್ರಿ, ಯಶ್ ಫ್ಯಾನ್ಸ್ ಫುಲ್ ಖಷ್
Sumana Upadhyaya
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ಇಂದು ಯಶ್ ಜನ್ಮದಿನದ ಪ್ರಯುಕ್ತ ಟೀಸರ್ ರಿಲೀಸ್ ಆಗಿದ್ದು, ಮಾಸ್ ಲುಕ್ ನಲ್ಲಿ ಯಶ್ ಕಂಗೊಳಿಸಿದ್ದಾರೆ. ಹಾಲಿವುಡ್ ಶೈಲಿಯಲ್ಲಿ ಸಿನಿಮಾ ತೆಗೆದಿದ್ದಾರೆ.
‘ಟಾಕ್ಸಿಕ್’ ಸಿನಿಮಾದಲ್ಲಿ ವಿವಿಧ ರೀತಿಯ ಗನ್ ಬಳಕೆ ಆಗಿದೆ. ಬಾಂಬ್ ಸಿಡಿಯುತ್ತದೆ. ಯಶ್ ಅವರು ತಮ್ಮ ರಗಡ್ ಲುಕ್ ಮೂಲಕ ಮಿಂಚಿದ್ದಾರೆ.
ಯಶ್ ಅವರು ಶರ್ಟ್ಲೆಸ್ ಆಗಿ ಎಂಟ್ರಿ ಕೊಡುತ್ತಾರೆ. ಈ ಸಿನಿಮಾದಲ್ಲಿ ಅವರ ಪಾತ್ರದ ಹೆಸರು ರಾಯ. ಸಿನಿಮಾ ಮೇಕಿಂಗ್ ಹಾಲಿವುಡ್ ಸ್ಟೈಲ್ನಲ್ಲಿ ಇದೆ.
ಹಸಿಬಿಸಿ ದೃಶ್ಯಗಳು ಕೂಡ ಟೀಸರ್ನಲ್ಲಿ ಇವೆ.
ಯಶ್ ಅವರು ಸಖತ್ ಮಾಸ್ ಆಗಿ ಸಿಗಾರ್ ಸೇದುತ್ತಾ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಮಾರ್ಚ್ 19ರಂದು ‘ಧುರಂಧರ್ 2’ ಎದುರು ತೆರೆಗೆ ಬರುತ್ತಿದೆ.
ಟಾಕ್ಸಿಕ್ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಮತ್ತು ಇಂಗ್ಲಿಷ್ ನಲ್ಲಿ ಕೂಡ ತೆರೆ ಕಾಣುತ್ತಿರುವುದು ವಿಶೇಷ
ಕಳೆದ ಮೂರ್ನಾಲ್ಕು ವರ್ಷಗಳಿಂದ ಯಶ್ ಫ್ಯಾನ್ಸ್ ಕೈಗೆ ಸಿಗುತ್ತಿಲ್ಲ, ಟಾಕ್ಸಿಕ್ ಚಿತ್ರ ತಯಾರಿಯ ಬ್ಯುಸಿಯಲ್ಲಿದ್ದರು. ಅವರ ಅಭಿಮಾನಿಗಳಿಗೆ ನೆಚ್ಚಿನ ನಾಯಕನನ್ನು ಭೇಟಿ ಮಾಡುವ ಕಾತರವಿದೆ.
ಈ ವರ್ಷ ನನ್ನ ಹುಟ್ಟುಹಬ್ಬದಂದು ಚಿತ್ರವನ್ನು ಪೂರ್ಣಗೊಳಿಸುವಲ್ಲಿ ನಾನು ಸಂಪೂರ್ಣವಾಗಿ ಮಗ್ನನಾಗಿದ್ದೇನೆ. ಈ ಕಾರಣದಿಂದಾಗಿ, ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ"ಎಂದು ಯಶ್ ಪೋಸ್ಟ್ ಮಾಡಿದ್ದಾರೆ.