ಉಡುಪಿ ಪರ್ಯಾಯ: ಶಿರೂರು ಶ್ರೀಗಳ ಸರ್ವಜ್ಞ ಪೀಠಾರೋಹಣದ ಸುಂದರ ಚಿತ್ರಗಳು...

Sumana Upadhyaya

ಶಿರೂರು ಪರ್ಯಾಯ ಮಹೋತ್ಸವದ ಅಧಿಕಾರ ಹಸ್ತಾಂತರ ಇಂದು ಭಾನುವಾರ ಬೆಳಗ್ಗೆ ಸಂಪನ್ನಗೊಂಡಿದೆ. ಉಡುಪಿ ಅಷ್ಟಮಠದ ಯತಿಗಳಾದಿಯಾಗಿ, ಹಲವು ಗಣ್ಯರು ಭಾಗವಹಿಸಿದ್ದರು.

ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ಪೀಠಾರೋಹಣ ಮಾಡಿದ್ದು, ಸರ್ವಜ್ಞ ಪೀಠಾರೋಹಣ ಮಾಡಿದ ಅತ್ಯಂತ ಎಳೆಯ ಪ್ರಾಯದ ಯತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆ ಮೂಲಕ ಮುಂದಿನ 2 ವರ್ಷಗಳ ಕಾಲ ಶ್ರೀಕೃಷ್ಣನ ಪೂಜಾಧಿಕಾರವನ್ನು ಶೀರೂರುಶ್ರೀಗಳು ಪಡೆದಿದ್ದರೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ 4ನೇ ಪರ್ಯಾಯ ಮಹೋತ್ಸವ ಸಮಾಪನವಾಗಿದೆ.

ಇದುವರೆಗಿನ ಉಡುಪಿ ಪರ್ಯಾಯದ ಇತಿಹಾಸದಲ್ಲೇ ಕಂಡು ಕೇಳರಿಯದ ಭಕ್ತಸಾಗರದ ಮಧ್ಯೆ ಶೀರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥರು ಇದೇ ಮೊದಲ ಬಾರಿಗೆ ಸರ್ವಜ್ಞ ಪೀಠವನ್ನೇರಿದ್ದಾರೆ

ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳು, ಶೀರೂರು ಶ್ರೀಗಳಿಗೆ ಅಕ್ಷಯ ಸಟ್ಟುಗ ಮತ್ತು ಮಠದ ಕೀಲಿಕೈಯನ್ನು ಹಸ್ತಾಂತರಿಸಿದರು.

ಪರ್ಯಾಯ ಮೆರವಣಿಗೆ ಆರಂಭಕ್ಕೆ ಮುನ್ನ ಉಡುಪಿ ಹೊರವಲಯದ ಕಾಪು ದಂಡತೀರ್ಥದಲ್ಲಿ ಮಧ್ಯರಾತ್ರಿ ಪುಣ್ಯಸ್ನಾನ ಮುಗಿಸಿದ ಶೀರೂರು ಶ್ರೀಗಳು, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ನಗರದ ಜೋಡುಕಟ್ಟೆಗೆ ಆಗಮಿಸಿದರು.

ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಶ್ರೀಗಳು, ಶೀರೂರು ಶ್ರೀಗಳಿಗೆ ಅಕ್ಷಯ ಸಟ್ಟುಗ ಮತ್ತು ಮಠದ ಕೀಲಿಕೈಯನ್ನು ಹಸ್ತಾಂತರಿಸುವ ಪ್ರಕ್ರಿಯೆ

ಪರ್ಯಾಯದ ಅದ್ದೂರಿತನ ಮತ್ತು ವೈಭವಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು.

ರಥಬೀದಿಗೆ ಆಗಮಿಸಿದ ಶೀರೂರು ಶ್ರೀಗಳು, ಮೊದಲು ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು, ಪೂಜೆಯನ್ನು ಸಲ್ಲಿಸಿದರು.

ಅಲ್ಲಿಂದ, ಮುಖ್ಯದ್ವಾರದಲ್ಲಿ ಪುತ್ತಿಗೆ ಹಿರಿಯ ಮತ್ತು ಕಿರಿಯ ಶ್ರೀಗಳು ಪರ್ಯಾಯ ಶ್ರೀಗಳನ್ನು ಸ್ವಾಗತಿಸಿ, ಕೃಷ್ಣಮಠದೊಳಗೆ ಕರೆದುಕೊಂಡು ಹೋದರು. ನವಗ್ರಹ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದ ಶ್ರೀಗಳು, ಬಳಿಕ ಸರ್ವಜ್ಞ ಪೀಠವನ್ನೇರಿದರು.

ರಸ್ತೆಯ ಇಕ್ಕೆಲಗಳಲ್ಲಿ, ಬೃಹತ್ ಕಟ್ಟಡ ಮಳಿಗೆಗಳ ಮೇಲೆ, ಕಂಪೌಂಡ್’ಗಳನ್ನು ಹತ್ತಿ ಜನರು ಪರ್ಯಾಯ ಮೆರವಣಿಗೆಯನ್ನು ವೀಕ್ಷಿಸಿದರು.

ಪರ್ಯಾಯದ ಅದ್ದೂರಿತನ ಮತ್ತು ವೈಭವಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತರು ಸಾಕ್ಷಿಯಾದರು. ಪರ್ಯಾಯ ಸ್ವಾಗತ ಸಮಿತಿಯ ಗೌರವ ಅಧ್ಯಕ್ಷರಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸಭಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸುಮಾರು 12ನೇ ಶತಮಾನದಲ್ಲಿ ಉಡುಪಿಯಲ್ಲಿ ಕೃಷ್ಣನನ್ನು ಪ್ರತಿಷ್ಠಾಪಿಸಿದ ಮಧ್ವಾಚಾರ್ಯರ ನಂತರ ಸಾವಿರಾರು ಪರ್ಯಾಯೋತ್ಸವಗಳಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos