ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಕ್ರಿಕೆಟಿಗ ವೈಶಾಕ್ ವಿಜಯ್‌

Srinivasa Murthy VN

ಟೀಮ್ ಇಂಡಿಯಾ ಹಾಗೂ ಕರ್ನಾಟಕ ತಂಡದ ವೇಗದ ಬೌಲರ್ ವೈಶಾಕ್ ವಿಜಯ್‌ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೈಶಾಕ್ ತಮ್ಮ ಬಹುಕಾಲದ ಗೆಳತಿ ಸಾಗರಿಕ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಬೆಂಗಳೂರಿನ 'ಮೈನ್ ಪ್ಯಾಲೇಸ್​'ನಲ್ಲಿ ನಡೆದ ಈ ಅದ್ಧೂರಿ ವಿವಾಹದಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಕ್ರಿಕೆಟ್ ಲೋಕದ ಗಣ್ಯರು ಸಾಕ್ಷಿಯಾಗಿದ್ದರು.

ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಅವರು ಮದುವೆಗೆ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದು ವಿಶೇಷವಾಗಿತ್ತು.

ಜನವರಿ 31, 1997 ರಂದು ಬೆಂಗಳೂರಿನಲ್ಲಿ ಜನಿಸಿದ ವೈಶಾಕ್, ಆರಂಭದಲ್ಲಿ ಬ್ಯಾಟರ್ ಆಗಿ ಕರ್ನಾಟಕದ ಅಂಡರ್-16 ತಂಡವನ್ನು ಮುನ್ನಡೆಸಿದ್ದರು.

ನಂತರ ವೇಗದ ಬೌಲರ್ ಆಗಿ ರೂಪಾಂತರಗೊಂಡ ಇದೀಗ ಭಾರತ ಮತ್ತು ಕರ್ನಾಟಕ ತಂಡಗಳಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮೂಲಕ ವೈಶಾಕ್ ಐಪಿಎಲ್ ಪ್ರವೇಶಿಸಿದ್ದರು.

ಇತ್ತೀಚೆಗೆ ನಡೆದ 2025ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ವೈಶಾಕ್ ಅವರನ್ನು 1.80 ಕೋಟಿ ರೂ. ನೀಡಿ ಖರೀದಿಸಿದೆ.

ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ವಿರೋಶ್'