ವಂಶಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಲದೀಪ್ ಯಾದವ್

Srinivasa Murthy VN

ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕುಲದೀಪ್ ಯಾದವ್ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಉತ್ತರಾಖಂಡದ ಮಸ್ಸೂರಿಯ ಸುಂದರ ಬೆಟ್ಟಗಳ ನಡುವೆ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರೊಂದಿಗೆ ಕುಲದೀಪ್ ಯಾದವ್ ಸಪ್ತಪದಿ ತುಳಿದಿದ್ದಾರೆ.

ಮಸ್ಸೂರಿಯ ಹೋಟೆಲ್ ಸೆವೊಯ್‌ನಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದ್ದು, ಸಾಂಪ್ರದಾಯಿಕ ಏಳು ಹೆಜ್ಜೆಗಳನ್ನು ಇಡುವ ಮೂಲಕ ಮದುವೆ ಶಾಸ್ತ್ರ ಸಂಪನ್ನಗೊಂಡಿದೆ.

ಈ ವಿಶೇಷ ಮದುವೆ ಕಾರ್ಯಕ್ರಮಕ್ಕೆ ಕುಲದೀಪ್ ಯಾದವ್ ಮತ್ತು ವಂಶಿಕಾ ಕುಟುಂಬ ಸದಸ್ಯರು, ಆಪ್ತರು ಮತ್ತು ಕ್ರಿಕೆಟ್ ಜಗತ್ತಿನ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಭಾರತ ಕ್ರಿಕೆಟಿಗರಾದ ಯಜುವೇಂದ್ರ ಚಹಲ್, ತಿಲಕ್ ವರ್ಮಾ, ಸುರೇಶ್ ರೈನಾ, ರಿಂಕು ಸಿಂಗ್ ಸೇರಿದಂತೆ ಹಲವರು ಹಾಜರಿದ್ದರು.

ವಿವಾಹಕ್ಕೆ ಮುಂಚಿನ ದಿನಗಳಲ್ಲಿ, ಹಲ್ಡಿ, ಮೆಹೆಂದಿ ಮತ್ತು ಸಂಗೀತದಂತಹ ಸಾಂಪ್ರದಾಯಿಕ ವಿವಾಹಪೂರ್ವ ಸಮಾರಂಭಗಳನ್ನು ನಡೆಸಲಾಯಿತು.

ಆಚರಣೆಯ ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಮಸ್ಸೂರಿಯಲ್ಲಿ ನಡೆದ ವಿವಾಹ ಸಮಾರಂಭದ ನಂತರ, ದಂಪತಿಗಳು ಮಾರ್ಚ್ 17 ರಂದು ಲಕ್ನೋದಲ್ಲಿ ಭವ್ಯವಾದ ಆರತಕ್ಷತೆಯನ್ನು ಆಯೋಜಿಸುವ ನಿರೀಕ್ಷೆಯಿದೆ.

ಕೊನೆಗೂ ಅನುಷ್ಕಾಶೆಟ್ಟಿಗೆ ಕೂಡಿಬಂತು ಕಂಕಣಭಾಗ್ಯ: ವರ ಯಾರು?