Photos | ಪ್ರಧಾನಿ ನರೇಂದ್ರ ಮೋದಿ- ಇಟಲಿ ಪಿಎಂ ಜಾರ್ಜಿಯಾ ಮೆಲೋನಿ 'Melodi' ಕ್ಷಣಗಳು

Sumana Upadhyaya

ಐದು ರಾಷ್ಟ್ರಗಳ ಪ್ರವಾಸದ ಐದನೇ ಮತ್ತು ಅಂತಿಮ ಹಂತವಾಗಿ ರೋಮ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರೋಮ್‌ಗೆ ಬಂದ ತಕ್ಷಣ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಭೋಜನದ ವೇಳೆ ಭೇಟಿಯಾಗುವ ಅವಕಾಶ ದೊರೆಯಿತು. ಬಳಿಕ ಐತಿಹಾಸಿಕ ಕೊಲೊಸಿಯಮ್‌ಗೆ ಭೇಟಿ ನೀಡಿದೆವು. ವಿವಿಧ ವಿಷಯಗಳ ಕುರಿತು ಪರಸ್ಪರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡೆವು ಎಂದು ಮೋದಿ ಬರೆದುಕೊಂಡಿದ್ದಾರೆ.

ಇಟಲಿ ಪ್ರಧಾನಿಯ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದೆ. ವ್ಯಾಪಾರ, ಹೂಡಿಕೆ, ರಕ್ಷಣಾ ಕ್ಷೇತ್ರ, ಶುದ್ಧ ಇಂಧನ, ನವೀನತೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ವಿನಿಮಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೆ ಒತ್ತು ನೀಡಿರುವ 2025-2029ರ ಜಂಟಿ ತಂತ್ರಾತ್ಮಕ ಕಾರ್ಯಯೋಜನೆಯಡಿ ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳು ಇನ್ನಷ್ಟು ಗಾಢವಾಗುತ್ತಿರುವ ಸಂದರ್ಭದಲ್ಲೇ ಈ ಭೇಟಿ ಮಹತ್ವ ಪಡೆದಿದೆ.

ಇಟಲಿ ಪ್ರಧಾನಿ Giorgia Meloni ಅವರು ರೋಮ್‌ಗೆ ಆಗಮಿಸಿದ ಪ್ರಧಾನಿ Narendra Modi ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.“Welcome to Rome, my friend!” ಎಂದು ಬರೆದುಕೊಂಡಿದ್ದಾರೆ. ಜೊತೆಗೆ, ಇಟಲಿಯ ಐತಿಹಾಸಿಕ ಕೊಲೊಸಿಯಮ್‌ನಲ್ಲಿ ಮೋದಿ ಅವರೊಂದಿಗೆ ತೆಗೆಸಿಕೊಂಡಿದ್ದ ಹಳೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ಇಟಾಲಿಯನ್ ಚಿತ್ರಕಾರ Giampaolo Tomassetti ವಾರಾಣಸಿಯ ಕುರಿತ ಕಲಾಕೃತಿಯನ್ನು ಪ್ರದರ್ಶಿಸಿದರು.

ಔತಣಕೂಟ ನಂತರ ಒಂದೇ ಕಾರಿನಲ್ಲಿ ಅಲ್ಲಿನ ಕೊಲೋಸಿಯಂಗೆ ಪ್ರಯಾಣಿಸಿದರು.

ಪ್ರಧಾನಿ ಮೋದಿ ಇಟಲಿ ಪ್ರಧಾನ ಮಂತ್ರಿ ಮೆಲೋಡಿ ಚಾಕಲೇಟ್ ಗಿಫ್ಟ್ ನೀಡಿದ್ದನ್ನು ಇಟಲಿ ಪ್ರಧಾನ ಮಂತ್ರಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಇಟಲಿ ಪ್ರಧಾನಿ

ಇಟಲಿಯ ರೋಮ್ ನಲ್ಲಿ ಐತಿಹಾಸಿಕ ಕೊಲೊಸ್ಸಿಯಮ್ ಗೆ ಭೇಟಿ ನೀಡಿ ಪರಿಶೀಲಿಸಿದ ಪ್ರಧಾನ ಮಂತ್ರಿಗಳು

ಇಟಲಿಯ ಕಲಾವಿದರು ಭಾರತದ ಶಾಸ್ತ್ರೀಯ ಸಂಗೀತ ಮೂಲಕ ಪ್ರಧಾನಿ ಮೋದಿಯವರಿಗೆ ಗೌರವ ಸೂಚಿಸಿದ್ದು ಹೀಗೆ