ಶ್ರಾವಣ ಮಾಸದಲ್ಲೇ 'ನಾಗರಪಂಚಮಿ' ಏಕೆ ಆಚರಿಸುತ್ತೇವೆ ಗೊತ್ತಾ?

ಪವಿತ್ರ ಮಾಸ ಶ್ರಾವಣ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳ ಸಡಗರ , ಸಂಭ್ರಮ ಎಲ್ಲೆಡೆ ಮನೆಮಾಡುತ್ತದೆ.ಶ್ರಾವಣ ಶಿವರಾತ್ರಿ ಹಾಗೂ ಹರಿಯಾಲಿ ಜೀತ್ ಹಬ್ಬದ ನಂತರ ಇದೀಗ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ

Published: 05th August 2019 12:00 PM  |   Last Updated: 07th August 2019 02:11 AM   |  A+A-


Nagara Panchami

ನಾಗರ ಪಂಚಮಿ

Posted By : ABN ABN
Source : Online Desk
ಬೆಂಗಳೂರು: ಪವಿತ್ರ ಮಾಸ ಶ್ರಾವಣ ಬಂತೆಂದರೆ ಸಾಕು ಸಾಲು ಸಾಲು ಹಬ್ಬಗಳ ಸಡಗರ , ಸಂಭ್ರಮ ಎಲ್ಲೆಡೆ  ಮನೆಮಾಡುತ್ತದೆ.ಶ್ರಾವಣ  ಶಿವರಾತ್ರಿ ಹಾಗೂ ಹರಿಯಾಲಿ ಜೀತ್ ಹಬ್ಬದ ನಂತರ ಇದೀಗ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಶುಕ್ಲಾ ಪಂಚಾಮಿ ಹಾಗೂ ದಕ್ಷಿಣ ಭಾರತದಲ್ಲಿ ಕೃಷ್ಣಾ ಪಕ್ಷದಲ್ಲಿ ನಾಗರ ಪಂಚಮಿ ಹಬ್ಬ ಆಚರಿಸಲಾಗುತ್ತದೆ. 

ಶ್ರವಣ ಮಾಸದ ಶುಕ್ಲಾ ಪಕ್ಷದ ಐದನೇ ದಿನದಂದು ನಾಗರ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 5 ರಂದು ನಾಗರಪಂಚಮಿ ಬಂದಿದೆ. ಭಕ್ತಾಧಿಗಳು ಹುತ್ತ ಹಾಗೂ ಹಾವಿನ ವಿಗ್ರಹಗಳನ್ನು ಹೂ, ಹಣ್ಣುಗಳಿಂದ ಆಲಂಕರಿಸಿ, ಹಾಲೆರೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಕೆಲವರು ಗರುಡ ಪಂಚಾಮಿ ಹಬ್ಬವಾಗಿಯೂ ಆಚರಿಸುತ್ತಾರೆ. ಈ ಪವಿತ್ರ ದಿನದಂದು ಭಕ್ತಾಧಿಗಳು ರುದ್ರಾಭಿಷೇಕ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ. 

ಶಿವನ ಆರಾಧಕರಿಗೆ ನಾಗರ ಪಂಚಮಿ ಅತಿ ಮುಖ್ಯವಾದ ಹಬ್ಬವಾಗಿದೆ. ಮರ, ಬೆಳ್ಳಿ, ಕಲ್ಲು ಮತ್ತಿತರ ವಸ್ತುಗಳಿಂದ ಮಾಡಲಾದ ಹಾವಿನ ವಿಗ್ರಹಗಳಿಗೆ ಹಾಲಿನಿಂದ ಅಭಿಷೇಕ ಮಾಡಲಾಗುತ್ತದೆ. ಹಿಂದೂ ಪುರಾಣಗಳಲ್ಲಿ  ಹಾವುಗಳಿಗೆ ಮಹತ್ವದ ಸ್ಥಾನ ನೀಡಲಾಗುತ್ತದೆ. ಹಾವುಗಳಿಗೆ ಸಂಬಂಧಿಸಿದಂತೆ  ಪುರಾಣಗಳಲ್ಲಿ ಅನೇಕ ಕಥೆಗಳು ಇವೆ. ಶಿವನ ಶೇಷನಾಗನಿಗೆ ಸಂಬಂಧಿಸಿ ಹಲವು ಕಥೆಗಳಿವೆ. 

ಶೇಷನಾಗನ ಬೆಂಬಲದಿಂದ ಇಡೀ ಭೂಮಿ ಸಮತೋಲನದಲ್ಲಿದೆ ಎಂದು ನಂಬಲಾಗುತ್ತದೆ. ಈ ದಿನದಂದು ನಾಗರಾಜನನ್ನು ಪೂಜೆಸಿದರೆ ಅಪಾಯಕಾರಿ ಹಾವುಗಳಿಂದ ಕುಟುಂಬಕ್ಕೆ ರಕ್ಷಣೆ ದೊರೆಯಲಿದೆ ಎಂಬ ನಂಬಿಕೆಯಿಂದ ಜನರು ವಿಶೇಷ ಪೂಜೆ ಸಲ್ಲಿಸುತ್ತಾರೆ. 

ನಾಗ ಸಂಸ್ಕೃತಿ ಹಿಂದೂ ಸಂಸ್ಕೃತಿಯೂ ಆಗಿದೆ. ಆರ್ಯರ ಕಾಲದಿಂದಲೂ ಹಾವುಗಳನ್ನು ಪೂಜೆಸುವ ಪದ್ಧತಿ ಬೆಳೆದುಕೊಂಡು ಬಂದಿದೆ. ಶಿವನ್ನು ತನ್ನ ಕೊರಳಿನ ಸುತ್ತಲೂ ಹಾವನ್ನು ಸುತ್ತಿಕೊಂಡಿರುವ ಹಿನ್ನೆಲೆಯಲ್ಲಿ  ಹಾವುಗಳಿಗೆ ದೇವರ ಸ್ಥಾನ ನೀಡಲಾಗಿದೆ. ಯಮುನಾ ನದಿಯಲ್ಲಿ ಕಲಿಯಾ ನಾಗ ವಿರುದ್ಧ ಕೃಷ್ಣ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿಯೂ ಕೆಲವರು ನಾಗರ ಪಂಚಮಿ ಆಚರಿಸುತ್ತಾರೆ. 
Stay up to date on all the latest ಭವಿಷ್ಯ-ಆಧ್ಯಾತ್ಮ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp