ಬೃಹತ್ ಯಜ್ಞ ನಡೆಸಲು ಮುಂದಾದ ತೆಲಂಗಾಣ ಸಿಎಂ ಕೆಸಿಆರ್; ಎಲ್ಲಾ ಮುಖ್ಯಮಂತ್ರಿಗಳಿಗೂ ಆಹ್ವಾನ

ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ಮಹಾಸುದರ್ಶನ ಯಜ್ಞ ನಡೆಸಲು ಉದ್ದೇಶಿಸಿದ್ದಾರೆ.
ಬೃಹತ್ ಯಜ್ಞ ನಡೆಸಲು ಮುಂದಾದ ತೆಲಂಗಾಣ ಸಿಎಂ ಕೆಸಿಆರ್; ಎಲ್ಲಾ ಮುಖ್ಯಮಂತ್ರಿಗಳಿಗೂ ಆಹ್ವಾನ
ಬೃಹತ್ ಯಜ್ಞ ನಡೆಸಲು ಮುಂದಾದ ತೆಲಂಗಾಣ ಸಿಎಂ ಕೆಸಿಆರ್; ಎಲ್ಲಾ ಮುಖ್ಯಮಂತ್ರಿಗಳಿಗೂ ಆಹ್ವಾನ
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಸಿ ಚಂದ್ರಶೇಖರ್ ರಾವ್ ಮಹಾಸುದರ್ಶನ ಯಜ್ಞ ನಡೆಸಲು ಉದ್ದೇಶಿಸಿದ್ದಾರೆ.
ಹೈದರಾಬಾದ್ ಬಳಿ ಇರುವ ಯಾದಾದ್ರಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಈ ಯಜ್ಞ ನಡೆಯಲಿದ್ದು, ಇದಕ್ಕಾಗಿ ನಡೆಸಬೇಕಿರುವ ತಯಾರಿಗಳ ಬಗ್ಗೆ ತ್ರಿದಂಡಿ ಚಿನ್ನಾ ಜಿಯರ್ ಸ್ವಾಮಿಗಳೊಂದಿಗೆ ಸಿಎಂ ಚರ್ಚೆ ನಡೆಸಿದ್ದಾರೆ. 
100 ಎಕರೆ ಪ್ರದೇಶದಲ್ಲಿ 1048 ಯಜ್ಞ ಕುಂಡಗಳು ಸ್ಥಾಪನೆಯಾಗಲಿದ್ದು, 1000 ಮಂದಿ ಋತ್ವಿಜರು, 3000 ಸಹಾಯಕರು ಯಜ್ಞವನ್ನು ನಡೆಸಿಕೊಡಲಿದ್ದಾರೆ. ಬದ್ರಿನಾಥ್, ಶ್ರೀರಂಗಂ, ಜಗನ್ನಾಥ, ತಿರುಪತಿ ಹಾಗೂ ಇನ್ನಿತರ ಶ್ರೀಕ್ಷೇತ್ರಗಳ ವೈಷ್ಣವ ಪೀಠಾಧಿಪತಿಗಳನ್ನು ( ಭಾರತ ಹಾಗೂ ವಿದೇಶ) ಯಜ್ಞಕ್ಕೆ ಆಹ್ವಾನಿಸಲಾಗುತ್ತದೆ. 
ಸಿಎಂ ಕೆಸಿಆರ್ ಕೇಂದ್ರ ಸರ್ಕಾರದ ಗಣ್ಯರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಚಿವರು, ಹಿಂದೂ ಧರ್ಮದ ಎಲ್ಲಾ ಗುರುಗಳನ್ನು ಆಹ್ವಾನಿಸುವ ಯೋಜನೆ ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com