ಮುಖದ ಅಂದ ಹೆಚ್ಚಿಸುವ ಮೂಗುತಿಯ ಮಹತ್ವ ಗೊತ್ತೇ? 

ಮೂಗುತಿಯು ಮೂಗಿನ ಮೇಲೆ ಧರಿಸುವ ಆಭರಣವಾಗಿದ್ದು, ಇದು ಹೆಣ್ಣಿನ ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರ ಮೂಗಿಗಿಂತ ಅವರು ಧರಿಸುತ್ತಿದ್ದ ಮೂಗುತಿಯ ಗಾತ್ರವೇ ದೊಡ್ಡದಾಗಿರುತ್ತಿತ್ತು. ಕಾಲ ಕಳೆದಂತೆ ಮಹಿಳೆಯರು ಚಿಕ್ಕ ಮೂಗುತಿ ಹಾಕಲು ಶುರು ಮಾಡಿದ್ದರು. ಇದೀಗ ಹಳೆಯ ದೊಡ್ಡ ದೊಡ್ಡ ಮೂಗುತಿಗಳೇ ಟ್ರೆಂಡ್ ಆಗುತ್ತಿವೆ.

Published: 11th November 2019 08:37 AM  |   Last Updated: 11th November 2019 08:37 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : Online Desk

ಹೆಣ್ಣು ಮಕ್ಕಳ ಕೋಪ, ಹಠ, ಚಂಚಲತೆ ನಿಗ್ರಹಿಸುತ್ತದೆ ಈ ಸುಂದರ ಮೂಗುತಿ!

ಮೂಗುತಿಯು ಮೂಗಿನ ಮೇಲೆ ಧರಿಸುವ ಆಭರಣವಾಗಿದ್ದು, ಇದು ಹೆಣ್ಣಿನ ಮುಖದ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರ ಮೂಗಿಗಿಂತ ಅವರು ಧರಿಸುತ್ತಿದ್ದ ಮೂಗುತಿಯ ಗಾತ್ರವೇ ದೊಡ್ಡದಾಗಿರುತ್ತಿತ್ತು. ಕಾಲ ಕಳೆದಂತೆ ಮಹಿಳೆಯರು ಚಿಕ್ಕ ಮೂಗುತಿ ಹಾಕಲು ಶುರು ಮಾಡಿದ್ದರು. ಇದೀಗ ಹಳೆಯ ದೊಡ್ಡ ದೊಡ್ಡ ಮೂಗುತಿಗಳೇ ಟ್ರೆಂಡ್ ಆಗುತ್ತಿವೆ. ಮಹಿಳೆಯರ ಅಂದ ಹೆಚ್ಚಿರುವ ಮೂಗುತಿ ಮಹತ್ವ ನಿಮಗೆ ಗೊತ್ತೇ?...

ಹಿಂದೂ ಸಂಪ್ರದಾಯದಲ್ಲಿ ಮೂಗುತಿಗೆ ವಿಶೇಷ ಮಹತ್ವವನ್ನು ಕೊಡಲಾಗುತ್ತದೆ. ಹಿಂದೂ ಸಂಪ್ರದಾಯದ ಪ್ರಕಾರ ಸ್ತ್ರೀಯರಿಗೆ ಮಾತ್ರ ಮೂಗುತಿ ಹಾಕಲು ಹೇಳಿರುವುದರ ಹಿಂದೆಯೂ ಶಾಸ್ತ್ರವಿದೆ. ಸ್ತ್ರೀಯರ ಮನಸ್ಸು ಚಂಚಲವಾಗಿರುತ್ತದೆ. ಆದ್ದರಿಂದ ಮೂಗುತಿ ಧರಿಸುವುದರಿಂದ ಸ್ತ್ರೀಯರ ಚಂದ್ರನಾಡಿ ಕಾರ್ಯನಿರತವಾಗಿ ಮನಸ್ಸು ಸ್ಥಿರವಾಗುತ್ತದೆ. ಅಷ್ಟೆ ಅಲ್ಲದೆ, ಮೂಗಿನ ಬಿಂದುವಿನ ಮೇಲೆ ಒತ್ತಡವು ನಿರ್ಮಾಣವಾಗಿ ಬಿಂದು ಒತ್ತಡದ ಉಪಚಾರವಾಗುವುದರಿಂದ ಅಲ್ಲಿನ ಕಪ್ಪು ಶಕ್ತಿಯು ಕಡಿಮೆಯಾಗುತ್ತದೆ. 

ಕುದುರೆಗೆ ಮೂಗಿಗೆ ದಾರ ಹಾಕಿ ನಿಯಂತ್ರಿಸುವುದನ್ನು ನೋಡಿರಬಹುದು. ಅದೇ ರೀತಿಯಲ್ಲಿಯೇ ಮೂಗುತ್ತಿ ಕೂಡ ಹೆಣ್ಣಿನ ಕೋಪ, ಹಠ, ಚಂಚಲತೆಯನ್ನು ನಿಗ್ರಹಿಸುತ್ತದೆ. ಮೂಗುತ್ತಿಯಲ್ಲಿಯೂ ವಿವಿಧ ಪ್ರಕಾರದ ಮೂಗುತಿಗಳಿವೆ. 

ಮದುವೆ ಸಮಾರಂಭಗಳಲ್ಲಿ ದೊಡ್ಡದಾದ ವೃತ್ತಾಕಾರದ ಮೂಗುತಿಯನ್ನು ವಧುವಿಗೆ ಧರಿಸಲಾಗುತ್ತದೆ. ಇದು ವಧುವಿನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಭಾರತೀಯ ಹೆಂಗಳೆಯರು ಅವರವರ ಆಚರಣೆಗಳಿಗೆ ತಕ್ಕಂತೆ ಅವರವರ ಇಚ್ಛೆಯ ಪ್ರಕಾರವಾಗಿ ಮೂಗುತ್ತಿಯನ್ನು ಧರಿಸುತ್ತಾರೆ. 

ಹಿಂದಿ ಭಾಷೆಯಲ್ಲಿ ನಾಥ್ ಎಂದು ಕರೆಯಲ್ಪಡುವ ಮೂಗುತಿ 9 ಮತ್ತು 10ನೇ ಶತಮಾನದಲ್ಲಿ ಜನಪ್ರಿಯಗೊಂಡಿತ್ತು. ಮತ್ತು ಮಹಿಳೆಯರ ವೈವಾಹಿಕ ಸ್ಥಿತಿಯ ವಿವಿಧ ಸಂಕೇತಗಳ ಭಾಗವಾದವು. ಇದು ಆರ್ಥಿಕ ಸ್ಥಾನಮಾನವನ್ನೂ ಪ್ರದರ್ಶಿಸುತ್ತಿತ್ತು. ರಾಣಿಯರು, ಮಂತ್ರಿಗಳ ಪತ್ನಿಯರು ಮತ್ತು ಶ್ರೀಮಂತ ಕುಟುಂಬದ ಮಹಿಳೆಯರು ಮುತ್ತು, ನೀಲಮಣಿ ಮತ್ತು ಕುಂದನ್ ವುಳ್ಳ ಮೂಗುತ್ತಿಗಳನ್ನು ಧರಿಸುತ್ತಿದ್ದರು. ಇತರರು ಬೆಳ್ಳಿಯ ಮೂಗುತ್ತಿಗಳನ್ನು ಧರಿಸುತ್ತಿದ್ದರು. 15ನೇ ಶತಮಾನದ ಕಡೆಗೆ ಈ ಮೂಗುತು ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದು. 17-18ನೇ ಶತಮಾನದ ಅವಧಿಯಲ್ಲಿ ಲವಂಗ, ಮುಳ್ಳುಗಳು, ಮೊಳೆಗಳನ್ನು ಬಳಸುವ ವ್ಯತ್ಯಯನಗಳನ್ನು ಕಂಡಿತು. ಇದಾದ ಬಳಿಕ ಸಮಕಾಲೀನ ಸಾಮಾಗ್ರಿಗಳು ಮತ್ತು ವಿನ್ಯಾಸಗಳಿರುವ ಆಧುನಿಕ ಮೂಗುತಿಗಳು 20ನೇ ಶತಮಾನದಲ್ಲಿ ಬಂದವು. 

ಮೂಗಿಗೆ ಧರಿಸುವ ಈ ವಿಶೇಷ ಮೂಗುತಿ ಮಹಿಳೆಯರ ಶ್ವಾಸಮಾರ್ಗವನ್ನು ರಕ್ಷಿಸುತ್ತದೆ. ಮೂಗುತಿಯಲ್ಲಿರುವ ಸಾತ್ತ್ವಿಕತೆ ಮತ್ತು ಚೈತನ್ಯದಿಂದ ಮೂಗಿನ ಚೈತನ್ಯದ ವಲಯವು ನಿರ್ಮಾಣವಾಗುತ್ತದೆ. ಮೂಗಿನ ಸುತ್ತಲಿನ ವಾಯುಮಂಡಲವೂ ಶುದ್ಧವಾಗುತ್ತದೆ. ಇದರಿಂದ ಶ್ವಾಸಮಾರ್ಗದಿಂದ ಶುದ್ಧಗಾಳಿಯು ದೇಹ ಪ್ರವೇಶಿಸಲು ಸುಲಭವಾಗುತ್ತದೆ. 
 
ಇದಲ್ಲದೆ, ಋತು ಚಕ್ರದ ಸಮಯದಲ್ಲಿ ಉಂಟಾಗುವ ನೋವುಗಳೂ ಕೂಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕಾಗಿಯೇ ಯುವತಿಯರು ಋತುಮತಿಯಾದ ಬಳಿಕ ಅವರಿಗೆ ಮೂಗು ಚುಚ್ಚಿಸುತ್ತಾರೆ. ಸಾಮಾನ್ಯವಾಗಿ ಮಹಿಳೆಯರು ಮೂಗುತಿಯನ್ನು ಮೂಗಿನ ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಇದಕ್ಕೆ ಕಾರಣ, ಮಹಿಳೆಯರ ಗರ್ಭಕೋಶ ಮತ್ತಿತರ ಜನನಾಗಂಗಳಿಗೆ ಸಂಬಂಧಿಸಿದ ನರವು ಮೂಗಿನ ಎಡಭಾಗದೊಂದಿಗೆ ಸಂಬಂಧ ಹೊಂದಿರುತ್ತದೆ. ಇದೇ ಕಾರಣದಿಂದಾಗಿ ಮೂಗುತಿಯನ್ನು ಎಡಭಾಗಕ್ಕೆ ಹಾಕಿಕೊಳ್ಳುತ್ತಾರೆ. ಜೊತೆಗೆ ಇದು ಮಹಿಳೆಯರ ಹೆರಿಗೆ ಸಮಯದಲ್ಲಿ ಅವರ ನೋವನ್ನು ಕಡಿಮೆ ಮಾಡಲು ಕೂಡ ತುಂಬಾ ಸಹಾಯ ಮಾಡುತ್ತದೆ. ಹೀಗಾಗಿ ಮಹಿಳೆಯರಿಗೆ ಮೂಗುತಿ ಅವರ ಅಂದದ ಜೊತೆಗೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಮೂಗುತಿ ಎಂದಾಕ್ಷಣ ಮೂಗು ಮುರಿಯುವ ಮಹಿಳೆಯರು ಈಗಲೇ ಮೂಗುತಿ ಧರಿಸಿ. 

Stay up to date on all the latest ಭವಿಷ್ಯ-ಆಧ್ಯಾತ್ಮ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp