ಅನಂತ ಚತುರ್ದಶಿ ವ್ರತ: ಚತುರ್ದಶಿ ಅಂದರೆ 14, ಈ ವ್ರತದಲ್ಲಿನ 14 ರ ಮಹತ್ವ, ಗೂಢಾರ್ಥದ ಬಗ್ಗೆ ಇಲ್ಲಿದೆ ವಿವರಣೆ 

ಇಂದು ಭಾದ್ರಪದ ಶುಕ್ಲ ಚತುರ್ದಶಿ, ಈ ದಿನ ಅನಂತ ಪದ್ಮನಾಭಸ್ವಾಮಿ ವ್ರತಾಚರಣೆ ಹಲವೆಡೆ ರೂಢಿಯಲ್ಲಿದೆ. ಈ ವ್ರತ ಆಚರಣೆಯ ಹಿಂದಿರುವ ಗುಹ್ಯವಾದ ಆಧ್ಯಾತ್ಮ-ತಾಂತ್ರಿಕ ಅರ್ಥ, ನಿಗೂಢತೆಯ ಬಗ್ಗೆ ತಿಳಿದುಕೊಳ್ಳೋಣ 
ಅನಂತ ಚತುರ್ದಶಿ ವ್ರತ: ಚತುರ್ದಶಿ ಅಂದರೆ 14, ಈ ವ್ರತದಲ್ಲಿನ 14 ರ ಮಹತ್ವ, ಗೂಢಾರ್ಥದ ಬಗ್ಗೆ ಇಲ್ಲಿದೆ ವಿವರಣೆ
ಅನಂತ ಚತುರ್ದಶಿ ವ್ರತ: ಚತುರ್ದಶಿ ಅಂದರೆ 14, ಈ ವ್ರತದಲ್ಲಿನ 14 ರ ಮಹತ್ವ, ಗೂಢಾರ್ಥದ ಬಗ್ಗೆ ಇಲ್ಲಿದೆ ವಿವರಣೆ

ಇಂದು ಭಾದ್ರಪದ ಶುಕ್ಲ ಚತುರ್ದಶಿ, ಈ ದಿನ ಅನಂತ ಪದ್ಮನಾಭಸ್ವಾಮಿ ವ್ರತಾಚರಣೆ ಹಲವೆಡೆ ರೂಢಿಯಲ್ಲಿದೆ. ಈ ವ್ರತ ಆಚರಣೆಯ ಹಿಂದಿರುವ ಗುಹ್ಯವಾದ ಆಧ್ಯಾತ್ಮ-ತಾಂತ್ರಿಕ ಅರ್ಥ, ನಿಗೂಢತೆಯ ಬಗ್ಗೆ ತಿಳಿದುಕೊಳ್ಳೋಣ 

ಅನಂತಪದ್ಮನಾಭ ಸ್ವಾಮಿ ವ್ರತ ದಂಪತಿಗಳು ಆಚರಣೆ ಮಾಡುವಂತಹದ್ದು, ಇದರ ಹಿಂದೆ ದೀರ್ಘವಾದಂತಹ ಆಧ್ಯಾತ್ಮ ಗುಹ್ಯ ಇದೆ, ಅದೇನೆಂದರೆ ಅನಂತಪದ್ಮನಾಭ ಸ್ವಾಮಿ ವ್ರತ ವೃದ್ಧ ದೈವ ವ್ರತ. ಹಾಗಾದರೆ ಭಗವಂತನಿಗೂ ವಯಸ್ಸಾಗತ್ತಾ? ಆತನಿಗೂ ಬಾಲ್ಯ ಯೌವನ, ವೃದ್ಧಾಪ್ಯ ಇದೆಯಾ? ಎಂಬ ಪ್ರಶ್ನೆ ಮೂಡಬಹುದು. 

ಕಣ್ಣಿಗೆ ಕಾಣುವ ಪ್ರಪಂಚ ಇದನ್ನ ಆ ಭಗವಂತನ ಶರೀರ ಅಂತ ಭಾವಿಸಿದ್ದೇವೆ. ಈ ಬ್ರಹ್ಮಾಂಡಕ್ಕೆ ವಯಸ್ಸಾಗತ್ತೆ, ಅಂದರೆ ಬ್ರಹ್ಮಾಂಡಕ್ಕೆ ಸೃಷ್ಟಿ, ಲಯಗಳಿವೆ. ಇದಕ್ಕೂ ಅನಂತಪದ್ಮನಾಭ ಸ್ವಾಮಿ ವ್ರತಕ್ಕೂ ಏನು ಸಂಬಂಧ ಎಂದರೆ ಮೊದಲನೆಯದು ಅನಂತಪದ್ಮನಾಭ ಸ್ವಾಮಿ ವ್ರತದಲ್ಲಿ ಆತ ಅನಂತ ಶಯನದಲ್ಲಿ (ಆದಿಶೇಷನ ಮೇಲೆ) ಮಲಗಿರುತ್ತಾನೆ. ಇದಕ್ಕೆ ಎರಡು ರೀತಿಯ ಅರ್ಥಗಳಿವೆ. ಮೊದಲನೆಯದ್ದೇನು ಅಂತಂದ್ರೆ ಈ ಸೃಷ್ಟಿ ಮತ್ತು ಗತಿಯನ್ನು ನಿರ್ವಹಿಸಿ ವಿಷ್ಣುವಿಗೆ ಸುಸ್ತಾಗಿರುತ್ತದೆ. ಹೀಗಾಗಿ ಆತ ಅನಂತ ಶಯನನಾಗಿರುತ್ತಾನೆ ಎಂಬುದು ಸಾಮಾನ್ಯ ಗ್ರಹಿಕೆ. 

ನಿಗೂಢ ಅರ್ಥವೇನೆಂದರೆ ಸರಿಯಾದ ಸಾಧನೆ ಮಾಡಿದಲ್ಲಿ, ಅನಂತಪದ್ಮನಾಭ ಸ್ವಾಮಿ ವ್ರತಕ್ಕೂ ನಮ್ಮ ದೇಹದಲ್ಲಿರುವ 7 ಚಕ್ರಗಳಿಗೂ ಸಂಬಂಧವಿದೆ. ಸಹಸ್ರಾರಕ್ಕೆ ಕುಂಡಲಿನಿ ಶಕ್ತಿಯನ್ನು ತಲುಪಿಸಿದರೆ, ಶಿರಸ್ಸಿನ ಭಾಗದಲ್ಲಿ ತಲೆಕೆಳಗಾಗಿರುವ ಕುಮುದ ಮೇಲಕ್ಕೆ ಕಮಲವಾಗಿ ಅರಳಲಿದೆ. ಅರಳಿರುವ ಕಮಲ ಜಗತ್ ಜನನಿಯ ಆವಾಸ ಸ್ಥಾನ ಆಕೆ ಬ್ರಹ್ಮಾಂಡದ ಶಕ್ತಿ, ಆ ಬ್ರಹ್ಮಾಂಡ ಶಕ್ತಿಯದ್ದೂ 7 ಚಕ್ರಗಳಿವೆ. ನಮ್ಮ ದೇಹದಲ್ಲಿರುವ 7 ಚಕ್ರಗಳು ಹಾಗೂ ಬ್ರಹ್ಮಾಂಡದ 7 ಚಕ್ರಗಳು ಸೇರಿ 14 ಚಕ್ರಗಳಾಗಲಿವೆ. ಇದನ್ನು ಬೇಧಿಸುವುದು ಅನಂತಪದ್ಮನಾಭ ವ್ರತವನ್ನು ಚತುರ್ದಶಿ (ಭಾದ್ರಪದ ಮಾಸದ ಶುಕ್ಲ ಪಕ್ಷದ 14 ನೇಯ ದಿನ) ಹಿಂದಿನ ತಾಂತ್ರಿಕ ಅರ್ಥ. ಈ ವ್ರತಾಚರಣೆಯ ಇನ್ನೊಂದು ವೈಷಿಷ್ಟ್ಯವೆಂದರೆ ಈ ದಿನದಂದು 14 ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ,. 14 ವಿಧದ ಪೂಜೆ, ಹೀಗೆ ಎಲ್ಲವೂ 14 ರಲ್ಲೇ ಮುಕ್ತಾಯಗೊಳ್ಳುತ್ತದೆ. ನಮ್ಮ ದೇಹ ಹಾಗೂ ಬ್ರಹ್ಮಾಂಡದ ಚಕ್ರಗಳು ಒಟ್ಟು 14 ಚಕ್ರಗಳನ್ನು ಮೀರಿ ಬ್ರಹ್ಮೈಕ್ಯವಾಗುವುದು ಈ ವ್ರತದ ಹಿಂದಿನ ತಾಂತ್ರಿಕವಾದ ನಿಗೂಢ ಅರ್ಥ. ಇದು ಯಾವುದೇ ಒಂದು ಶರೀರದಲ್ಲಿ ಸಾಧಿಸಲು ಸಾಧ್ಯವಿಲ್ಲವಾದ್ದರಿಂದ ದಂಪತಿಗಳು ಈ ವ್ರತಾಚರಣೆ ಮಾಡುವ ರೂಢಿ ಇದ್ದು, ಅನಂತಪದ್ಮನಾಭನ ಕೃಪೆಗೆ ಪಾತ್ರರಾಗಿ ಜೀವನದಲ್ಲಿ ಉತ್ತಮ ಗತಿ ಪಡೆಯಬಹುದಾಗಿದೆ.   
 

ಗುರುನಾಥ್ ಡಾ.ಮನೀಷ್ ಮೋಕ್ಷಗುಂಡಂ, ಮಹಾ ಅಕಾಡೆಮಿ
8880386108, www.maha.academy

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com