ಸಿದ್ಧಗಂಗಾ ಶ್ರೀ ಪುಣ್ಯಸ್ಮರಣೆ: ಶೈಕ್ಷಣಿಕ ವಿಷಯದಲ್ಲಿ ಜೆಎಸ್ಎಸ್ ಮಠಕ್ಕೆ ಶಿವಕುಮಾರ ಸ್ವಾಮೀಜಿ  ಸ್ಪೂರ್ತಿ!

ಸಿದ್ಧಗಂಗಾ ಮಠದ ಸಿದ್ಧಪುರುಷ ಶ್ರೀಶಿವಕುಮಾರ ಸ್ವಾಮಿಗಳು ನಮ್ಮನ್ನು ಭೌತಿಕವಾಗಿ ಅಗಲಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮಹತ್ಕಾರ್ಯಗಳನ್ನು ನೆನಪಿಸುವ ಸ್ಪೂರ್ತಿದಾಯಕ ಅಂಶಗಳು ಇಲ್ಲಿವೆ
 

Published: 20th January 2020 11:25 AM  |   Last Updated: 20th January 2020 11:34 AM   |  A+A-


shivakumara-swami-inspired-jss-mutt-to-promote-education

ದೇವರು ಭೌತಿಕವಾಗಿ ಅಗಲಿ ಒಂದು ವರ್ಷ: ಶೈಕ್ಷಣಿಕ ವಿಷಯದಲ್ಲಿ ಜೆಎಸ್ಎಸ್ ಮಠಕ್ಕೆ ಶಿವಕುಮಾರ ಸ್ವಾಮೀಜಿ  ಸ್ಪೂರ್ತಿ!

Posted By : Srinivas Rao BV
Source : Online Desk

ಸಿದ್ಧಗಂಗಾ ಮಠದ ಸಿದ್ಧಪುರುಷ ಶ್ರೀಶಿವಕುಮಾರ ಸ್ವಾಮಿಗಳು ನಮ್ಮನ್ನು ಭೌತಿಕವಾಗಿ ಅಗಲಿ ಒಂದು ವರ್ಷವಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮಹತ್ಕಾರ್ಯಗಳನ್ನು ನೆನಪಿಸುವ ಸ್ಪೂರ್ತಿದಾಯಕ ಅಂಶಗಳು ಇಲ್ಲಿವೆ
 

ದೊಡ್ಡ ಆತ್ಮಗಳು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವುದು ಮಾತ್ರವಲ್ಲ, ತಮ್ಮ ಸಾಧನೆಯಿಂದ ಬೇರೆಯವರಿಗೂ ಮಾದರಿ ಹಾಗೂ ಸ್ಪೂರ್ತಿಯಾಗಿರುತ್ತಾರೆ,

ಬಸವಣ್ಣನವರ ತತ್ವವಾದ ಜ್ಞಾನ ದಾಸೋಹದಿಂದ  ಶ್ರೀ ಶಿವಕುಮಾರ ಸ್ವಾಮೀಜಿ ಪ್ರೇರಿತರಾಗಿದ್ದರು. ಶಿವಕುಮಾರ ಸ್ವಾಮೀಜಿ ಅವರಿಂದ ಸ್ಪೂರ್ತಿಗೊಂಡ ಸುತ್ತೂರು ಮಠದ ಶಿವರಾತ್ರೀಶ್ವರ ಮಹಾ ವಿದ್ಯಪೀಠ ಹಲವು ಉಚಿತ ಹಾಸ್ಟೆಲ್ ಮತ್ತು ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು.

ಶಿವಕುಮಾರ ಸ್ವಾಮೀಜಿ ಸಹಾಯದಿಂದ ಆರೋಗ್ಯ ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದರು, ಈಗ ಸದ್ಯ ಸುಮಾರು 4.500 ಬಾಲಕರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಜೆಎಸ್ ಎಸ್ ಮಠದ ರಾಜೇಂದ್ರ ಸ್ವಾಮಿ ಅನ್ನದಾಸೋಹ, ಜ್ಞಾನ ದಾಸೋಹ ಮೇಲೆ ನಂಬಿಕೆ ಇಟ್ಟು, ಬಾಡಿಗೆ ಕಟ್ಟಡ ತೆಗೆದುಕೊಂಡು, ಉಚಿತ ವಸತಿ ಶಾಲೆ ಆರಂಭಿಸಿದರು,ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಮಕ್ಕಳನ್ನು ಕರೆತಂದು ವಸತಿ ಶಾಲೆಗೆ ಸೇರಿಸಿದರು.

ಜನ ತಮ್ಮ ಕಷ್ಟದ ದಿನಗಳಲ್ಲಿ ಬಂದು ಆಶ್ರಮದ ಬಾಗಿಲು ತಟ್ಟಿದ್ದರು. ಚಾಮರಾಜನಗರ, ಸತ್ಯಮಂಗಲ, ತಾಳವಾಡಿ ಜಿಲ್ಲೆಗಳ ಹಿಂದುಳಿದ ವರ್ಗಗಳ ಭಕ್ತಾದಿಗಳಿಗೆ ಉಚಿತ ಶಿಕ್ಷಣ ನೀಡಿದ್ದಾರೆ.

Stay up to date on all the latest ಭವಿಷ್ಯ-ಆಧ್ಯಾತ್ಮ news with The Kannadaprabha App. Download now
facebook twitter whatsapp