ನರಕ ಚತುರ್ದಶಿ ದಿನ ಎಣ್ಣೆ ಸ್ನಾನ ಮಾಡುವುದೇಕೆ, ಆಚರಣೆ ಹೇಗೆ?

ನಮ್ಮಲ್ಲಿ ವ್ರತ ಮತ್ತು ಉತ್ಸವ ಎಂದು ಎರಡು ವಿಧಗಳಿರುತ್ತವೆ. ಉತ್ಸವ ಆಚರಣೆಗಳಿರುವ ಹಬ್ಬಗಳಲ್ಲೆಲ್ಲಾ ಅಭ್ಯಂಗ ಇರುತ್ತದೆ. ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಮೈಗೆ ಒಳ್ಳೆಯದು.

Published: 13th November 2020 12:00 AM  |   Last Updated: 13th November 2020 06:34 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : Online Desk

ನಮ್ಮಲ್ಲಿ ವ್ರತ ಮತ್ತು ಉತ್ಸವ ಎಂದು ಎರಡು ವಿಧಗಳಿರುತ್ತವೆ. ಉತ್ಸವ ಆಚರಣೆಗಳಿರುವ ಹಬ್ಬಗಳಲ್ಲೆಲ್ಲಾ ಅಭ್ಯಂಗ ಇರುತ್ತದೆ. ಎಣ್ಣೆ ಹಚ್ಚಿ ಸ್ನಾನ ಮಾಡಿದರೆ ಮೈಗೆ ಒಳ್ಳೆಯದು.

ಮನೆಯಲ್ಲಿರುವ ಹಿರಿಯ ತಾಯಿ, ಅಜ್ಜಿ ಯಾರೇ ಮಹಿಳೆ ಮನೆಯ ಎಲ್ಲಾ ಸದಸ್ಯರ ತಲೆಗೆ ಎಣ್ಣೆಹಚ್ಚಿ ಶಾಸ್ತ್ರ ಮಾಡುತ್ತಾರೆ. ಆಮೇಲೆ ಎಲ್ಲರೂ ಮೈಕೈ-ಕಾಲುಗಳಿಗೆ ಎಣ್ಣೆಹಚ್ಚಿಕೊಂಡು ಸ್ವಲ್ಪ ಹೊತ್ತು ಬಿಟ್ಟು ಬಿಸಿಬಿಸಿಯಾದ ನೀರಿನಲ್ಲಿ ಸ್ನಾನ ಮಾಡುತ್ತಾರೆ.

ನಕರಾಸುರ ತುಂಬಾ ದುಷ್ಠ ಮತ್ತು ಕಾಮುಕನಾಗಿದ್ದ, ಕಾಮಪಿಶಾಚಿಯಾದ ಆತನು 16 ಸಾವಿರ ಹೆಣ್ಣುಮಕ್ಕಳನ್ನು ಅಂತಃಪುರಕ್ಕೆ ಕರೆದುಕೊಂಡು ಹೋಗಿ ಬಂಧಿಸಿಟ್ಟು ಕಾಮಪಶುಗಳಾಗಿ ನೋಡಿಕೊಳ್ಳುತ್ತಿದ್ದ. ಆ ಹೆಣ್ಣುಮಕ್ಕಳು ಅವನ ಬಂಧನದಲ್ಲಿದ್ದು ವಯಸ್ಸಾಗಿ ಮಕ್ಕಳು, ಮೊಮ್ಮಕ್ಕಳಾಗಿ, ಕಾಯಿಲೆ ಬಿದ್ದು ನರಳುತ್ತಿರುತ್ತಾರೆ. ಹೀಗೆ ಕಷ್ಟಪಡುತ್ತಿದ್ದ ಹೆಣ್ಣುಮಕ್ಕಳು ಕೃಷ್ಣನನ್ನು ನರಕಾಸುರನಿಂದ ಪಾರು ಮಾಡುವಂತೆ ಬೇಡಿಕೊಳ್ಳುತ್ತಾರೆ. 

ನರಕಾಸುರನ ಪೀಡೆಯಿಂದ ಹೆಣ್ಣುಮಕ್ಕಳು ಬಿಡುಗಡೆಯೇನೋ ಆದರು, ಆದರೆ ತಮ್ಮನ್ನು ಹೊರಗೆ ಸಮಾಜದಲ್ಲಿ ಯಾರು ಸ್ವೀಕರಿಸುತ್ತಾರೆ, ವೈಶ್ಯೆಯರಂತೆ ಕಾಣುತ್ತಾರೆ, ಮರ್ಯಾದೆ ಕೊಡುವುದಿಲ್ಲ ಎಂದು ಕೃಷ್ಣನಲ್ಲಿ ಬೇಡಿಕೊಂಡು ತಮಗೆ ದಾರಿ ತೋರಿಸು ಇಲ್ಲದಿದ್ದರೆ ಯಮನ ಕಾಲಿಗೆ ಬಿದ್ದು ಸಾಯುತ್ತೇವೆ ಎನ್ನುತ್ತಾರೆ.

ಆಗ ಕೃಷ್ಣ ಅಷ್ಟೂ ಜನ ಹೆಣ್ಣುಮಕ್ಕಳನ್ನು ಮದುವೆಯಾಗುತ್ತಾನೆ. ಪತ್ನಿಯರು ನೀವು ಎಂದು ಸ್ವೀಕರಿಸುತ್ತಾನೆ, ಆದರೆ ಅಷ್ಟು ಜನರ ಜೊತೆ ಸಂಸಾರ ಮಾಡಲು ಸಾಧ್ಯವಾಗುವುದಿಲ್ಲವಲ್ಲ, ಹಾಗಾಗಿ ಅವರಿಗೆಲ್ಲಾ ಒಂದು ಸ್ಥಾನಮಾನ ಕೊಟ್ಟು ಆಜನ್ಮಪರ್ಯಂತ ಊಟ ಹಾಕಿ, ರಕ್ಷಣೆ ಕೊಡುತ್ತಾನೆ.ಹೆಣ್ಣುಮಕ್ಕಳ ದುಸ್ಥರವಾದ ಜೀವನ ಹೋಗಿ ಉತ್ತಮವಾಗುತ್ತದೆ. 

ಎಲ್ಲರೂ ನಸುಕಿನಲ್ಲೇ ಎದ್ದು ತೈಲಾಭ್ಯಂಜನ ಮಾಡಿ, ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಅಂದು ಸೂರ್ಯೋದಯ ಕಾಲದಲ್ಲಿ ಮಾಡುವ ಅಂಗಾಂಗ ಸ್ನಾನ ಗಂಗಾಸ್ನಾನಕ್ಕೆ ಸಮ ಎಂಬ ನಂಬಿಕೆಯಿದೆ. ತೈಲ್ಯಾಭ್ಯಂಜನ ಮಾಡುವುದು ಆರೋಗ್ಯಕ್ಕೆ ಸಹ ಒಳ್ಳೆಯದು ಎಂಬ ವೈಜ್ಞಾನಿಕ ಕಾರಣ ಕೂಡ ಇದೆ. 

Stay up to date on all the latest ಭವಿಷ್ಯ-ಆಧ್ಯಾತ್ಮ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp