ನೀವು ಭೇಟಿ ನೀಡಬೇಕಾದ ಭರತ ಭೂಖಂಡದ 51 ಶಕ್ತಿ ಪೀಠಗಳು (ಭಾಗ 2)

ಶಿವನ ಕೋಪಕ್ಕೆ ಇಡೀ ವಿಶ್ವ ಭಸ್ಮವಾಗುವ ಆತಂಕ ಎದುರಾದಾಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳನ್ನಾಗಿ ಕತ್ತರಿಸುತ್ತಾನೆ. ಆಗ ಸತಿಯ ದೇಹದ ಭಾಗಗಳು ಭೂಮಿ ಮೇಲೆ ಬಿದ್ದವು. ಈ ಸ್ಥಳಗಳೇ ಶಕ್ತಿಪೀಠಗಳಾದುವು. ಈ ಶಕ್ತಿಪೀಠಗಳು ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶ(7), ಪಾಕಿಸ್ತಾನ(3), ನೇಪಾಳ(3), ಟಿಬೆಟ್(1) ಮತ್ತು ಶ್ರೀಲಂಕಾ(1) ದೇಶಗಳಲ್ಲಿವೆ.
ನೀವು ಭೇಟಿ ನೀಡಬೇಕಾದ ಭರತ ಭೂಖಂಡದ 51 ಶಕ್ತಿ ಪೀಠಗಳು (ಭಾಗ 2)

ತಂದೆ ದಕ್ಷನ ಇಚ್ಛೆಗೆ ವಿರುದ್ಧವಾಗಿ ಶಿವನನ್ನು ವರಿಸಿದ್ದಕ್ಕಾಗಿ ಸತಿಯನ್ನು ತಂದೆ ಅವಮಾನಿಸುತ್ತಾನೆ. ಅವಮಾನ ತಾಳಲಾರದೆ ಸತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಸತಿ ಮರಣದ ನಂತರ ಕೋಪೋದ್ರಿಕ್ತನಾಗುವ ಶಿವ ಆಕೆಯ ದೇಹವನ್ನು ಹೊತ್ತುಕೊಂಡು ವಿಶ್ವ ಪರ್ಯಟನೆಗೆ ಹೊರಡುತ್ತಾನೆ. ಶಿವನ ಕೋಪಕ್ಕೆ ಇಡೀ ವಿಶ್ವ ಭಸ್ಮವಾಗುವ ಆತಂಕ ಎದುರಾದಾಗ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸತಿಯ ದೇಹವನ್ನು 51 ತುಂಡುಗಳನ್ನಾಗಿ ಕತ್ತರಿಸುತ್ತಾನೆ. ಆಗ ಸತಿಯ ದೇಹದ ಭಾಗಗಳು ಭೂಮಿ ಮೇಲೆ ಬಿದ್ದವು. ಈ ಸ್ಥಳಗಳೇ ಶಕ್ತಿಪೀಠಗಳಾದುವು. ಈ ಶಕ್ತಿಪೀಠಗಳನ್ನು ಕಾಯಲು ಶಿವ ತನ್ನ ಅಂಶದಲ್ಲೇ ಭೈರವಂದಿರನ್ನು ಸೃಷ್ಟಿಸಿ ಆಯಾ ಸ್ಥಳಗಳಲ್ಲಿ ನೇಮಿಸಿದನು. ಈ ಶಕ್ತಿಪೀಠಗಳು ಭಾರತ ಮಾತ್ರವಲ್ಲದೆ, ಬಾಂಗ್ಲಾದೇಶ(7), ಪಾಕಿಸ್ತಾನ(3), ನೇಪಾಳ(3), ಟಿಬೆಟ್(1) ಮತ್ತು ಶ್ರೀಲಂಕಾ(1) ದೇಶಗಳಲ್ಲಿ ಹಂಚಿ ಹೋಗಿವೆ. 51 ಶಕ್ತಿ ಪೀಠಗಳಲ್ಲಿ ಎರಡನೇ ಭಾಗವಾಗಿ 26 ಶಕ್ತಿಪೀಠಗಳ ಪರಿಚಯ ಇಲ್ಲಿದೆ. ಆಯಾ ಶಕ್ತಿಪೀಠಗಳಲ್ಲಿ ಬಿದ್ದ ಸತಿಯ ಭಾಗಗಳನ್ನೂ ನೀಡಲಾಗಿದೆ.

ಮೊದಲ ಭಾಗದಿಂದ...

26. ದೇವಿ ದಂತೇಶ್ವರಿ ಶಕ್ತಿಪೀಠ 
ಬಸ್ತರ್, ಚತ್ತೀಸ್ ಗಢ
ಹಲ್ಲುಗಳು
ಭೈರವ: ಕಪಾಲ ಭೈರವ

ಭೇಟಿ ನೀಡಲು ಅತ್ಯುತ್ತಮ ಸಮಯ- ಚಳಿಗಾಲ ಮತ್ತು ಮಳೆಗಾಲ
ಹತ್ತಿರದ ಏರ್ ಪೋರ್ಟ್- ಜಗದಾಲ್ ಪುರ್ (80 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಜಗದಾಲ್ ಪುರ್  

27. ಭ್ರಮರಿ ದೇವಿ ಶಕ್ತಿಪೀಠ
ತ್ರಯಂಬಕೇಶ್ವರ್, ಮಹಾರಾಷ್ಟ್ರ
ಗದ್ದ
ಭೈರವ: ವಿಕೃತಾಕ್ಷ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ನಾಸಿಕ್ (24ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ನಾಸಿಕ್

28. ಚಂದ್ರಭಾಗ ಶಕ್ತಿಪೀಠ
ಪ್ರಭಸ್, ಗುಜರಾತ್
ಹೊಟ್ಟೆ
ಭೈರವ: ವಕ್ರತುಂಡ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕಶೊಡ್ (57 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ವೆರಾವಲ್ (8 ಕಿ.ಮೀ)

29. ದೇವಿ ಅಂಬಾಜಿ ಶಕ್ತಿಪೀಠ
ಬನಸ್ ಕಾಂತ, ಗುಜರಾತ್ 
ಹೃದಯದ ಒಂದು ಭಾಗ
ಭೈರವ: ಬಟುಕ್ ಭೈರವ

ಭೇಟಿ ನೀಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್- ಅಕ್ಟೋಬರ್, ಚಳಿಗಾಲ
ಹತ್ತಿರದ ಏರ್ ಪೋರ್ಟ್- ಅಹಮದಾಬಾದ್ (180 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಮೌಂಟ್ ಅಬು (45 ಕಿ.ಮೀ)

30. ಕನ್ಯಾಶ್ರಮ್ ಶಕ್ತಿಪೀಠ
ಕನ್ಯಾಕುಮಾರಿ, ತಮಿಳುನಾಡು 
ಬೆನ್ನುಹುರಿ
ಭೈರವ: ನಿಮಿಷ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ತಿರುವನಂತಪುರಂ (67 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಕನ್ಯಾಕುಮಾರಿ 

31. ಇಂದ್ರಾಕ್ಷಿ ಶಕ್ತಿಪೀಠ
ನೈನತಿವು, ಶ್ರೀಲಂಕಾ
ಕಾಲ್ಗೆಜ್ಜೆ
ಭೈರವ: ರಾಕ್ಷಸೇಶ್ವರ

ಭೇಟಿ ನೀಡಲು ಅತ್ಯುತ್ತಮ ಸಮಯ- ವರ್ಷವಿಡೀ
ಹತ್ತಿರದ ಏರ್ ಪೋರ್ಟ್- ಜಾಫ್ನಾ (30 ನಿಮಿಷ ಬೋಟ್ ರೈಡ್)

32. ಕಾಮಾಕ್ಷಿ ಅಮ್ಮನ್ ಶಕ್ತಿಪೀಠ
ಕಾಂಚೀಪುರಂ, ತಮಿಳುನಾಡು 
ಕೆನ್ನೆ
ಭೈರವ: ವಿಶ್ವೇಶ್

ಭೇಟಿ ನೀಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಚೆನ್ನೈ (75 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಕಾಂಚೀಪುರಂ

33. ರಾಕಿನಿ ದೇವಿ ಶಕ್ತಿಪೀಠ
ರಾಜಮಂಡ್ರಿ, ಆಂಧ್ರಪ್ರದೇಶ 
ಕೆನ್ನೆ
ಭೈರವ: ದಂಡಪಾಣಿ

ಭೇಟಿ ನೀಡಲು ಅತ್ಯುತ್ತಮ ಸಮಯ ಆಗಸ್ಟ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ರಾಜಮಂಡ್ರಿ (13 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ರಾಜಮಂಡ್ರಿ (2 ಕಿ.ಮೀ)

34. ಭ್ರಮರಾಂಬಿಕಾ ದೇವಿ ಶಕ್ತಿಪೀಠ
ಶ್ರೀಶೈಲಂ, ಆಂಧ್ರಪ್ರದೇಶ 
ಕುತ್ತಿಗೆ
ಭೈರವ: ಸಂಬರಾನಂದ

ಭೇಟಿ ನೀಡಲು ಅತ್ಯುತ್ತಮ ಸಮಯ ಸೆಪ್ಟೆಂಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಹೈದರಾಬಾದ್ (230 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಮರ್ಕಾಪುರ್ (91 ಕಿ.ಮೀ)

35. ಅಟ್ಟಹಾಸ್ ಫುಲ್ಲರ ಶಕ್ತಿಪೀಠ
ಲಬ್ ಪುರ್, ಪಶ್ಚಿಮ ಬಂಗಾಳ 
ಕೆಳತುಟಿ
ಭೈರವ: ವಿಶ್ವೇಶ್

ಭೇಟಿ ನೀಡಲು ಅತ್ಯುತ್ತಮ ಸಮಯ- ಆಗಸ್ಟ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕೋಲ್ಕತಾ (160 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಲಬ್ ಪುರ್ (30 ಕಿ.ಮೀ)

36. ಬಹುಳ ಶಕ್ತಿಪೀಠ
ಕೇತು ಗ್ರಾಮ್, ಪಶ್ಚಿಮ ಬಂಗಾಳ 
ಎಡ ತೋಳು
ಭೈರವ: ಭಿರುಕ್

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕೋಲ್ಕತಾ (190 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಕತ್ವಾ (8 ಕಿ.ಮೀ)

37. ಮಹಿಷ ಮರ್ಧಿನಿ ಶಕ್ತಿಪೀಠ
ಬಕ್ರೇಶ್ವರ್, ಪಶ್ಚಿಮ ಬಂಗಾಳ 
ಕಣ್ಣುಗಳ ನಡುವಿನ ಭಾಗ
ಭೈರವ: ವಕ್ರನಾಥ

ಭೇಟಿ ನೀಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಕೋಲ್ಕತಾ (200 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಸಿಯುರಿ (20 ಕಿ.ಮೀ)

38. ಮಾ ಭಬಾನಿ ಶಕ್ತಿಪೀಠ
ಕರತೊಯ, ಬಾಂಗ್ಲಾದೇಶ 
ಎಡ ಕಾಲ್ಗೆಜ್ಜೆ
ಭೈರವ: ವಾಮನ್

ಭೇಟಿ ನೀಡಲು ಅತ್ಯುತ್ತಮ ಸಮಯ- ವರ್ಷವಿಡೀ
ಹತ್ತಿರದ ಏರ್ ಪೋರ್ಟ್- ಬೊಗ್ರಾ (60 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಸಂತಹರ್ (77 ಕಿ.ಮೀ)
ಹತ್ತಿರದ ಬಸ್ ನಿಲ್ದಾಣ- ಶೇರ್ ಪುರ್ (28 ಕಿ.ಮೀ)

39. ಜಶೋರೇಶ್ವರಿ ದೇವಿ ಶಕ್ತಿಪೀಠ
ಜೆಸ್ಸೋರ್, ಬಾಂಗ್ಲಾದೇಶ 
ಪಾದ
ಭೈರವ: ಚಂಡ

ಭೇಟಿ ನೀಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಜೆಸ್ಸೋರ್ (126 ಕಿ.ಮೀ)


40. ಕಾಳಿ ಘಾಟ್ ಶಕ್ತಿಪೀಠ
ಕೋಲ್ಕತಾ, ಪಶ್ಚಿಮ ಬಂಗಾಳ 
ತಲೆ
ಭೈರವ: ನಕುಲೇಶ್ವರ್

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಕೋಲ್ಕತ 
ಹತ್ತಿರದ ರೈಲ್ವೇ ನಿಲ್ದಾಣ- ಹೌರಾ 

41. ಕಂಕಲಿತಾಲ ಶಕ್ತಿಪೀಠ
ಬೋಲ್ ಪುರ್, ಪಶ್ಚಿಮ ಬಂಗಾಳ 
ಸೊಂಟ
ಭೈರವ: ರುರು

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕೋಲ್ಕತ (135 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಬೋಲ್ ಪುರ್ (8 ಕಿ.ಮೀ)

42. ಕಿರೀಟೇಶ್ವರಿ ದೇವಿ ಶಕ್ತಿಪೀಠ
ಮುರ್ಷಿದಾಬಾದ್, ಪಶ್ಚಿಮ ಬಂಗಾಳ 
ಕಿರೀಟ
ಭೈರವ: ಸಂಗ್ವರ್ತ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕೋಲ್ಕತ (239 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ದಹಪರ (3 ಕಿ.ಮೀ)

43. ರತ್ನಾವಳಿ ಶಕ್ತಿಪೀಠ
ಹೂಗ್ಲಿ, ಪಶ್ಚಿಮ ಬಂಗಾಳ 
ಬಲ ಭುಜ
ಭೈರವ: ಘಂಟೇಶ್ವರ್

ಭೇಟಿ ನೀಡಲು ಅತ್ಯುತ್ತಮ ಸಮಯ- ಆಗಸ್ಟ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕೋಲ್ಕತ (78 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಹೌರಾ (74 ಕಿ.ಮೀ)

44. ಭ್ರಮರಿ ದೇವಿ ಶಕ್ತಿಪೀಠ
ತ್ರಿಸ್ರೋಟ, ಪಶ್ಚಿಮ ಬಂಗಾಳ 
ಎಡಗಾಲು
ಭೈರವ: ಈಶ್ವರ

ಭೇಟಿ ನೀಡಲು ಅತ್ಯುತ್ತಮ ಸಮಯ- ಮೇ- ಜುಲೈ, ಸೆಪ್ಟೆಂಬರ್- ಅಕ್ಟೋಬರ್
ಹತ್ತಿರದ ಏರ್ ಪೋರ್ಟ್- ಬಾಗ್ಡೋಗ್ರ (47 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಜಲ್ಪಾಯ್ ಗುರಿ (20 ಕಿ.ಮೀ)

45. ನಂದಿಕೇಶ್ವರಿ ಶಕ್ತಿಪೀಠ
ಸೈನಿತಿಯ, ಪಶ್ಚಿಮ ಬಂಗಾಳ 
ಕಂಠಹಾರ
ಭೈರವ: ನಂದಿಕೇಶ್ವರ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಗಸ್ಟ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕೋಲ್ಕತ (190 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಭಿರ್ ಭೂಮ್ (1.5 ಕಿ.ಮೀ)

46. ತಾರತರಿಣಿ ಶಕ್ತಿಪೀಠ
ಗಂಜಾಂ, ಒಡಿಶಾ
ಸ್ಥನ
ಭೈರವ: ತುಮಕೇಶ್ವರ್

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಫೆಬ್ರವರಿ
ಹತ್ತಿರದ ಏರ್ ಪೋರ್ಟ್- ಭುವನೇಶ್ವರ್ (174 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಬ್ರಹ್ಮಪುರ್ (32 ಕಿ.ಮೀ)

47. ಸುಗಂಧ ದೇವಿ ಶಕ್ತಿಪೀಠ
ಶಿಕಾರ್ ಪುರ್, ಬಾಂಗ್ಲಾದೇಶ
ಮೂಗು
ಭೈರವ: ತ್ರಯಂಬಕ್

ಭೇಟಿ ನೀಡಲು ಅತ್ಯುತ್ತಮ ಸಮಯ- ವರ್ಷವಿಡೀ
ಹತ್ತಿರದ ಏರ್ ಪೋರ್ಟ್- ಬರಿಸಲ್ (21 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಎಸ್ಲಾಡಿ (1.5 ಕಿ.ಮೀ)

48. ಬರ್ಗ ಭೀಮಾ ದೇವಿ ಶಕ್ತಿಪೀಠ
ಪೂರ್ವ ಮಿಡ್ನಾಪುರ, ಪಶ್ಚಿಮ ಬಂಗಾಳ 
ಎಡ ಕಾಲ್ಗೆಜ್ಜೆ
ಭೈರವ: ಸರ್ವಾನಂದ

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಕೋಲ್ಕತ (88 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಖರಗ್ ಪುರ್ (85 ಕಿ.ಮೀ)

49. ದೇವಿ ಬಿರಜ ಶಕ್ತಿಪೀಠ
ಜೈಪುರ್, ಒಡಿಶಾ
ಹೊಕ್ಕುಳು
ಭೈರವ: ವರಹ

ಭೇಟಿ ನೀಡಲು ಅತ್ಯುತ್ತಮ ಸಮಯ- ಸೆಪ್ಟೆಂಬರ್- ಅಕ್ಟೋಬರ್
ಹತ್ತಿರದ ಏರ್ ಪೋರ್ಟ್- ಭುವನೇಶ್ವರ್ (125 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಜೈಪುರ್ ಕಿಯೋಝರ್ ರಸ್ತೆ (31 ಕಿ.ಮೀ)

50. ವಿಮಲಾ ದೇವಿ ಶಕ್ತಿಪೀಠ
ಪುರಿ, ಒಡಿಶಾ
ಹಿಮ್ಮಡಿ
ಭೈರವ: ಸಂವರ್ತ

ಭೇಟಿ ನೀಡಲು ಅತ್ಯುತ್ತಮ ಸಮಯ- ಜೂನ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ಭುವನೇಶ್ವರ್ (60 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ಪುರಿ
ಹತ್ತಿರದ ಬಸ್ ನಿಲ್ದಾಣ- ಪುರಿ

51. ದೇವಿ ಜಯದುರ್ಗ ಶಕ್ತಿಪೀಠ
ದಿಯೋಘರ್, ಜಾರ್ಖಂಡ್ 
ಹೃದಯ
ಭೈರವ: ಬೈದ್ಯನಾಥ್

ಭೇಟಿ ನೀಡಲು ಅತ್ಯುತ್ತಮ ಸಮಯ- ಅಕ್ಟೋಬರ್- ಮಾರ್ಚ್
ಹತ್ತಿರದ ಏರ್ ಪೋರ್ಟ್- ದಿಯೋಘರ್ (8 ಕಿ.ಮೀ)
ಹತ್ತಿರದ ರೈಲ್ವೇ ನಿಲ್ದಾಣ- ದಿಯೋಘರ್ (3 ಕಿ.ಮೀ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com