ಉಡುಪಿಯ ಕೃಷ್ಣಾಪುರ ಮಠದಲ್ಲಿ ಪರ್ಯಾಯ ವೈಭವ
ಇಂದು ಮಂಗಳವಾರ ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಸಂಭ್ರಮ. ಕೋವಿಡ್ ನಿರ್ಬಂಧಗಳ ನಡುವೆ ಸರಳವಾಗಿ ಸಾಂಪ್ರದಾಯಿಕವಾಗಿ ಬೆಳಗ್ಗೆಯಿಂದಲೇ ವೈಭವಯುತವಾಗಿ ಪರ್ಯಾಯ ಆಚರಣೆ, ಮೆರವಣಿಗೆ ಸಾಗಿದವು.
Published: 18th January 2022 10:22 AM | Last Updated: 18th January 2022 01:32 PM | A+A A-

ಉಡುಪಿ ಪರ್ಯಾಯ ಉತ್ಸವ
ಉಡುಪಿ: ಇಂದು ಮಂಗಳವಾರ ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಸಂಭ್ರಮ. ಕೋವಿಡ್ ನಿರ್ಬಂಧಗಳ ನಡುವೆ ಸರಳವಾಗಿ ಸಾಂಪ್ರದಾಯಿಕವಾಗಿ ಬೆಳಗ್ಗೆಯಿಂದಲೇ ವೈಭವಯುತವಾಗಿ ಪರ್ಯಾಯ ಆಚರಣೆ, ಮೆರವಣಿಗೆ ಸಾಗಿದವು.
ಪ್ರತಿ ಬಾರಿ ಪರ್ಯಾಯ ಮೆರವಣಿಗೆಗೆ ಸೊಬಗು ತುಂಬುತ್ತಿದ್ದ ಸ್ಥಬ್ಧಚಿತ್ರ ಪ್ರದರ್ಶನಕ್ಕೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ಹೇರಲಾಗಿದ್ದು ಮಠದಿಂದ ಬೆರಳೆಣಿಕೆಯ ಸ್ಥಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಸಾಂಪ್ರದಾಯಿಕವಾಗಿ ಮನೋಹರವಾಗಿ ಮೆರವಣಿಗೆ ರಥಬೀದಿ ತಲುಪಿದಾಗ ಸ್ವಾಮೀಜಿಗಳು ಪಲ್ಲಕ್ಕಿಯಿಂದ ಇಳಿದು ರಥಬೀದಿಯಲ್ಲಿ ನಡೆದುಕೊಂಡು ಹೋಗಿ ಮುಂದೆ ಸಾಗಿದರು.
Sri Vidyasagara Theertha Swamiji of Sri Krishnapura Matha ascended the Paryaya Peeta in the wee hours on Tuesday at 5.55 am. The Seer expressed his gratitude for making this time Udupi Paryaya a simple event due to the shadow of pandemic@XpressBengaluru @KannadaPrabha pic.twitter.com/oLhEJW7aej
— Prakash Samaga (@prakash_TNIE) January 18, 2022
ಉಡುಪಿ ಕೃಷ್ಣಮಠದಲ್ಲಿ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಕನಕನ ಕಿಂಡಿ ಮೂಲಕ ಕೃಷ್ಣ ದರ್ಶನ ಪಡೆದರು.
ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಕೃಷ್ಣನ ಪೂಜೆಯ ಅಧಿಕಾರ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರಿಗೆ ಇಂದು ನಡೆಯುವ ಪರ್ಯಾಯೋತ್ಸವದಲ್ಲಿ ಹಸ್ತಾಂತರವಾಗಲಿದೆ.
— DD Chandana News (@DDChandanaNews) January 18, 2022
2 ವರ್ಷಗಳ ಕಾಲ ಪೂಜೆಯ ಅಧಿಕಾರ ಇರಲಿದೆ. ಅದಮಾರು ಮಠದ ಈಶಪ್ರಿಯ ತೀರ್ಥರ ಪರ್ಯಾಯ ಅಂತ್ಯಗೊಂಡಿದೆ. pic.twitter.com/Bf4rEOuOyt
ಉಡುಪಿ ಶ್ರೀಕೃಷ್ಣ ಮಠದ (Shri Krishna Matha) ಪೂಜಾಧಿಕಾರ ಹಸ್ತಾಂತರ ಸಮಾರಂಭವಾದ ಪರ್ಯಾಯೋತ್ಸವ ಇದಾಗಿದ್ದು, 2 ವರ್ಷಕ್ಕೊಮ್ಮೆ ನಡೆಯುವ ಈ ಸಮಾರಂಭದಲ್ಲಿ ಪ್ರಸ್ತುತ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗೆ ಪೊಡವಿಗೊಡೆಯ ಶ್ರೀಕೃಷ್ಣನ ಪೂಜಾಧಿಕಾರವನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಿದರು.
ಮಠದೊಳಗಿನ ಧಾರ್ಮಿಕ ಸಂಪ್ರದಾಯಗಳನ್ನು ಹೊರತುಪಡಿಸಿ, ಮಠದ ಹೊರಗಿನ ಸಾಂಸ್ಕೃತಿಕ ಗೌಜುಗದ್ದಲಗಳಿಗೆ ಕಡಿವಾಣ ಹಾಕಲಾಗಿತ್ತು. ಈ ಮೂಲಕ ಜನರ ಭಾಗವಹಿಸುವಿಕೆ ಇಲ್ಲದೆ ಸರಳ ಪರ್ಯಾಯೋತ್ಸವ ನಡೆಸಲಾಯಿತು. ರಥಬೀದಿಯನ್ನು ದೀಪಾಲಂಕೃತಗೊಳಿಸಲಾಗಿತ್ತು. ಉಡುಪಿಯ ಬೀದಿಗಳು ದುರಸ್ತಿಗೊಂಡು ಸ್ವಚ್ಛಗೊಳಿಸಲಾಗಿತ್ತು. ಪರ್ಯಾಯ ಮೆರವಣಿಗೆ ಸಾಗುವ ರಸ್ತೆಯಲ್ಲಿ ಹತ್ತಾರು ಕಮಾನುಗೋಪುರಗಳನ್ನೂ ನಿರ್ಮಿಸಲಾಗಿತ್ತು.
ಇಂದು ನಸುಕಿನ ಜಾವ 5.25ಕ್ಕೆ ಶ್ರೀಕೃಷ್ಣಮಠ ಪ್ರವೇಶ ಮಾಡಿ ದೇವರ ದರ್ಶನ ಪಡೆದ ಶ್ರೀಗಳಿಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಬೆಳಗ್ಗೆ 5.45ಕ್ಕೆ ಶ್ರೀ ಮನ್ಮಧ್ವಾಚಾರ್ಯ ಕರಾರ್ಚಿತ ಅಕ್ಷಯಪಾತ್ರ ಬೆಳ್ಳಿಯ ಸಟ್ಟುಗ ಹಸ್ತಾಂತರಿಸಿ, ಬೆಳಗ್ಗೆ 5.55ಕ್ಕೆ ಪವಿತ್ರ ಸರ್ವಜ್ಞ ಪೀಠಾರೋಹಣಗೊಳಿಸಿದರು.
Sand artist Hareesh Saga made a sand sculpture of Sri Vidyasagara Theertha Swamiji at Malpe beach on Monday@XpressBengaluru
— Prakash Samaga (@prakash_TNIE) January 17, 2022
Paryaya pic.twitter.com/rSZ5s8wIUP