ಮೀನ

ಆಯ್ಕೆ ಹಾಗೂ ನಿರ್ಧಾರಗಳಿಗೂ ಮುನ್ನ ಸಾಕಷ್ಟು ಬಾರಿ ಆಲೋಚಿಸಿ. ಹೆಚ್ಚು ಪ್ರಾಯೋಗಿಕವಾಗಿರಿ. ಮಕ್ಕಳ ಮೇಲೆ ಹೆಚ್ಚಿನ ಕಾಳಜಿವಹಿಸಿ. ನಿಮ್ಮನ್ನು ಹುಡುಕಿ ಬರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಸಮಯವನ್ನು ಉತ್ತಮವಾಗಿ ಬಳಕೆ ಮಾಡಿ. ಅದು ನಿಮ್ಮ ಅದೃಷ್ಟವನ್ನೂ ಬದಲಿಸಲಿದೆ. 

ನೀವು ಹೊಸ ವ್ಯವಹಾರ ಅಥವಾ ಪಾಲುದಾರಿಕೆಯಲ್ಲಿ ವ್ಯಾಪಾರ ಶುರು ಮಾಡಬಹುದು. ಹೊಸ ಯೋಜನೆಗಳಲ್ಲಿ ನೀವು ಉತ್ಸಾಹ ಮತ್ತು ವಿಶ್ವಾಸ ಹೊಂದಿದ್ದೀರಿ. ಆದ್ದರಿಂದ ಭವಿಷ್ಯದಲ್ಲಿ ಯಶಸ್ಸು ಸಾಧಿಸಬಹುದು. ಕೋರ್ಟ್ ನಲ್ಲಿ ವ್ಯಾಜ್ಯಗಳಿದ್ದರೆ ಜಯ ನಿಮ್ಮದಾಗುತ್ತದೆ. ಇತರರ ಬಗ್ಗಗೆ ನೀವು ತೋರಿಸುವ ಕಾಳಜಿ, ವಿಶ್ವಾಸ ನಿಮಗೆ ಭವಿಷ್ಯದಲ್ಲಿ ಪೂರಕವಾಗಿ ಪರಿಣಮಿಸಬಹುದು. ಓದಿನ ಬಗೆಗಿನ ಶ್ರದ್ಧೆ ಮುಂದುವರಿಯಲಿದೆ.

ರಾಶಿ ಭವಿಷ್ಯ