ವೃಶ್ಚಿಕ
ಮಾತಿನ ಮೇಲೆ ಹಿಡಿತವಿರಲಿ. ಸಂಬಂಧಿಕರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ನಿರ್ಧಾರಗಳ ತೆಗೆದುಕೊಳ್ಳಲು ಇದು ಸಕಾಲವಲ್ಲ. ಮಕ್ಕಳು ಹಾಗೂ ಕುಟುಂಬ ಸದಸ್ಯರಿಗೆ ನಿಮ್ಮ ಸಮಯ ನೀಡಿ.
ನೀವು ಹೊಸ ವ್ಯವಹಾರ ಅಥವಾ ಪಾಲುದಾರಿಕೆಯಲ್ಲಿ ವ್ಯಾಪಾರ ಶುರು ಮಾಡಬಹುದು. ಹೊಸ ಯೋಜನೆಗಳಲ್ಲಿ ನೀವು ಉತ್ಸಾಹ ಮತ್ತು ವಿಶ್ವಾಸ ಹೊಂದಿದ್ದೀರಿ. ಆದ್ದರಿಂದ ಭವಿಷ್ಯದಲ್ಲಿ ಯಶಸ್ಸು ಸಾಧಿಸಬಹುದು. ಕೋರ್ಟ್ ನಲ್ಲಿ ವ್ಯಾಜ್ಯಗಳಿದ್ದರೆ ಜಯ ನಿಮ್ಮದಾಗುತ್ತದೆ. ಇತರರ ಬಗ್ಗಗೆ ನೀವು ತೋರಿಸುವ ಕಾಳಜಿ, ವಿಶ್ವಾಸ ನಿಮಗೆ ಭವಿಷ್ಯದಲ್ಲಿ ಪೂರಕವಾಗಿ ಪರಿಣಮಿಸಬಹುದು. ಓದಿನ ಬಗೆಗಿನ ಶ್ರದ್ಧೆ ಮುಂದುವರಿಯಲಿದೆ.